ಕಲಬುರಗಿಯಲ್ಲಿ “ಕಲ್ಯಾಣ ಕರ್ನಾಟಕ ಪ್ರಜಾಸೌಧ ನಿರ್ಮಿಸುವಂತೆ ಮನವಿ

ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಹಾಗು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣ ಪ್ರಕಾಶ ಪಾಟೀಲ ರವರನ್ನು ಭೇಟಿಯಾಗಿ
ಭಾರತ ಸರ್ಕಾರದ ನೀತಿ ಆಯೋಗದ ಉಪಾಧ್ಯಕ್ಷರಾದ ಡಾ.ಅಶೋಕ ಕುಮಾರ ಲಾಹಿರಿ ರವರ ಶಿಫಾರಸಿನಂತೆ ಎರಡನೇ ಬೆಂಗಳೂರು ಪರಿಕಲ್ಪನೆಯಡಿ “ಕಲ್ಯಾಣ ಕರ್ನಾಟಕದ ವಿಭಾಗಿಯ ಕೇಂದ್ರವಾಗಿರುವ ಕಲಬುರಗಿಯನ್ನು ಪ್ರಾದೇಶಿಕ ಉಪ ರಾಜಧಾನಿ ಅಥವಾ ದ್ವಿತೀಯ ಆಡಳಿತ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು”
ಕಲ್ಯಾಣ ಕರ್ನಾಟಕದ ವಿಭಾಗಿಯ ಕೇಂದ್ರ ಕಲಬುರಗಿಯಲ್ಲಿ “ಕಲ್ಯಾಣ ಕರ್ನಾಟಕ ಪ್ರಜಾಸೌಧವನ್ನು” ನಿರ್ಮಿಸಿ ಪ್ರತಿ ವರ್ಷ ವಿಧಾನ ಮಂಡಲದ “ಮಳೆಗಾಲದ ಅಧಿವೇಶನ” ನಡೆಸಲು ಹಾಗು ಕಳೆದ ಹಲವು ದಶಕಗಳಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ, ಶಿಕ್ಷಣ, ಉದ್ಯೋಗ, ನೀರಾವರಿ, ಆರೋಗ್ಯ ಸಾಮಾಜಿಕ ನ್ಯಾಯ ಹಾಗೂ ಸಾರ್ವಜನಿಕ ಸೇವೆಗೆ ಮಹತ್ವದ ಕೊಡುಗೆಗಳನ್ನು ನೀಡಿರುವ
ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರದ ಮಲ್ಲಿಕಾರ್ಜುನ ಖರ್ಗೆ ರವರ
ಮಾಜಿ ಮುಖ್ಯಮಂತ್ರಿಗಳಾದ ಅಜಾತಶತ್ರು ದಿವಂಗತ ಎನ್. ಧರ್ಮಸಿಂಗ್ ರವರ ಮಾಜಿ ಮುಖ್ಯಮಂತ್ರಿಗಳಾದ ದಿ. ವೀರೇಂದ್ರ ಪಾಟೀಲ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಮಂತ್ರಿಗಳು ಲೋಕನಾಯಕ ದಿವಂಗತ ಭೀಮಣ್ಣ ಖಂಡ್ರೆ ರವರ ಹೆಸರುಗಳನ್ನು ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಪ್ರಮುಖ ಸರ್ಕಾರಿ ಸಂಸ್ಥೆಗಳಿಗೆ, ಕಟ್ಟಡಗಳಿಗೆ ನಾಮಕರಣ ಮಾಡುಲು ಬರುವ ಸಂಪುಟ ಸಭೆಯಲ್ಲಿ ಚರ್ಚಿಸಿ ಸರಕಾರದಿಂದ ಸೂಕ್ತ ಆದೇಶ ಜಾರಿಗೆ ಮಾಡಿಸುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

error: Content is protected !!