ಕಲಬುರಗಿ: ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ಹಾಗೂ ಸರ್ವಧರ್ಮ, ಸರ್ವಸಮಾಜದ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದು, ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಕಾಂಕ್ಷೆ ವ್ಯಕ್ತಪಡಿಸಿದ್ದೀರಿ.
ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ತಮಗೆ ಪಕ್ಷದ ವರಿಷ್ಠರು ಅಭ್ಯರ್ಥಿಯಾಗಲು ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ ಅಂತ ಹೇಳಿದ್ದೀರಿ.
ಬಿಜೆಪಿ ಅಫ್ಜಲಪುರ ಮಂಡಲ ಅಧ್ಯಕ್ಷರು ವಿದ್ಯಾಧರ್ ಮಂಗಳೂರು, ಜಿಲ್ಲಾಧ್ಯಕ್ಷರು ಅಶೋಕ್ ಬಗಲಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ನಿತಿನ್ ವಿ. ಗುತ್ತೇದಾರ್ ಕಲಬುರ್ಗಿ ಜಿಲ್ಲೆಯ ಮಾಜಿ ಸಂಸದರು ಡಾ.ಉಮೇಶ್ ಜಾಧವ್ ರಾಜ್ಯಾಧ್ಯಕ್ಷರು ಬಿ.ವೈ. ವಿಜಯೇಂದ್ರ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ಪಿ.ರಾಜೀವ್ ಹಾಗೂ ಗ್ರಾಮದ ಮುಖ್ಯರು ವಿಶ್ವನಾಥ್ ರೇವೂರ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಮೇಲೆ ಅಪಾರ ನಂಬಿಕೆ ಇದೆ ಅಂತ ಹೇಳಿದ್ದೀರಿ.
ಪಕ್ಷದ ಸಂಘಟನೆಗಾಗಿ ಹಲವು ವರ್ಷಗಳಿಂದ ಶ್ರಮಿಸಿದ್ದು ಸಮಾಜದ ಎಲ್ಲಾ ವರ್ಗಗಳ ಜನರೊಂದಿಗೆ ಉತ್ತಮ ಬಾಂಧವ ಹೊಂದಿದ್ದೇನೆ ಈ ಸೇವೆಯನ್ನು ಪರಿಗಣಿಸಿ ಪಕ್ಷದ ನಾಯಕರು ಟಿಕೆಟ್ ನೀಡುವ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದು
ಸಂತೋಷ್ ಎಸ್.ರಾಠೋಡ ತಿಳಿಸಿದ್ದಾರೆ
ಪಕ್ಷದ ವರಿಷ್ಠರ ನಿರ್ಧಾರದ ಮೇಲೆ ವಿಶ್ವಾಸವಿಟ್ಟು ಅಭ್ಯರ್ಥಿತನಕ್ಕಾಗಿ ಪ್ರಯತ್ನ ಮುಂದುವರಿಸುವುದಾಗಿ ಹೇಳಿರುವ ಅವರು ತಮ್ಮ ರಾಜಕೀಯ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತಿರುವ ಎಲ್ಲಾ ನಾಯಕರಿಗು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ
ವರದಿ : ಸೈಫನ್ ಮುಲ್ಲಾ ಜಿಲ್ಲಾ ವರದಿಗಾರರು ಕಲಬುರ್ಗಿ
