ಬೀದರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೀದರ ಈ ಇಲಾಖೆಯಲ್ಲಿ ಈ ಹಿಂದಿನ ಸಹಾಯಕ ನಿರ್ದೇಶಕರಾದ ಡಾ. ಗೌತಮ ಅರಳಿ ಮತ್ತು ಅಧೀಕ್ಷಕರಾದ ಪದ್ಮಾವತಿ ಅವರು ಕ್ರೀಡಾಪಟು ಇವರುಗಳು ಕೂಡಿಕೊಂಡು, ವಸತಿ ನಿಲಯಗಳಿಗೆ ಗುತ್ತಿಗೆದಾರರ ಜೊತೆ ಸೇರಿಕೊಂಡು ವಿವಿಧ ಬೋಗಸ್ ಬಿಲ್ಲುಗಳನ್ನು ಸೃಷ್ಟಿಸಿ, ಅಂದಾಜು ರೂ. 20.00 ಕ್ಷಗಳವರೆಗೆ ಹಣ ದುರ್ಬಳಕೆ ಮಾಡಿರುತ್ತಾರೆ ಎಂದು ಆರೋಪಿಸಿ
ಸ್ವಾಮಿ ವಿವೇಕಾನಂದ ಜಯಂತಿ ಹೆಸರನಲ್ಲಿ ಒಂದು ದಿವಸ ಕಾರ್ಯಕ್ರಮ ಮಾಡಿ, ಒಂದು ವಾರದ ಯುವ ಸಪ್ತದ ಹಣ ಲೂಟಿ ಮಾಡಿರುತ್ತಾರೆ ಹಾಗೂ ಈಜು ಕೋಳದ ನಿರ್ವಹಣೆಯ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡದೇ, ಇಲಾಖೆಯ ಸಿಬ್ಬಂದಿಗಳು ಹಾಗೂ ಇವರು ಸೇರಿಕೊಂಡು, ಹಣ ದುರ್ಬಳಕೆ ಮಾಡಿಕೊಂಡಿರುತ್ತಾರೆ.
2023-24ನೇ ಸಾಲಿನ ಕ್ರಿಡಾ ವಸತಿ ನಿಲಯದ ಶ್ರೀ ಪುಷ್ಪಕ್ ತಂದೆ ಸಂತೋಷ ರಾಷ್ಟಿçÃಯ ಭಲ್ಲೆ ಎಸೆತ ಕ್ರೀಡಾಪಟುವಾಗಿದ್ದು, ಇವನು ವಸತಿ ನಿಲಯದಲ್ಲಿ ಪ್ರವೇಶ ತೆಗೆದುಕೊಂಡರೂ ವಸತಿ ನಿಲಯದಲ್ಲಿ ವಾಸವಾಗಿರುವುದಿಲ್ಲ. ಆದರೂ ಕೂಡ ಇವನ ಹೆಸರಿನಲ್ಲಿ ಒಂದು ವರ್ಷದಿಂದ ಈ ಕ್ರಿಡಾಪಟುವಿನ ಸುಮಾರು 2 ಲಕ್ಷ ಮೊತ್ತದ ಹಣವನ್ನು ಈ ಹಿಂದಿನ ಸಹಾಯಕ ನಿರ್ದೇಶಕರಾದ ಡಾ. ಗೌತಮ ಅರಳಿ ಮತ್ತು ಅಧೀಕ್ಷಕರಾದ ಪದ್ಮಾವತಿ ಇವರುಗಳು ಲೂಟಿ ಮಾಡಿರುತ್ತಾರೆ. ಇದರಿಂದ ಇವರುಗಳ ವಿರುದ್ಧ ನ್ಯಾಯಯುತ ತನಿಖೆ ನಡೆಸುವುದು ಅವಶ್ಯಕವಾಗಿದೆ. ಆದದರಿಂದ ಈ ಹಿಂದಿನ ಸಹಾಯಕ ನಿರ್ದೇಶಕರಾದ ಡಾ. ಗೌತಮ ಅರಳಿ ಮತ್ತು ಅಧೀಕ್ಷಕರಾದ ಪದ್ಮಾವತಿ ಇವರನ್ನು ತಕ್ಷಣದಿಂದ ಸದರಿಯವರನ್ನು ಇಲಾಖೆಯಿಂದ ಹೊರಗಡೆ ಇಟ್ಟು, ನ್ಯಾಯಯುತ ತನಿಖೆ ಮಾಡಬೇಕೆಂದು ದ್ರಾವಿಡ ಕ್ರಾಂತಿ ಯುವ ಸೇನೆ ವತಿಯಿಂದ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಗೌತಮ ಪ್ರಸಾದ, ಉಪಾಧ್ಯಕ್ಷರಾದ ಸಂಜುಕುಮಾರ, ಕಾರ್ಯದರ್ಶಿ ಕಲ್ಯಾಣರಾವ ಗುನ್ನಳ್ಳಿಕರ್, ಜೈ ಭೀಮ ಕ್ಯಾದೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.