
ಮಂಗಳೂರು : ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮತ್ತು ಯೂತ್ ಫಾರ್ ಸೇವಾ ಸಂಸ್ಥೆ ವತಿಯಿಂದ ಕೊಡಿಯಾಲ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಪಠ್ಯಚಟುವಟಿಕೆ ಕಿಟ್ ವಿತರಿಸಲಾಯಿತು.
ಅನೇಕ ಶಾಲೆಗೆ ವರ್ಷಂಪ್ರತಿ ಬ್ಯಾಗ್, ಪುಸ್ತಕ ಸೇರಿದಂತೆ ಶಾಲೆಗಳಿಗೆ ಅನೇಕ ರೀತಿಯಲ್ಲಿ ಸಹಕರಿಸುತ್ತಾ ಬಂದಿದ್ದು ಈ ವರ್ಷ ಕೂಡ ಸಂಸ್ಥೆಯಿಂದ ಕೊಡಿಯಾಲ ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ ಸೇರಿದಂತೆ ಪಠ್ಯ ಸಾಮಾಗ್ರಿಗಳನ್ನು ನೀಡಿದ್ದು ಅದನ್ನು ಸಂಸ್ಥೆಯ ಸಿಬ್ಬಂದಿಗಳಾದ ಸವಿನಯ ಹಾಗೂ ಅಶ್ವಿನ್ ರವರು ವಿತರಿಸಿದರು.
ನಂತರ ಸವಿನಯ ರವರು ಮಾತನಾಡಿ ವಿದ್ಯಾರ್ಥಿಗಳ ಉಜ್ವಳ ಭವಿಷ್ಯಕ್ಕೆ ತಮ್ಮ ಸಂಸ್ಥೆಯು ಅಳಿಲು ಸೇವೆಯನ್ನು ಮಾಡುತ್ತಾ ಬಂದಿದ್ದು ಇದರ ಸದಪಯೋಗ ಪಡೆದುಕೊಂಡು ಮುಂದಿನ ದಿನಗಳಲ್ಲಿ ನೀವು ಸಹ ವಿದ್ಯಾಭ್ಯಾಸ ಕಲಿತು ಇಂತಹ ದೊಡ್ಡ ಸಂಸ್ಥೆಯನ್ನು ಸ್ಥಾಪಿಸಿ ಸಮಾಜಕ್ಕೆನಾದರೂ ಕೊಡುಗೆ ನೀಡುವಂತಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶರಣಪ್ಪ ಢೋಣಿ, ಎಸ್. ಡಿ. ಎಂ. ಸಿ ಸದಸ್ಯರಾದ ವಿಶ್ವನಾಥ ಉಪಸ್ಥಿತರಿದ್ದರು.
ಶಾಲಾ ವತಿಯಿಂದ ಸವಿನಯ ಮತ್ತು ಅಶ್ವಿನ್ ರವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಪೋಷಕರು, ಅಂಗನವಾಡಿ ಕಾರ್ಯಕರ್ತರ ರವರು, ಕಾರ್ಯಕರ್ತರು, ಅಕ್ಷರ ದಾಸೋಹ ಸಿಬ್ಬಂದಿ ಶ್ರೀಮತಿ ರೇವತಿ, ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸುಜಾತ ರವರು ಕಾರ್ಯಕ್ರಮವನ್ನು ಸ್ವಾಗತಿಸಿ, ಶಿಕ್ಷಕಿ ಗೌತಮಿ ರವರು ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ವಿಜಿತ್ ನಿರೂಪಿಸಿದರು.

