ದೋಟಿಕೋಳ ಗ್ರಾಮದ ಮುಖ್ಯ ರಸ್ತೆ ನಿತ್ಯ ಸಂಚರಿಸುವ ಸವಾರರಿಗೆ ನರಕಾಯಾತನೇ

ಚಿಂಚೋಳಿ ತಾಲೂಕಿನ ದೋಟಿಕೋಳ ಗ್ರಾಮದ ಮುಖ್ಯರಸ್ತೆ ಸಂಪೂರ್ಣ ತಗ್ಗುಗಳಿಂದ ಕೂಡಿದ್ದು ನಿತ್ಯ ಸಂಚರಿಸುವ ನೂರಾರು ಸವಾರರಿಗೆ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಆಲಿಸಿ , ಮೂಲಸೌಕರ್ಯಗಳ ಬಗ್ಗೆ ಚಿಂತಿಸಿ ಕಾರ್ಯಗಳನ್ನು ಮಾಡಿದರೆ ನಮ್ಮಲ್ಲಿರುವಂತಹ ಜನಪ್ರತಿನಿಧಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರ ಆಳಲು ಸುಮಾರು ವರ್ಷಗಳಿಂದ ಶಾಸಕರಿಗೆ ಹಾಗೂ ಸಂಸದರಿಗೆ ಈ ರಸ್ತೆಯ ಬಗ್ಗೆ ಮೌಖಿಕವಾಗಿ ಹಾಗೂ ಮನವಿಯ ಮುಖಾಂತರ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಗ್ರಾಮಸ್ಥರೆಲ್ಲರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಇಡೀ ಶಾಪವನ್ನು ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ರಸ್ತೆ ಸರಿಪಡಿಸಲು ಗ್ರಾಮಸ್ಥರೆಲ್ಲರೂ ಸೇರಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳನ್ನು ಬಿಸಿ ಮುಟ್ಟಿಸುವ ಕಾರ್ಯ ಮಾಡುವುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ
ದೋಟಿಕೋಳ ಗ್ರಾಮಸ್ಥ ಹನುಮಂತ ರೆಡ್ಡಿ ಪ್ರತಿಕ್ರಿಯಿಸಿ ಈಗಾಗಲೇ ಹಲವು ಬಾರಿ ಶಾಸಕರು ಹಾಗೂ ಸಂಸದರ ಗಮನಕ್ಕೆ ತಂದರು ಕೂಡ ಯಾವುದೇ ರಸ್ತೆ ಸುಧಾರಣೆ ಆಗಿಲ್ಲ ನಿತ್ಯ ಈ ರಸ್ತೆಯಿಂದ ಸಂಚರಿಸಬೇಕಾದರೆ ಯಾವ ಸಮಯದಲ್ಲಿ ಏನು ಕೆಟ್ಟ ಘಟನೆ ಯಾಗುತ್ತದೆ ಎಂಬ ಭಯದಿಂದ ನಿತ್ಯ ನೂರಾರು ಜನಸಂಖ್ಯೆ ಸಾವಿರಾರು ಸಂಚರಿಸಬೇಕಾದ ಸ್ಥಿತಿ ನಿರ್ಮಾಣ ಆಗಿದೆ ಕುಂಭಾ ಕರ್ಣನ ನಿದ್ದೆಯಿಂದ ಎದ್ದು ಆದಷ್ಟು ಬೇಗ ಜನಪ್ರತಿನಿಧಿಗಳು ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸುಧಾರಣೆ ಮಾಡಿ ದೋಟಿಕೋಳ ಗ್ರಾಮಸ್ಥರಿಗೆ ಅನುಕೂಲ ಮಾಡಬೇಕಾ ಗಿದ್ದು ಅವರ ಮೂಲ ಕರ್ತವ್ಯವಾಗಿದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.

error: Content is protected !!