ಹುಕ್ಕೇರಿ : ಬೆಳಗ್ಗೆಯಿಂದಲೇ ಹುಕ್ಕೇರಿ ತಾಲೂಕಿನ ಬಡಕುಂಡ್ರಿ ಗ್ರಾಮದ ಶ್ರೀ ಹೊಳೆಮ್ಮ ದೇವಸ್ಥಾನದ ಆವರಣದಲ್ಲಿ ಸಾವಿರಾರು ರೈತರು ಜಮಾಯಿಸಿದ್ದಾರೆ.
ಹುಕ್ಕೇರಿ, ಚಿಕ್ಕೋಡಿ, ಮೂಡಲಗಿ, ಗೋಕಾಕ್ ಭಾಗದಿಂದ ಬಂದಿರುವ ಕಬ್ಬು ಬೆಳೆಗಾರರು ಹೊಳೆಮ್ಮ ತಾಯಿಗೆ ಪೂಜೆ ಸಲ್ಲಿಸಿ, ಹೋರಾಟಕ್ಕೆ ಆಶೀರ್ವಾದ ಪಡೆದಿದ್ದಾರೆ. “ಹೊಳೆಮ್ಮ ತಾಯಿ, ನಮ್ಮ ಕಬ್ಬಿಗೆ ನ್ಯಾಯ ಕೊಡಿಸು” ಎಂದು ರೈತರು ಹರಕೆ ಹೊತ್ತಿದ್ದಾರೆ.
ಬಡಕುಂಡ್ರಿ ಹೊಳೆಮ್ಮ ದೇವಸ್ಥಾನದ ಮುಂದೆ *ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಶಶಿಕಾಂತ್ ಗುರೂಜಿ* ಅವರು ರೈತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ, ಕಾರ್ಖಾನೆಗಳು ಕೊಟ್ಟ ₹3500 ಪ್ರಸ್ತಾಪವನ್ನು ನಾವು ತಿರಸ್ಕರಿಸಿದ್ದೇವೆ, ₹5500 ಸಿಗುವವರೆಗೆ ಹೋರಾಟ ನಿಲ್ಲಲ್ಲ ಎಂದು ಇಲ್ಲಿಂದಲೇ ಘೋಷಣೆ ಮಾಡಿದ್ದಾರೆ.
ಇವತ್ತು ಬಡಕುಂಡ್ರಿಯಿಂದಲೇ ಹಿಂಡಲಗಾ ಜೈಲ್ ಭರೋ ಪಾದಯಾತ್ರೆಯ ಮುಂದಿನ ಹಂತ ಮತ್ತು ನವೆಂಬರ್ 6 ಬೆಂಗಳೂರು ಬೃಹತ್ ಸಮಾವೇಶದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.
