ರಾಯಬಾಗ ಪಟ್ಟಣದ ಬಾಬು ಜಗಜೀವನರಾಮ ಸಭಾಭವನದಲ್ಲಿ ಕರ್ನಾಟಕ ರಾಜ್ಯ ( 6 – 8 ) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ( ರಿ ), ತಾಲೂಕ ಘಟಕ ರಾಯಬಾಗ ಇದರ ಆಶ್ರಯದಲ್ಲಿ ಇಂದು ನೂತನ ಜಿ ಪಿ ಟಿ ಶಿಕ್ಷಕರ ಸ್ವಾಗತ ಸಮಾರಂಭ ಹಾಗೂ ಸರ್ವ ಸದಸ್ಯರ ಮಹಾಸಭೆ ನಡೆಯಿತು.
ಈ ಸಂದರ್ಭದಲ್ಲಿ ಈ ಸಮಾರಂಭದ ಅಧ್ಯಕ್ಷತೆ ಹಾಗೂ ಉದ್ಘಾಟಕರು ಡಿ ಎಂ ಐಹೊಳೆ ಶಾಸಕರು ರಾಯಬಾಗ. ಕುಮಾರ ಮಾದರ ಉಪನ್ಯಾಸಕರು ಡಯಟ್ ಚಿಕ್ಕೋಡಿ. ವಸಂತ ಬೆಕ್ಕೇರಿ ಉಪನ್ಯಾಸಕರು ಸರ್ಕಾರಿ ಪದವಿಪೂರ್ವ ಕಾಲೇಜು ಹಳ್ಳೂರು. ಮುಖ್ಯ ಅತಿಥಿಗಳ ಬಸವರಾಜ ಆರ್
BEO ರಾಯಬಾಗ. ಬಸವರಾಜ ಕಾಂಬಳೆ BRC ಪವನ್ ಅಮಠೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳು. ಮಹಮ್ಮದ್ ಮಾಗಿ ರಾಜ್ಯ ಸಹ ಕಾರ್ಯದರ್ಶಿಗಳು. ಗೋವಿಂದ ಸಣ್ಣಕ್ಕಿ ಜಿಲ್ಲಾ ಅಧ್ಯಕ್ಷರು. ಸತ್ರಾಜ್ ಕಾಂಬಳೆ ರಾಯಬಾಗ್ ತಾಲೂಕ ಅಧ್ಯಕ್ಷರು ಸ್ಥಾನಗಳನ್ನು ಅಲಂಕರಿಸಿದ್ದರು.
“ವಿಷಯವನ್ನು ತಲೆಗೆ ತುರುಕದೆ ಮನಸ್ಸಿಗೆ ತರಬೇತಿ ನೀಡುವ ಲಕ್ಷಾಂತರ ಶಿಕ್ಷಕರ ಸೇವೆ ಭಾರತಕ್ಕೆ ಅವಶ್ಯಕವಾಗಿದೆ”, ಈ ನಿಟ್ಟಿನಲ್ಲಿ ತಾವೆಲ್ಲರೂ ಶಿಕ್ಷಕರಾಗಿ ಬಂದಿದ್ದೀರಿ ಶಿಕ್ಷಕರ ಮೂಲ ಉದ್ದೇಶ ಮಗುವಿನ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದೇ ಮೂಲ ಉದ್ದೇಶವಾಗಿದೆ ಮಗುವಿನ ಸಂಪೂರ್ಣ ಸರ್ವತೋಮುಖ ವಿಕಾಸ ಮಾಡುವ ಅವಕಾಶ ತಮಗೆ ಒದಗಿ ಬಂದಿರುವಂತಹ ಸದಾ ಅವಕಾಶವನ್ನು ಓದು ಬರಹ ಲೆಕ್ಕ ವಿದ್ಯಾರ್ಜನೆಯನ್ನು ಮಾಡಿಸಿ ತಮ್ಮ ಬದುಕಿನ ಸಾರ್ಥಕತೆಯನ್ನು ಪಡೆಯಿರಿ ಎಂದು ಕುಮಾರ್ ಮಾದರ ಉಪನ್ಯಾಸಕರು ಜಿಪಿಟಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಯಬಾಗ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜಪ್ಪ ಆರ್ ಇವರು ಜಿಪಿಟಿ ಶಿಕ್ಷಕರಿಗೆ ಶಾಲೆಯ ಅಭಿವೃದ್ಧಿಗಾಗಿ ಮಕ್ಕಳ ಶಿಕ್ಷಣದ ಗುಣಮಟ್ಟಕ್ಕಾಗಿ ಪ್ರತಿಯೊಬ್ಬರೂ ಸೈನಿಕರಾಗಿ, ಸಂಗೊಳ್ಳಿ ರಾಯಣ್ಣನಾಗಿ , ಕಿತ್ತೂರು ರಾಣಿ ಚೆನ್ನಮ್ಮಳಾಗಿ ಶಾಲೆಯಲ್ಲಿ ಕೆಲಸ ಮಾಡಿ ಅಕ್ಷರದ ಕ್ರಾಂತಿಯನ್ನು ಮಾಡಿ, ಜನ ಮೆಚ್ಚಿದ ಶಿಕ್ಷಕರಾಗಬೇಡಿ ವಿದ್ಯಾರ್ಥಿ ಮೆಚ್ಚಿನ ಶಿಕ್ಷಕರಾಗಿ ಅವಾಗ ಇಲಾಖೆ ಗೌರಿಸುತ್ತದೆ ಸಾರ್ವಜನಿಕರು ಗೌರವಿಸುತ್ತಾರೆ ಎಲ್ಲರೂ ಗೌರವಿಸುತ್ತಾರೆ,
ಆದರೆ ನಮ್ಮ ವೃತ್ತಿ ಪಾವಿತ್ರ್ಯತೆಯನ್ನು ಮರೆಯಬಾರದು ಒಂದು ಕುಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕುಮಾರ್ ಎಂಬ ಪ್ರತಿಭಾವಂತ ಮಗು ವಿದ್ಯಾಭ್ಯಾಸ ಮಾಡುತ್ತಿದ್ದ ಆ ಮಗುವಿಗೆ ಕುಮಾರ್ ಎಂಬ ಹೆಸರಿನ ಹಿಂದೆ ಮತ್ತು ಮುಂದೆ ಇನಿಷಿಯಲ್ ಹಾಗೂ ಸರ್ ನೇಮ್ ಇರ್ಲಿಲ್ಲ ಇದರಿಂದ ದಿನನಿತ್ಯ ತನ್ನ ಜೀವನದಲ್ಲಿ ಅಪಹಾಸ್ಯಕೀಡಾಗುತ್ತಿದ್ದ ಇನಿಷಿಯಲ್ ಹಾಗೂ ಸರ್ ನೇಮ್ ಇಲ್ಲದೆ ಇರುವುದರಿಂದ ಕುಮಾರ ಪ್ರತಿಭಾವಂತ ಮಗು ಸಾಕಷ್ಟು ಕಷ್ಟಗಳನ್ನು ನುಂಗುತ್ತಿರುವ ಸಮಯದಲ್ಲಿ ಅವನ ಒಬ್ಬ ಶಿಕ್ಷಕರು ಅವನಿಗೆ ಕರೆದು ನೋಡು ಕುಮಾರ ನಮಗೆ ಇನಿಷಿಯಲ್ ಮತ್ತು ಸರ್ ನೇಮ್ ಇರುವಂತೆ ನಿನಗೆ ಇಲ್ಲ ನೀನು ಇನಿಷಿಯಲ್ ಹಾಗೂ ಸರ್ ನೇಮ್ ಗಳನ್ನು ನೀನೇ ಸಂಪಾದಿಸು ಎಂದು ಬೆನ್ನು ತಟ್ಟಿ ಪ್ರೇರೇಪಿಸಿದರು ತದನಂತರ ಕುಮಾರ್ ವಿದ್ಯಾಭ್ಯಾಸ ಮುಗಿಸಿ IAS ಇನಿಷಿಯಲ್ ಅನ್ನು ಸಂಪಾದಿಸಿ ಅವನ್ನು ಅಂದಿನಿಂದ IAS ಕುಮಾರ್ ಎಂದಾದನು, ಅಂತೆಯೇ ನೀವೆಲ್ಲರೂ ಪದವಿಯನ್ನು ಪಡೆದಿರುವಂತವರು ಮಕ್ಕಳನ್ನು