ಸಿದ್ದರಾಮಯ್ಯ ಕಳಂಕಿತ ವ್ಯಕ್ತಿ ಆಗಲು ಸಾಧ್ಯವಿಲ್ಲ:ಎಸ್ ಟಿ ಪಾಟೀಲ್

ಬೀಳಗಿ : ಸಿಎಂ ಸಿದ್ದರಾಮಯ್ಯನವರು ಕಳಂಕಿತ ವ್ಯಕ್ತಿ ಆಗಲು ಸಾಧ್ಯವಿಲ್ಲ ಇದೊಂದು ಅವರ ವಿರುದ್ಧ ಮಾಡಿದ ಷಡ್ಯಂತರ ಎಂದು ಕಾಂಗ್ರೆಸ್ ಮುಖಂಡ ಎಸ್ ಟಿ ಪಾಟೀಲ್ ಹೇಳಿದರು,

ಮುಡಾ’ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿ ಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರಚಂದ್ ಗೆಹೆಲೋಟ ವಿರುದ್ಧ ಜಿಲ್ಲೆಯಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಹೊರಾಟ ವೇಳೆ ತಾಲೂಕಿನ ಹಳೆ ಅನಗವಾಡಿ ಹತ್ತಿರ ಸುದ್ದಿಗಾರರೊಂದಿಗೆ ಮಾತನಾಡಿ,ರಾಜಪಾಲರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ,ಕಾಯ್ದೆ ಬಾಹಿರವಾಗಿ ನೋಟಿಸ್ ಕೊಟ್ಟಿದ್ದಾರೆ ನಾವೆಲ್ಲ ಕಾನೂನಾತ್ಮಕ ಹೋರಾಟ ಮಾಡುವುದಕ್ಕೆ ಗಟ್ಟಿಯಾಗಿದ್ದೇವೆ,

 

ಇಡೀ ದೇಶದಲ್ಲಿ ಇಷ್ಟು ಸ್ವಚ್ಛ ಪ್ರಮಾಣಿಕ ಮತ್ತು ಬಡವರ ಮೇಲೆ ಖಾಳಜಿ ಇರುವ ಮನುಷ್ಯ ಸಿಗಲು ಸಾಧ್ಯವಿಲ್ಲ, ದೇವರಾಜ್ ಅರಸರ ನಂತರದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇವರ ಆಡಳಿತದ ಏಳಿಗೆಯನ್ನ ಸಹಿಸೋಕೆ ಆಗದೆ, ಸ್ಥಿರವಿದ್ದ ಸರ್ಕಾರವನ್ನ ಕೆಡವಿ, ಎಂ ಎಲ್ ಎ ಗಳನ್ನ ಖರೀದಿಸಿ ಬಿಜೆಪಿ ಸರ್ಕಾರವನ್ನ ರಚಿಸಬೇಕೆಂಬ ಕೆಟ್ಟು ಉದ್ದೇಶದಿಂದ ಮಾಡಿದ ಹುನ್ನಾರ,

 

ಬೀಳಗಿ ಮತಕ್ಷೇತ್ರದಿಂದ ಸುಮಾರು 200 ಕ್ರೋಜರ್,150 ಕಾರಗಳ ಮೂಲಕ ಜನ ಸ್ವಯಂ ಪ್ರೇರಣೆಯಿಂದ ಹೋರಾಟಕ್ಕೆ ಬರುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಎಐಸಿಐ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧ, ಈ ಕೇಸ್ ನಲ್ಲಿ ಸಿದ್ದರಾಮಯ್ಯನವರು ಮೇಲೆ ಕಳಂಕಿತ ಎಂದು ಬರಲು ಸಾಧ್ಯವಿಲ್ಲ, ಇಡೀ ಪಕ್ಷ ಅವರ ಬೆನ್ನಿಗೆ ಇದೆ ಎಂದು ಹೇಳಿದರು.

 

ಈ ವೇಳೆ ಸತ್ಯಪ್ಪ ಮೆಲ್ನಾಡ,ಅನವಿರಯ್ಯ ಪ್ಯಾಟಿಮಠ,ಎಂ ಎಲ್ ಕೆಂಪಲಿಂಗಣ್ಣವರ್, ಸಿದ್ದು ಸಾರಾವರಿ,ಶಿವಪ್ಪ ಗಾಳಿ,ಬಸವರಾಜ್ ಬಗಲಿ,ಮಲ್ಲು ಹೋಳಿ,ರಸೂಲ್ ಮುಜಾವರ್, ಯಮನಪ್ಪ ರೊಳ್ಳಿ,ಶಿವಾನಂದ ಮಾದರ,ಅನಿಲ್ ಗಚ್ಚಿನಮನಿ,ಪಾಂಡು ಮಮದಾಪುರ ಉಪಸ್ಥಿತರಿದ್ದರು.

 

ವರದಿ: ಖಾಜಾಮೈನುದ್ದಿನ ತಹಶೀಲ್ದಾರ್ ಬೀಳಗಿ.