ವಿಜೃಂಭಣೆಯಿಂದ ಜರುಗಿದ ಮುತ್ತಗಿ ಗೌರಿಶಂಕರ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದ ಗೌರಿಶಂಕರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಗೌರಿಶಂಕರ ಕನ್ನಡ ಕಾನ್ವೆಂಟ್ ಪ್ರಾಥಮಿಕ ಶಾಲೆ ಮುತ್ತಗಿ ಮತ್ತು ಗೌರಿಶಂಕರ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಏಳನೇಯ ಮತ್ತು ಹತ್ತನೇಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಇಂದು ಶಾಲಾ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಿತು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಆರ್ ಎನ್ ಸೂಳಿಭಾವಿ ಅವರು ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳೇ ಮುಂದಿನ ಭವಿಷ್ಯದ ಆಸ್ತಿ,ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು,ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರುಗಿದವು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ.ಪಿ.ಎಲ್ ಹಿರೇಮಠ್, ವಿಠ್ಠಲ್ ದೇವಣಗಾಂವಿ ನಿವೃತ್ತ ಉಪನ್ಯಾಸಕರುಗಳು ಹಾಗೂ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ಎಚ್ ಮುಲ್ಲಾ , ಕಾನ್ವೆಂಟ್ ಶಾಲೆಯ ಮುಖ್ಯ ಗುರುಗಳಾದ ಶ್ರೀ ಹೆಚ್.ಎ. ಕುಂದರಗಿ, ಗೌರಿಶಂಕರ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯ ಗುರು ಮಾತೆಯಾದ ಸುನಿತಾ ಯರನಾಳ,
ಗೌರಿಶಂಕರ ವಿದ್ಯಾ ಸಂಸ್ಥೆಯ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಮುತ್ತಗಿ ಗ್ರಾಮದ ಗುರು ಹಿರಿಯರು, ಪಾಲಕ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಸಂಸ್ಥೆಯ ಅಧ್ಯಕ್ಷರಿಗೆ ಹಾಗೂ ಶಿಕ್ಷಕ ವೃಂದಕ್ಕೆ ವಿದ್ಯಾರ್ಥಿಗಳ ಪಾಲಕರು ಪ್ರಶಂಸೆಯನ್ನು ವ್ಯಕ್ತಪಡಿಸಿದರು, ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ್ ಕಳ್ಳಿಗುಡ್ಡದ ನಿರ್ವಹಿಸಿದರು, ಸ್ವಾಗತವನ್ನು ಎ ಎಚ್ ಮುಲ್ಲಾ ಗುರುಗಳು ನೆರವೇರಿಸಿದರು ಹಾಗೂ ಮಾಲಾರ್ಪಣೆಯನ್ನು ಶಿವಯೋಗಿಮಠ ಸರ್ ಮಾಡಿದರು, ಮತ್ತು ವರದಿ ವಾಚನವನ್ನು ಬಿ.ಎಮ್ ,ಗೊಳಸಂಗಿ ವಾಚಿಸಿದರು ಹಾಗೂ ಸನ್ಮಾನ ಕಾರ್ಯಕ್ರಮವನ್ನು ಪಿ ಬಿ ಪಾಟೀಲ್ ಶಿಕ್ಷಕರು ನಿರ್ವಹಿಸಿದರು. ಎಂ ಎಸ್ ಪ್ರಭಾಕರ್ ವಂದಿಸಿದರು.

error: Content is protected !!