ಔರಾದ್ : ಪಟ್ಟಣದಲ್ಲಿ ಆರಂಭವಾಗಿರುವ ಮಂಗಲನಾಥ್ ಮಲ್ಟಿ ಸ್ಟೇಟ್ ಬ್ಯಾಂಕ್ ಗ್ರಾಹಕರ ಆಶಾಕಿರಣವಾಗಿದೆ ಎಂದು ಮಾಜಿ ಶಾಸಕ ಗುಂಡಪ್ಪ ಬಿರಾದಾರ್ ಹೇಳಿದರು. ಪಟ್ಟಣದ ಮಂಗಲನಾಥ್ ಮಲ್ಟಿ ಸ್ಟೇಟ್ ಬ್ಯಾಂಕನಲ್ಲಿ ಈಚೇಗೆ ನಡೆದ ಗ್ರಾಹಕ ಮೇಳೆ ಕ್ರಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕ್‌ನ ಸಾಧನೆಯಲ್ಲಿ ಗ್ರಾಹಕರ ಪಾಲು ಅಪಾರವಿದೆ. ಗ್ರಾಹಕರು, ಹಿತೈಷಿಗಳು ಬ್ಯಾಂಕ್‌ನ ಮೇಲೆ ತೋರಿದ ಪ್ರೀತಿ, ವಿಶ್ವಾಸದಿಂದ ಬ್ಯಾಂಕ್ ಉತ್ತರೋತ್ತರ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆಶೋತ್ತರಗಳಿಗೆ ಬ್ಯಾಂಕ್ ಸದಾ ಸ್ಪಂದಿಸುತ್ತಿದ್ದು, ತಾಲೂಕಿನ ಗ್ರಾಹಕರು ಬ್ಯಾಂಕಿನ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಮಂಗಲನಾಥ ಮಲ್ಟಿಸ್ಟೇಟ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕಾನಡೆ ಮಾತನಾಡಿ, ಕಳೆದ 25 ವರ್ಷಗಳಿಂದ ಬ್ಯಾಂಕು ಜನರ ಸೇವೆಯಲ್ಲಿದೆ. ಔರಾದ್ ಪಟ್ಟಣದಲ್ಲಿ ಕಳೆದ 8 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯ ಜನರು ಬ್ಯಾಂಕಿನೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸುಮಾರು 700 ಕೋಟಿ ವ್ಯವಹಾರ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಬಿಡ್, ಔರಂಗಾಬಾದ್, ಪರಳಿ, ಜಾಲನಾ, ಮಾಜಲಗಾಂವ, ಲಾತುರ್ ಸೇರಿ 15 ಕಡೆಗಳಲ್ಲಿ ಬ್ಯಾಂಕಿನ ಘಟಕ ತೆರೆಯಲಾಗಿದೆ. ಎಲ್ಲ ಕಡೆಯಲ್ಲಿಯೂ ಉತ್ತಮ ಪ್ರತಿಕ್ರಿಯೆ ಜನರಿಂದ ಬಂದಿದೆ ಎಂದು ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಉದ್ಯಮಿ ಅಶೋಕ ಉಪ್ಪೆ ಮಾತನಾಡಿ ಔರಾದ್ ಪಟ್ಟಣದಲ್ಲಿ ಮಂಗಲನಾಥ್ ಮಲ್ಟಿಸ್ಟೇಟ್ ಬ್ಯಾಂಕ್ ಆಗಮಿಸಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಇಲ್ಲಿಯವರೆಗೆ ಸುಮಾರು 200 ಕೋಟಿ ವ್ಯವಹಾರ ಮಾಡಿದೆ ಎಂದು ಬ್ಯಾಂಕ್ ಸಿಬ್ಬಂದಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಬಿಸೆ ದತ್ತಾತ್ರೇಯ, ಗುತ್ತಿಗೆದಾರ ಶರಣಪ್ಪ ಪಂಚಾಕ್ಷರಿ, ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಉದ್ಯಮಿ ಬಸವರಾಜ ರಾಗಾ, ಸಹಾಯಕ ವ್ಯವಸ್ಥಾಪಕ ಅಶೀಶ್ ಸೂರ್ಯವಂಶಿ, ರಘುನಾಥ ಬಿರಾದಾರ್, ಸೂರ್ಯಕಾಂತ ಬಿರಾದಾರ್, ಮಹಾಂತಯ್ಯ ಸ್ವಾಮಿ, ಸುನಿಲ ಕೋರೆ, ರಮೇಶ ಬಿರಾದಾರ್, ಅಭಿಶೇಖ್ ಶೆಟಕಾರ್, ಅಮುಲ್ ಪಾಂಡೆ, ಸಚಿನ ಕೈಲಾಸೆ, ಪ್ರವೀಣ ಹಾಲಕೋಡೆ, ರಾಹುಲ್ ಕಾಟಕರ್ ಸೇರಿದಂತೆ ಅನೇಕ ಗ್ರಾಹಕರು, ಸಾರ್ವಜನಿಕರು ಪಾಲ್ಗೊಂಡರು. ಸೋನಟೆಕ್ಕೆ ಕೈಲಾಸ ಸ್ವಾಗತಿಸಿ, ನಿರೂಪಿಸಿದರು.
ವರದಿ : ರಾಚಯ್ಯ ಸ್ವಾಮಿ