ಚಿಂಚೋಳಿ ಮತ್ತು ಚಂದಾಪೂರ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸುವಂತೆ ಮನವಿ

ಚಿಂಚೋಳಿ ಮತ್ತು ಚಂದಾಪುರ ಅವಳಿ ಪಟ್ಟಣಗಳಲ್ಲಿ ಶುದ್ಧ ನೀರು ಕುಡಿಯುವ ಘಟಕ ಅವಶ್ಯಕತೆ ಇದ್ದು ಚಂದಾಪೂರ ಮತ್ತು ಚಿಂಚೋಳಿ ಪಟ್ಟಣದಲ್ಲಿ ಸುಮಾರು 25,000 ಸಾಏರ ಜನಸಂಖ್ಯೆ ಹೋಂದಿದ್ದು, 6000 ಕುಟುಂಬಗಳು ಇರುತ್ತವೆ. ಪಟ್ಟಣದಲ್ಲಿ ಪ.ಜಾತಿ, ಪ.ಪಂಗಡ ಮತ್ತು ಇತರೆ ಹಿಂದುಳಿದ ಹೆಚ್ಚಿನ ಜನಸಂಖ್ಯೆ ಹೋಂದಿರುತ್ತವೆ. ಸದರಿ ಪಟ್ಟಣದಲ್ಲಿ ಹಾಲಿ ಶುದ್ಧ ನೀರಿನ ಘಟಕ ಆಡಿಮೆ ಸಂಖ್ಯೆ ಇರುತ್ತವೆ. ಈ ಘಟಕದಿಂದ ಎಲ್ಲಾ ಕುಟುಂಬಗಳಿಗೆ ಶುದ್ಧ ನೀರನ್ನು ಒದಗಿಸುವುದು ಕೋರತೆಯಾಗುತ್ತಿರುವುದರಿಂದ ಹಾಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಕಟ್ಟಡ, ಸ್ಥಳ, ನೀರು ಮತ್ತು ವಿದ್ಯುತ್‌ ವ್ಯವಸ್ಥೆ ತಮ್ಮ ಇಲಾಖೆಯಿಂದ ಮಾಡಬೇಕೆಂದು ಯೋಜನೆ ವತಿಯಿಂದ ತಿಳಿಸಿದ್ದು, ಕುಡಿಯುವ ನೀರಿನ ಘಟಕಗಳು ನಮ್ಮ ಪಟ್ಟಣದಲ್ಲಿ ಅಳವಡಿಸಿ ಸಮರ್ಪಕ ಶುದ್ಧ ಕುಡಿಯುವ ನೀರು ಒದಗಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಧರ್ಮಸ್ಥಳ ಅವರಿಗೆ ಪುರಸಭೆ ಅಧ್ಯಕ್ಷ ಆನಂದ ಟೈಗರ್ ಹಾಗೂ ಕಾಶಿನಾಥ ಧನ್ನಿ ಪುರಸಭೆ ಮುಖ್ಯಾಧಿಕಾರಿ ಮನವಿ ಪತ್ರವನ್ನು ಕೊಟ್ಟಿದ್ದಾರೆ.

 

ವರದಿ : ರಾಜೇಂದ್ರ ಪ್ರಸಾದ್

error: Content is protected !!