ಸಚಿವರಾದ ನಂತರ ವಿಜಯಪುರ ನಗರದ ಹಾಸೀಂಪೀರ ದರ್ಗಾ ಹಾಗೂ ಅರ್ಕಟ್ಅಲಿ ದರ್ಗಾಗಳಿಗೆ ಭೇಟಿ ನೀಡಿ ನಾಡಿಗಾಗಿ ಸಚಿವ ಎಂ.ಬಿ ಪಾಟೀಲ್ ಪ್ರಾರ್ಥನೆ ಸಲ್ಲಿಸಿದರು

ಸೌಹಾರ್ದತೆ ಮತ್ತು ಭಾವೈಕ್ಯತೆಯ ಪ್ರತೀಕವಾದ ವಿಜಯಪುರದ ಹಾಸೀಂಪೀರ ದರ್ಗಾ ಹಾಗೂ ಅರ್ಕಟ್ಅಲಿ ದರ್ಗಾಗಳಿಗೆ ಕ್ಯಾಬನೆಟ ಸಚಿವರಾದ ಎಂಬಿ ಪಾಟೀಲ ಭೇಟಿ ನೀಡಿ, ನಾಡಿನ ಎಲ್ಲ ಜನತೆಯ ಒಳಿತು, ಶಾಂತಿ, ಸುಖ-ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದೆ.

ಸೂಫಿ ಸಂತರು ತಮ್ಮ ಪ್ರೀತಿ, ಕರುಣೆ, ಸಹಿಷ್ಣುತೆ ಮತ್ತು ಮಾನವೀಯತೆಯ ಸಂದೇಶಗಳ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯ ಹಾಗೂ ಸಹಬಾಳ್ವೆಯ ಮೌಲ್ಯಗಳನ್ನು ಬಿತ್ತಿದ್ದಾರೆ. ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಸರ್ವಧರ್ಮ ಸಮಭಾವ ಮತ್ತು ಭ್ರಾತೃತ್ವದ ಸಂದೇಶವನ್ನು ಸಾರುತ್ತಿವೆ.

ವರದಿ : ಅಜೀಜ ಪಠಾಣ್.

error: Content is protected !!