ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಕನ್ನಾ ಬಡವರ ಅನ್ನಕ್ಕೆ ಕನ್ನಾ ಹಾಕುತ್ತಿರುವ ನ್ಯಾಯ ಬೆಲೆ ಅಂಗಡಿ ಮಾಲೀಕ

ಚಿಂಚೋಳಿ :

ಹೌದು ಸರ್ಕಾರದ ಅಕ್ಕಿ ಕಳ್ಳ ಸಾಗಣೆ ಆಗುತ್ತಿದೆ ಎಂಬ ದೂರು ಗಳು ನೀವು ಕೇಳಿರಬಹುದು ಆದರೆ ಇಲ್ಲಿ ಸರ್ಕಾರದಿಂದ ಬಡವರಿಗೆ ಬರುವ ಅಕ್ಕಿ ಅವರನ್ನೇ ಕೊಡೋಕೆ ಮನೆಯಿಂದ ತಂದು ಕೊಡುವಹಾಗೆ ವರ್ತಿಸುತ್ತಿರುವ ನ್ಯಾಯ ಬೆಲೆ ಅಂಗಡಿ ಮಾಲೀಕ,

 

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಚಂದಾಪುರ ಬಡಾವಣೆ ಭವಾನಿ ಮಂದಿರ ಹತ್ತಿರದ ನ್ಯಾಯ ಬೆಲೆ ಅಂಗಡಿ ಸಂಖೆ 99ರಲ್ಲಿ ಸರಿಯಾಗಿ ಪಡಿತರ ಅಕ್ಕಿ ವಿತರಣೆ ಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ ಇಲ್ಲಿ ಪ್ರತಿ ತಿಂಗಳು ಅಕ್ಕಿ ಕುಡಲ್ಲ ಎರೆಡು ಮೂರು ತಿಂಗಳಿಗೊಮ್ಮೆ ಅಕ್ಕಿ ಕೊಡುತ್ತಾರೆ ಕೇಳೊಕೆ ಹೋದ್ರೆ ಕೊಡೋಷ್ಟು ತೆಗೆದುಕೊಂಡು ಹೋಗಬೇಕು ಎನ್ನುತ್ತಾರೆ ಎಂದು ಇಲ್ಲಿನ ಮಹಿಳೆಯರು ದುರಿದ್ದಾರೆ,

 

ಸರ್ಕಾರ ಉಚಿತ ಅಕ್ಕಿ ಕೊಡುತ್ತಿದ್ದರೆ ಇಲ್ಲಿ ಪ್ರತಿ ರೇಷನ್ ಕಾರ್ಡ್ ಗೆ 20ರಿಂದ 30ರೂ ತೆಗದುಕೊಳ್ಳುತ್ತಿರುವುದು ನಮ್ಮ ಕ್ಯಾಮೆರಾ ದಲ್ಲಿ ಸೇರೆ ಯಾಗಿದೆ ಅಷ್ಟೇ ಅಲ್ಲ ಪಡಿತರ ಅಕ್ಕಿ ಎಲೆಕ್ಟ್ರಿಕ್ ತಕ್ಕಡಿ ಬಳಸದೆ ಸಾಧಾರಣ ತಕ್ಕಡಿ ಯಲ್ಲಿ ತೂಕ ಮಾಡುತ್ತಿದ್ದು ಇದರಿಂದ ಅಕ್ಕಿಯು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ ಎಂದು ದೂರಿದ್ದಾರೆ ಪ್ರಶ್ನಿಸುವರಿಗೆ ಇಲ್ಲಿಯ ನೌಕರರು ಹಾಗೂ ಮಾಲೀಕ ದುರ್ವತನೆ ಮಾಡಿ ಬೇಕಾದರೆ ತಗೊಳ್ಳಿ ಇಲ್ಲದಿದ್ದರೆ ಬಿಟ್ಟೋಗಿ ಎನ್ನುತ್ತಾರೆ ಎಂದು ಇಲ್ಲಿಯ ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ,

 

ಅದೇನೇ ಆಗಲಿ ಸಂಬಂಧ ಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಈ ಅಂಗಡಿ ಮಾಲೀಕನ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಇವನ ಲೈಸನ್ಸ್ ರದ್ದು ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಉತ್ತರಾದೇವಿ ವೃದ್ದೆ ಪ್ರತಿಕ್ರಿಯಿಸಿ ನಾನು ಈಗಾಗಲೇ ವಯಸ್ಕಳಾಗಿದ್ದು ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸುವ ಧಾನ್ಯಗಳಲ್ಲಿ ಕಡಿಮೆ ಕೊಡುತ್ತಿದ್ದು ಕೆಲ ತಿಂಗಳು ಕೊಡದೆ ಇರುತ್ತಾರೆ, ಕೇಳಲು ಹೋದರೆ ನನ್ನನ್ನೇ ದಬಾಯಿಸುತ್ತಾರೆ ಅಂಜಿಸುತ್ತಾರೆ ತನ್ನ ನೋವನ್ನು ತೋಡಿಕೊಂಡರು. ಇಂದುಮತಿ ಪ್ರತಿಕ್ರಿಯಿಸಿ ತಿಂಗಳು ತಿಂಗಳು ಸರಿಯಾಗಿ ಕೊಡದೆ ಸತಾಯಿಸುತ್ತಾರೆ ಅದೇ ರೀತಿ ಪ್ರತಿ ಬಾರಿ 20 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ ಮೂರ, ಮೂರು ತಿಂಗಳುಗಳಿಂದ ಅಕ್ಕಿ ಜೋಳ ಕೊಡದೆ ನಮ್ಮನ್ನು ಸತಾಯಿಸುತ್ತಾರೆ ಕೇಳಲು ಹೋದರೆ ನಿಮ್ಮ ರೇಷನ್ ಕಾರ್ಡ್ ಕಟ್ ಮಾಡುತ್ತೇನೆ ಎಂದು ಹೆದರಿಸುತ್ತಾರೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು. ಇಸ್ಮಾಯಿಲ. ಬೀ, ವರ್ಷಗಳಲ್ಲಿ ಎರಡು ತಿಂಗಳ ಮೂರು ಸಾರಿ ಅಂತೆ ಅಕ್ಕಿ ಕೊಡದೆ ಸತಾಯಿಸುತ್ತಾರೆ ಇದನ್ನು ಪ್ರಶ್ನಿಸಲು ಹೋದರೆ ಕೊಟ್ಟಷ್ಟು ತೆಗೆದುಕೊಂಡು ಹೋಗಬೇಕು ತಮ್ಮ ನೋವನ್ನು ಹೊರಹಾಕಿದರು.

error: Content is protected !!