ಗುಡಿಬಂಡೆ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಗುಡಿಬಂಡೆ ತಾಲೂಕು ಶಾಖೆಯ 2026-2031ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನಡೆಯಿತು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಾಲಾಜಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೆ. ಸುಬ್ಬಲಕ್ಷ್ಮಮ್ಮ ಆಯ್ಕೆಯಾಗಿದ್ದರು. ಹಿಂದಿನ ಪ್ರಧಾನ ಕಾರ್ಯದರ್ಶಿ ವಿ. ಶ್ರೀರಾಮಪ್ಪ ಅವರು ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಗೆ ಗೌರವಾಧ್ಯಕ್ಷರಾಗಿ ವಿ. ಶ್ರೀರಾಮಪ್ಪ, ಕಾರ್ಯಾಧ್ಯಕ್ಷರಾಗಿ ವಿ. ಆದಿನಾರಾಯಣಪ್ಪ, ಖಜಾಂಚಿಯಾಗಿ ಎನ್. ನಾಗಲಿಂಗಪ್ಪ, ಉಪಾಧ್ಯಕ್ಷರಾಗಿ ಪುಷ್ಪಲತಾ, ಜಿ.ಎನ್. ಭಾರತಿ, ಎ. ಆದಿನಾರಾಯಣ, ಓಬಳೇಶಪ್ಪ, ಯು. ರಾಮಾಂಜನೇಯ, ಸಹ ಕಾರ್ಯದರ್ಶಿಗಳಾಗಿ ಬಿ.ವಿ. ನಾಗವೇಣಿ, ಎಸ್. ಕೋಡಿರ್ಲಪ್ಪ, ಮಮತಾ, ಸಂಘಟನಾ ಕಾರ್ಯದರ್ಶಿಗಳಾಗಿ ಶೇಕ್ ಜಾಬೀದ್, ವೇಣುಗೋಪಾಲ್, ವೈ.ಕೆ. ರಮೇಶ್, ಲೆಕ್ಕಪರಿಶೋಧಕರಾಗಿ ವಿ.ಎನ್. ರಾಘವೇಂದ್ರ ಕುಮಾರ್, ಸಲಹಾ ಸಮಿತಿ ಸದಸ್ಯರಾಗಿ ಗೋಪಾಲಕೃಷ್ಣ ಸಿಂಗ್, ಪಿ.ಎಲ್. ಸುಬ್ರಹ್ಮಣ್ಯ, ಜಿ. ಅಶ್ವತ್ಥಪ್ಪ, ಕ್ರೀಡಾ ಕಾರ್ಯದರ್ಶಿಗಳಾಗಿ ಜಿ.ವಿ. ನರಸಿಂಹಮೂರ್ತಿ ಮತ್ತು ಕೆ.ಎನ್. ನರಸಿಂಹಮೂರ್ತಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬೈಯಣ್ಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜಿಲ್ಲಾ ಘಟಕಕ್ಕೆ ಸಹ ಕಾರ್ಯದರ್ಶಿಗಳಾಗಿ ಆರ್. ರಾಜಪ್ಪ, ಉಮಾಶಂಕರ, ಎಂ. ನಾರಾಯಣಪ್ಪ ಹಾಗೂ ಸದಸ್ಯರಾಗಿ ಡಿ. ನಾರಾಯಣಸ್ವಾಮಿ, ಗೋಪಾಲ ಅವರನ್ನು ಆಯ್ಕೆ ಮಾಡಲಾಯಿತು.
ವರದಿ : ಜೆ.ಎನ್. ಕೃಷ್ಣಾರೆಡ್ಡಿ, ಗುಡಿಬಂಡೆ
