ಔದ್ಯೋಗಿಕ ಅರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ಅತೀ ಹಿoದುಳಿದ ಮಹಾತ್ವಕಾಂಕ್ಷೆ ಜಿಲ್ಲೆಯಾದ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆ ಮಂಜೂರು ಮಾಡಲೇ ಬೇಕು.
1000ದಿನಗಳಿಗೆ ಮುನ್ನುಗ್ಗುತ್ತಿರುವ ಏಮ್ಸ್ ಹೋರಾಟಕ್ಕೆ ಗೌರವ ನೀಡಿ ಏಮ್ಸ್ ಮಂಜೂರು ಮಾಡಲು ಒತ್ತಾಯಿಸುತ್ತೇವೆ.
ಕೇಂದ್ರ ಸರ್ಕಾರ ಜೆ. ಪಿ. ನಡ್ದಾ ಅವರ ಪಾತ್ರಕ್ಕೆ ಹಣಕಾಸು ಮಂತ್ರಿ ನಿರ್ಮಲ ಸೀತಾರಮಾನ್ ಅವರು ಕೇವಲ ಪರಿಶೀಲನೆ ಮಾಡುತ್ತೇವೆ. ಎಂಬ ಉಲ್ಲೇಖ ನೀಡುವ ಮೂಲಕ ಪತ್ರ ಬರೆದಿದ್ದು ನಮ್ಮ ಜಿಲ್ಲೆಯ ಜನರ ಮಹತ್ವಕಾಕ್ಷೆ ಯೋಜನೆಗೆ ಕೇಂದ್ರ ಸರ್ಕಾರ ತನ್ನ ಬೇಜವಾಬ್ದಾರಿಯನ್ನು ಮುಂದುವರಿಸಿದೆ . ಎಂದು ಹೇಳಲೇ ಬೇಕಾಗಿದೆ ಮತ್ತು ಇಂತಹ ನಡೆಯನ್ನು ನಾವು ಖಂಡಿಸುತ್ತೇವೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರಾಯಚೂರಿಗೆ ಏಮ್ಸ್ ನೀಡಲು ಕೋರಿ ಬರೆದಿರುವ ಪಾತ್ರಕ್ಕೂ ಮಾನ್ಯತೆ ನೀಡದಿರುವುದು ಇಡೀ ರಾಜ್ಯಕ್ಕೆ ಮಾಡುವ ಅವಮಾನ ಎಂದು ಭಾವಿಸಬೇಕಾಗಿದೆ. ಹಣಕಾಸು ಮಂತ್ರಿ ಕರ್ನಾಟವನ್ನು ಪ್ರತಿನಿಧಿಸುತ್ತಿದ್ದಾರೆ.
ಅವರು ರಾಯಚೂರಿಗೆ ಏಮ್ಸ್ ಗಾಗಿ
ಇ ಸಾಲಿನ ಬಜೆಟ್ಟಿನಲ್ಲಿ ಹಣಕಾಸು ವ್ಯವಸ್ಥೆ ಮಾಡಿ ಘೋಷಿಸಬೇಕೆಂದು ಒತ್ತಾಯಿಸುತ್ತೇವೆ.
ಕಲ್ಯಾಣ ಕರ್ನಾಟಕದ ಸರ್ವೋತೋಮುಖ ಅಭಿವೃದ್ಧಿಗಾಗಿ ರಾಯಚೂರಿಗೆ ಏಮ್ಸ್ ಮಂಜೂರು ಬಹಳ ಅಗತ್ಯ ಇರುವುದರಿಂದ ಇದೆ ವರ್ಷದ ಮುಂದಿನ ಬಜೆಟ್ ನಲ್ಲಿ ರಾಯಚೂರಿಗೆ ಏಮ್ಸ್ ಘೋಷಣೆ ಮಾಡಿ ಕರ್ನಾಟಕದ ಋಣ ತೀರಿಸಬೇಕೆಂದು
ಹಣಕಾಸು ಮಂತ್ರಿ ಯವರಿಗೆ ನೆನಪು ಮಾಡಲು ಇಚ್ಚಿಸುತ್ತೇವೆ.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳಿವೆ.
ಅಪೌಷ್ಟಿಕತೆಯಿಂದ ಮಹಿಳೆ ಮತ್ತು ಮಕ್ಕಳ ಸಾವಿನ ಪ್ರಮಾಣ ಹೆಚ್ಚು ಇರುವುದರಿಂದ
ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ಜನರಿಗೆಬೇಕಾದ ಆರೋಗ್ಯ ಸೇವೆಗಳು ಬಗ್ಗೆ ರಾಜ್ಯ ಸರ್ಕಾರ ಪತ್ರಗಳನ್ನು ಕೇವಲ ಕೇಂದ್ರ ಸರ್ಕಾರದ ಪತ್ರಗಳನ್ನು ಸ್ವೀಕರಿಸುವುದು ಮಾತ್ರವಲ್ಲದೆ ಇಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಈ ಭಾಗದ ಸ್ಥಳೀಯ ಶಾಸಕರು, ಸಂಸದರು, ಸಚಿವರು ಕೂಡ ಸರ್ಕಾರಕ್ಕೆ ಒತ್ತಾಯಿಸುವಂತಹ ಕೆಲಸವನ್ನು ಮಾಡಬೇಕಾಗಿದೆ.
ಅದು ಅವರ ಪ್ರಮುಖ ಆಧ್ಯಾತೆಯಾಗಬೇಕು ಹಾಗಾಗಿ ನಾಳೆ ಮಂಡನೆಯಗಳಿರುವ ಕೇಂದ್ರ ಬಜೆಟ್ ನಲ್ಲಿ ರಾಯಚೂರಿಗೆ ಏಮ್ಸ್ ಘೋಷಣೆ ಆದರೆ ಈ ಭಾಗದ ಜನರಿಗೆ ತುಂಬಾ ಸಂತೋಷ ನೀಡುವ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿ ಕೂಡ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಶಾಸಕರು ಸಂಸದರು ಸಚಿವರು ರಾಜಕಾರಣಿಗಳು ಶ್ರಮ ವಹಿಸಬೇಕು ಎಂದು ವಿನಂತಿ ಪೂರ್ವಕವಾಗಿ ಒತ್ತಾಯಿಸುತ್ತೇವೆ ಎಂದು ಸಾದಿಖ್ ಖಾನ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.