ಔರಾದ್ : ದೇಶದ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ನಾಡಿನ ಮಹಾನ್ ಚೇತನ ಎಂದು ಸಂಪನ್ಮೂಲ ಶಿಕ್ಷಕ ಶಾಮಸುಂದರ ಖಾನಾಪುರ ಹೇಳಿದರು. ತಾಲೂಕಿನ ಎಕಲಾರ ಗ್ರಾಮದಲ್ಲಿ ಭಾನುವಾರ ನಡೆದ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರ ಚಿಂತನೆಗಳು ನಮಗೆಲ್ಲಾ ಸ್ಫೂರ್ತಿಯಾಗಿದ್ದು, ಅವರು ನೀಡಿದ ಸಮಾನತೆಯ ತತ್ವಗಳು ಇಂದು ಎಲ್ಲ ಜನಾಂಗದವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಸಮಾಜದಲ್ಲಿನ ಅನ್ಯಾಯ ವಿರುದ್ಧ ಹೋರಾಡುವಂತಾಗಬೇಕು. ಕೇವಲ ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರಾದರೆ ಸಾಲದು, ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ರತ್ನದೀಪ ಕಸ್ತೂರೆ ಮಾತನಾಡಿ, ಭಾರತೀಯರ ಪವಿತ್ರ ಗ್ರಂಥವಾದ ದೇಶದ ಆತ್ಮವೆಂದೇ ಕರೆಯಬಹುದಾದ ಸಂವಿಧಾನ ರಚನೆಯ ಹಿಂದಿನ ದೊಡ್ಡ ಶಕ್ತಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್. ಅವರ ಜಯಂತಿಯನ್ನು ಕೇವಲ ಒಂದು ದಿನ ಆಚರಣೆ ಸೀಮಿತವಾಗಿದೆ. ಎಲ್ಲ ದಿನದಲ್ಲಿಯೂ ಅಂಬೇಡ್ಕರ್ ಅವರ ಆಚಾರ-ವಿಚಾರಗಳು ಪಾಲಸಬೇಕಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸುನಿತಾ ಶಿವಶಂಕರ ಕಾರ್ಯಕ್ರಮ ಉದ್ಘಾಟಿಸಿದರು. ಗುತ್ತಿಗೆದಾರ ಶಿವಶಂಕರ ಎಕಲಾರ, ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ ಪಾಟೀಲ, ಗ್ರಾಪಂ ಸದಸ್ಯ ಶಾಂತಪ್ಪ ರಾಮಚಂದ್ರ, ಬಕ್ಕಪ್ಪಾ ಸುಗೊಂಡ, ಸಂಜುಕುಮಾರ ಶಿಂಧೆ, ಸತೀಶ ಕಸ್ತೂರೆ, ತುಕಾರಾಮ ವರ್ಮಾ, ಆಕಾಶ ರಾಜಪುರೆ, ಅಮರ ಸೂರ್ಯವಂಶಿ, ಪವನ ವರ್ಮಾ, ರೋಹಿತ ಕಾಂಬಳೆ ಸೇರಿದಂತೆ ಅನೇಕರಿದ್ದರು.
ವರದಿ : ರಾಚಯ್ಯ ಸ್ವಾಮಿ