ಚಾಂಪಿಯನ್ ಆಗಿ ರಾಯಲ್ ಚಾಲೆಂಜರ್ಸ್ ಬೀದರ್, ರನ್ನರ್ ಅಪ್ ಆಗಿ ನಿರ್ಮಾಣ್ ನಿಂಜಾಸ್
ಬೀದರ್ : ‘ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ, ಆದರೆ ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸುವುದು ಮುಖ್ಯ, ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ, ಬಡ ಮಕ್ಕಳ ಶಿಕ್ಷಣಕ್ಕಾಗಿ ಇಂತಹ ಟೂರ್ನಮೆಂಟ್ ಆಯೋಜಿಸಿರುವುದು ಪುಣ್ಯದ ಕೆಲಸ,” ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಅಭಿಪ್ರಾಯಪಟ್ಟರು.
ಎಜುಕೇಟ್ ಅ ಚೈಲ್ಡ್, ಎಂಪವರ್ ಅ ಪ್ಯೂಚರ್” ಎಂಬ ಉದಾತ್ತ ಧೈಯದೊಂದಿಗೆ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸುವ ಸಲುವಾಗಿ ರೋಟರಿ ಕ್ಲಬ್ ಆಫ್ ಸಿಲ್ವರ್ ಸ್ಟಾರ್ ವತಿಯಿಂದ ಜ.8 ರಿಂದ 11 ವರೆಗೆ ಆಯೋಜಿಸಲಾದ ರೋಟರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಕಲ್ಯಾಣ್ ಜೋನ್ 2.0’ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಈ ವೇಳೆ ಪಂದ್ಯಾವಳಿಯ ಯಶಸ್ಸಿಗೆ ಕಾರಣರಾದ ಆದಿಶ್ ವಾಲಿ ಮತ್ತು ತಂಡದ ಶ್ರಮವನ್ನು ಕೊಂಡಾಡಿದರು.
ಶಾಸಕ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ‘ಇಲ್ಲಿನ ಪಂದ್ಯಾವಳಿಗಳು ಯಾವುದೇ ಐಪಿಎಲ್ ಪಂದ್ಯಗಳಿಗೂ ಕಡಿಮೆ ಇರಲಿಲ್ಲ, ಎಂಟು ತಂಡಗಳು ಯಾವುದೇ ಸ್ವಾರ್ಥವಿಲ್ಲದೆ ಅತ್ಯಂತ ಉತ್ಸಾಹದಿಂದ ಆಡಿವೆ. ಇದೇ ವೇಳೆ ಅವರು ಸಂಘಟಕರಿಗೆ ಸಲಹೆ ನೀಡುತ್ತಾ, ‘ಗಡಿ ಭಾಗದಲ್ಲಿ ಮುಚ್ಚುವ ಹಂತದಲ್ಲಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ನಂತರ ಮಾತಾನಾಡಿದ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ್ ಪಾಟೀಲ್ ಮಾತನಾಡಿ, “ಕೇವಲ 10 ನಿಮಿಷ ಪಂದ್ಯ ವೀಕ್ಷಿಸಲು ಬಂದ ನಾನು, ಇಲ್ಲಿನ ರೋಚಕತೆ ಮತ್ತು ಸಂಭ್ರಮ ಕಂಡು ಎರಡು ಗಂಟೆಗಳ ಕಾಲ ಇಲ್ಲೇ ಉಳಿಯುವಂತಾಯಿತು. ಇಡೀ ರೋಟರಿ ತಂಡ ಕಳೆದ ಎರಡು ಮೂರು ತಿಂಗಳುಗಳಿಂದ ಪಟ್ಟ ಪರಿಶ್ರಮ ಇಂದು ಈ ಅದ್ಧೂರಿ ಯಶಸ್ಸಿಗೆ ಕಾರಣವಾಗಿದೆ,’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಲಬ್ ಅಧ್ಯಕ್ಷ ಆದೀಶ್ ಆರ್ ವಾಲಿ ಮಾತಾನಾಡಿ ನಾವು ಎಷ್ಟೇ ದೂರ ಹೊದ್ರು ನಮ್ಮ ನೆಲವನ್ನು ಬಿಡಬಾರದು,ಬೀದರ ಜಿಲ್ಲೆ ಹಿಂದುಳಿದ ಜಿಲ್ಲೆ ಅಲ್ಲ. ನಾವು ಸಾಮಾಜಿಕ ಕಳಕಳಿಯೊಂದಿಗೆ ಎಲ್ಲರ ಸಹಕಾರ ಅಟಗಾರರು, ತಂಡದ ಮಾಲೀಕರು ಪ್ರಾಯೋಜಕರು ಬೆಂಬಲಿಗರು ಸೇರಿದಂತೆ ವಿವಿಧ ವಿಭಾಗಗಳಿಂದ ಬೆಂಬಲ ಮತ್ತು ಸಹಕಾರದಿಂದ ಈ ಲೀಗ್ ಸಾಧ್ಯವಾಗಿದೆ. ನಿಮ್ಮ ಸಹಕಾರದಿಂದ 10ನೇ ತರಗತಿ ಉತ್ತಮ ಅಂಕದೊಂದಿಗೆ ಪಾಸಾದ ಬಡ ಮಕ್ಕಳಿಗಾಗಿ ಜಿಲ್ಲೆಯ ವಿವಿಧ ಕಾಲೇಜುಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಂಡು ಅವರ ಶಿಕ್ಷಣಕ್ಕೆ ಕ್ಲಬ್ ವತಿಯಿಂದ ನೆರವು ನೀಡಲಾಗುವುದು ಎಂದು ತಿಳಿಸಿದ್ದರು
