ಹುಕ್ಕೇರಿ ಬೆಳಗಾಂವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬು.ಆಲೂರ ವಲಯದ ಹೊನ್ನಿಹಳ್ಳಿ ಗ್ರಾಮದಲ್ಲಿ ಪೊಷಣ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಹೊಳೆಪ್ಪ. ಎಚ್. ಮಾತನಾಡಿ ತಾಲ್ಲೂಕಿನಾದ್ಯಂತ ಷೋಷಣ ಮಾಸಾಚರಣೆಯನ್ನು ಆಚರಿಸಲಾಗುತ್ತಿದ್ದು ಪೌಷ್ಟಿಕ ಮತ್ತು ಸಮತೋಲನ ಆಹಾರ ಸೇವನೆಯಿಂದ ಅಪೌಷ್ಟಿಕತೆ ಹಾಗೂ ಮಹಿಳೆಯರ ಮತ್ತು ಮಕ್ಕಳಲ್ಲಿನ ರಕ್ತ ಹೀನತೆಯನ್ನು ಹೋಗಲಾಡಿಸಬಹುದು ಪೋಷಣ ಮಾಸಾಚರಣೆಯ, ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.ನೈಸರ್ಗಿಕವಾಗಿ ಬೆಳೆದ ಆಹಾರ ಸೇವನೆ ಉತ್ತಮ ಮಕ್ಕಳ ಬೆಳವಣಿಗೆಯ ಬಗ್ಗೆ ಗಮನಹರಿಸಬೇಕು.ಬಾಲ್ಯ ವಿವಾಹ ತಡೆಗಟ್ಟಲು ಸಾರ್ವಜನಿಕರು ಕೈಜೋಡಿಸಬೇಕು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೇಳಿದರು, ಎಸಿಡಿಪಿಓ ಶ್ರೀಮತಿ ಸುನಂದ ಯಮಕನಮರಡಿರವರು, ಹಿರಿಯ ಮೇಲ್ವಿಚಾರಕರಾದ ಸುರೇಖಾ ಪಾಟೀಲ್, ಶ್ರೀಮತಿ ಗೀತಾ ಕಾಂಬಳೆರವರು ಮೇಲ್ವಿಚಾರಕರಾದ N.k ಗುರುವ , ಶ್ರೀಮತಿ.K .ಮಾಳಗೆ ,ಶ್ರೀಮತಿ ಆಯಿಶಾ ಮುಲ್ಲಾ, ಶ್ರೀಮತಿ ಪರ್ವೀನ್ ನದಾಫ್, ಶ್ರೀಮತಿ ಭಾರತಿ ಕೊರವಿ, ರೇಣುಕಾ ರೆಡ್ಡೆರ ,ಶ್ರೀಮತಿ ಶೋಭಾ ಬಸ್ತವಾಡೆ ಸುಜಾತಾ ಪಾಶ್ಚಾಪೂರ, ಪ್ರಮಿಳಾ ಚೌಗಲಾ ರವರು ಕೊಣನಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದ ಮಠಪತಿಯವರು ಹಾಗೂ ಸದಸ್ಯರು ಮತ್ತಿವಾಡ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ,ಹಿಟ್ನಿ ಗ್ರಾಮ ಪಂಚಾಯಿತಿ ಪಿಡಿಓ ರವರು ಕೊಣನಕೇರಿ ಮತ್ತು ಹೊನ್ನಿಹಳ್ಳಿಯ ಶಾಲಾ ಮುಖ್ಯೋಪಾಧ್ಯಾಯರು, ಸ್ಪೂರ್ತಿ ಸಂಸ್ಥೆಯ ವತಿಯಿಂದ ಶ್ರೀಮತಿ ಉಮಾ ಕೊಟಬಾಗಿರವರು ಗರ್ಭಿಣಿಯರು, ಮಕ್ಕಳು, ತಾಯಂದಿರು, ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಹಾಗೂ ಪತ್ರಿಕಾ ಮಾಧ್ಯಮದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಅನ್ನ ಪ್ರಾಶನ್ಯ,ಮಕ್ಕಳಿಂದ ಸಸಿ ನೆಡುವ ಮುಖಾಂತರ ಹುಟ್ಟುಹಬ್ಬ,, ಗರ್ಭಿಣಿಯರ ಸೀಮಂತ ಕಾರ್ಯಕ್ರಮ, ಭಾಗ್ಯಲಕ್ಷ್ಮಿ ಫಲಾನುಭವಿಗಳಿಂದ ಯಕ್ಷಗಾನ, ಹಾಗೂ ಅಂಗನವಾಡಿ ಮಕ್ಕಳಿಂದ ಹಳ್ಳಿ ಸೊಗಡು ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ವರದಿ : ಸದಾನಂದ ಎಚ್