ಸರಕಾರದ ಸುಗ್ರೀವಾಜ್ಞೆ ಇದ್ದರೂ ಕೂಡ ಅಕ್ರಮ ಮೈಕ್ರೋಫೋನ್ ನಡೆಸುವವರ ಬಡ್ಡಿ ದಂದೆಗೆ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಸರ್ಕಾರದ ಆಜ್ಞೆ ಧಿಕ್ಕರಿಸಿದ ಇವರ ಮೇಲೆ ಯಾವುದೇ ರೀತಿಯ ಕಾನೂನು ಕ್ರಮ ಆಗುತ್ತಿಲ್ಲ ಎಂದು ಚೆನ್ನಯ್ಯ ವಸ್ತ್ರದ ಕಿಡಿ ಕಾರಿದ್ದಾರೆ ರಾಜ್ಯದಲ್ಲಿ ಅಕ್ರಮ ಮೈಕ್ರೋ ಫೈನಾನ್ಸ್ ಗಳ ಬಡ್ಡಿ ದಂಧೆಯಿಂದ ಸಾಕಷ್ಟು ಸಾವು ನೋವು ಸಂಭವಿಸಿದ ಮೇಲೆ ಕೆಲವು ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಸುಗ್ರೀವಾಜ್ಞೆ ಹೊರಡಿಸಿತ್ತು ಸುಗ್ರೀವಾಜ್ಞೆಯ ಪ್ರಕಾರ ಮನೆಯ ಮುಂದೆ ನಿಂತು ಬಡ್ಡಿ ವಸೂಲಿ ಮಾಡುವಂತಿಲ್ಲ ಕಿರುಕುಳ ನೀಡುವಂತಿಲ್ಲ ಯಾವುದೇ ರೀತಿಯ ಮಾನಹಾನಿ ಮಾಡುವಂತಿಲ್ಲ ಒಂದು ವೇಳೆ ಇಂತಹ ಘಟನೆಗಳ ನಡೆದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರಕಾರ ಈ ಹಿಂದೆ ಸುಗ್ರೀವಾಜ್ಞೆ ಹೊರಡಿಸಿದ್ದು ಆದರೆ ಮೈಕ್ರೋ ಫೈನಾನ್ಸ್ ಗಳು ಯಥಾ ಸ್ಥಿತಿಯಲ್ಲಿ ತಮ್ಮ ಕಾಯಕವನ್ನು ಮುಂದುವರಿಸಿದ್ದಾರೆ ಕಲ್ಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮಸ್ಥರ ಮನೆ ಮುಂದೆ ನಿಂತು ಮಾನಹಾನಿ ಮಾಡಿದ್ದಾರೆ ಮನನೊಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ರೀತಿಯ ಘಟನೆಗಳು ಪುನಃ ಪುನಃ ನಡೆಯುತ್ತಿದ್ದರು ಸುಗ್ರೀವಾಜ್ಞೆ ಪಾಲಿಸಬೇಕಾಗಿದ್ದ ಮೈಕ್ರೋ ಫೈನಾನ್ಸ್ ಗಳು ಆದೇಶವನ್ನು ಧಿಕ್ಕರಿಸಿದ್ದಾರೆ ಜೊತೆಗೆ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿ ಹೇಳಬೇಕಾಗಿದ್ದ ಇಲಾಖೆಗಳು ಕೈಕಟ್ಟಿ ಕುಳಿತಿದ್ದಾರೆ ಇದೇ ರೀತಿ ಮುಂದುವರೆದರೆ ಸಂಬಂಧಪಟ್ಟ ಇಲಾಖೆಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ ಚನ್ನಯ್ಯ ವಸ್ತ್ರದ ಆಕ್ರೋಶ ವ್ಯಕ್ತಪಡಿಸಿದ್ದಾರೆ.