ಬದಲಾಯಿಸುವಂತಹ ಶಕ್ತಿ ನಿಮ್ಮಲ್ಲಿದೆ ನೀವೆಲ್ಲರೂ ಒಳ್ಳೆಯ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಮಾರ್ಗದರ್ಶಿ ಯಾಗಿ ತಂದೆಯಾಗಿ ಒಂದೊಳ್ಳೆ ಸಂಸ್ಕಾರ ಮತ್ತು ಸುಂದರ ಭವಿಷ್ಯ ರೂಪೀಸುವ ಶಿಕ್ಷಣ ನೀಡಿ ಯಾವುದೇ ಸಮಯದಲ್ಲಿ ಎದೆಗುಂದದೆ ನೀವು ಕಲಿಸ್ತಕಂತ ವಿಚಾರದಲ್ಲಿ ನೀವು ಮಾಡತಕ್ಕಂಥ ವಿಚಾರದಲ್ಲಿ ನೀವು ಮುನ್ನುಗ್ಗಿ ಮಕ್ಕಳಿಗೆ ಕಲಿಸಿ ಶಾಲೆಯನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಿ.
ಮೊಬೈಲ್ ಅನ್ನು ಮಿತವಾಗಿ ಬಳಸಿ 3H ಅಳವಡಿಸಿಕೊಳ್ಳಿ ಹಾಗೂ ಮಾನವೀಯತೆಯನ್ನು ಹೊಂದಿರಿ ಪ್ರಾಮಾಣಿಕರಾಗಿರಿ ಪ್ರಾಮಾಣಿಕ ರಾಗಿ ಕೆಲಸ ಮಾಡಿ ಡಾ ಬಿ ಆರ್ ಅಂಬೇಡ್ಕರ್ ಜೀವನ ಸತ್ಯ ಸಂಗತಿಯಾದ ಎರಡು ನಾಣ್ಯದ ಕಥೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು ಅದೇ ರೀತಿಯಾಗಿ ಉಳಿವಿಗಾಗಿ ಹೋರಾಟ ಮಾಡಿ ಆ ಹೋರಾಟ ಇನ್ನೊಬ್ಬರಿಗೆ ಮಾರಕವಾಗಬಾರದು, ಸಾಮರಸ್ಯದಿಂದ ಎಲ್ಲರೊಂದಿಗೆ ಬದುಕೋಣ, ಕೆಟ್ಟ ಗುಣಗಳನ್ನು ಬಿಟ್ಟು ಶಾಲೆಯನ್ನು ಮಕ್ಕಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸ್ಪರ್ಧೆ ಮಾಡೋಣ, ಸ್ಪರ್ಧೆ ನಮ್ಮ ನಮ್ಮಲ್ಲಿ ಬೇಡವೇ ಬೇಡ ಸಮಾಗಮದಿಂದ ಒಂದಾಗಿ ಬಾಳೋಣ ಶಾಲೆಗಳನ್ನು ಪ್ರಗತಿಯ ಪತದತ್ತ ತೆಗೆದುಕೊಂಡು ಹೋಗೋಣ ಎಂದು ಜಿಪಿಟಿ ಶಿಕ್ಷಕರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಪದವೀಧರ ಶಿಕ್ಷಕರ ಸಂಘದ ಪದಾಧಿಕಾರಿಗಳು ರಾಯಬಾಗ್ ತಾಲೂಕ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಈ ಸಮಾರಂಭದ ಕೇಂದ್ರ ಬಿಂದುವಾದ ಪದವೀಧರ ಪ್ರಾಥಮಿಕ ಶಿಕ್ಷಕರೆಲ್ಲರೂ ಉಪಸ್ಥಿತರಿದ್ದರು.