ಕ್ಲಬ್ ಕಾರ್ಯದರ್ಶಿ ಕಿರಣ್ ಸ್ಯಾಮುವೆಲ್ ಮಾತಾನಾಡಿ ವಿವಿಧ ಪ್ರಾಯೋಜಕರ ಹಾಗೂ ಅಟಗಾರರ ಮತ್ತು ತಂಡದ ಮಾಲೀಕರ ಸಹಕಾರದೊಂದಿಗೆ ಬಡಮಕ್ಕಳ ವಿದ್ಯಾನಿಧಿಗಾಗಿ ಸುಮಾರು 30 ಲಕ್ಷಕ್ಕೂ ಅಧಿಕ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದ್ದು ನಮ್ಮ ತಂಡದ ಒಗ್ಗಟ್ಟಿನ ಕಾರ್ಯದಿಂದ ಅದ್ಭುತ ಲೀಗ್ ಅಯೋಜನೆ ಯಶ್ವಸಿಯಾಗಿದೆ ಎಂದ್ರು
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ ರಾಯಚೂರು ವಿಭಾಗದ ಸಂಚಾಲಕರಾದ ಕುಶಲ್ ಪಾಟೀಲ್ ಗಾದಗಿ ಮಾತನಾಡಿ, ‘ನಮ್ಮ ಭಾಗದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು,” ಎಂಬ ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅವರು, ಲೀಗ್‌ನಲ್ಲಿ ವಿಶೇಷ ಪ್ರಶಸ್ತಿ ಗೆದ್ದ ಆಟಗಾರರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಟಿಕೆಟ್ ವ್ಯವಸ್ಥೆ ಮಾಡಿಕೊಡುವುದಾಗಿ ಘೋಷಿಸಿ ಆಟಗಾರರನ್ನು ಪ್ರೋತ್ಸಾಹಿಸಿದರು.
ಪಂದ್ಯದ ಫಲಿತಾಂಶ: ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ನಿರ್ಮಾಣ್ ನಿಂಜಾಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೀದರ್ ತಂಡವು 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಭಾವೇಶ್ ಪಟೇಲ್ ಅವರ ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ಮತ್ತು ದತ್ತಾತ್ರೇಯ ಪಾಟೀಲ್ ಅವರ ಶಿಸ್ತುಬದ್ಧ ಬೌಲಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.
ಈ ಸಂದರ್ಭದಲ್ಲಿ ಕಲ್ಯಾಣ ವಲಯದ ಗವರ್ನರ್ ರೋ.ಹಾವಶೆಟ್ಟಿ,ಪತ್ರಕರ್ತರಾದ ಶಿವಶರಣಪ್ಪ ವಾಲಿ, ಬಿವಿಬಿ ಕ್ಯಾಂಪನ್ ಸಂಚಾಲಕರಾದ ರಜನೀಶ ವಾಲಿ, ಕ್ಲಬ್ ಸಲಹೆಗಾರ ಬಸವರಾಜ್ ಧನ್ನೂರ್, ಲೀಗ್ ನ ಪ್ರೊಜೆಕ್ಟ್ ಡೈರೆಕ್ಟರ್ ಹಾಗೂ ಕ್ಲಬ್ ಉಪಾಧ್ಯಕ್ಷ ಅನಂದ ಕೋರ್ಟಕಿ, ಜಂಟಿ ಕಾರ್ಯದರ್ಶಿ ಹಾಗೂ ಕೋ-ಆರ್ಡಿನೇಟರ್ ಭಾವೇಶ ಪಾಟೀಲ್, ಲೀಗ್ ನ ಯೋಜನಾ ನಿರ್ದೇಶಕಿ ಸ್ಪೂರ್ತಿ ಧನ್ನೂರ್, ಕ್ಲಬ್ ಖಜಾಂಚಿ ಅಂಬರೇಶ ಅಂಬೇಸಾಗೆ, ಅಭಿಷೇಕ ಪೋಲಾ, ರೋ.ಪೂಜಾ ಕೊಂಡಿ ಸಹನಾ ಪಾಟೀಲ್ ತಂಡದ ಮಾಲೀಕರಾದ ಮನೀಶ್ ಸಿಂಧೋಲ್, ಸಂತೋಷ್ ರೇಜಿಂತಲ್,ಕಿಶನ್ ಬಿಯಾನಿ, ಸಾಗರ್ ನಾಯಕ್, ಡಾ. ವಸಂತ್ ಪವಾರ್, ಗಣೇಶ್ ಪಾಟೀಲ್, ರವಿ ಮೂಲಗೆ, ಚಂದ್ರಶೇಖರ್ ಪಾಟೀಲ್ ನವೀನ್ ಗೋಯಲ್, ಸಿದ್ದಾರ್ಥ್ ಮೋರೆ, ನಿತಿನ್ ಕರ್ಪೂರ್ ಮನೀಶ್ ರಂಗ್ಲಾಲ್, ಗಜಾನನ ಪೋಕಲವಾರ್,ವಿಕ್ರಮ್ ತಗಾರೆ ಸೇರಿದಂತೆ ಅನೇಕ ಗಣ್ಯರು ಹಾಗೂ ತಂಡಗಳ ಮಾಲೀಕರು ಉಪಸ್ಥಿತರಿದ್ದರು.
