ಸುಮಾರು ವರ್ಷಗಳಿಂದ ರಸ್ತೆ ನಾಲೆ ಇಲ್ಲದೆ ಸಾರ್ವಜನಿಕರ ಪರದಾಟ

ಚಿಂಚೋಳಿ ಪಟ್ಟಣದ ಚಂದಾಪುರ ದರ್ಗಾ ಏರಿಯಾದ ಶಾರದಾ ಸ್ಕೂಲ್ ಹತ್ತಿರ ಸುಮಾರು ವರ್ಷಗಳಿಂದ ರಸ್ತೆ ನಾಲೆ ಇಲ್ಲದೆ ಸಾರ್ವಜನಿಕರ ಪರದಾಟ. ಪ್ರತಿನಿತ್ಯ ಈ ರಸ್ತೆ ಮುಖಾಂತರ ನೂರಾರು ಶಾಲೆಯ ಮಕ್ಕಳು ಮತ್ತು ಹಿರಿಯ ನಾಗರಿಕರು ಓಡಾಡುತ್ತಿದ್ದು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ ಗಬ್ಬೆದ್ದು ನಾರುತ್ತಿರುವ ಚರಂಡಿ ದುರ್ವಾಸನೆ, ಆದರೆ ಇದನ್ನು ಕಂಡು ಕಾಣದಂತೆ ಕುಳಿತಿರುವ ಕುಂಭಕರ್ಣನ ನಿದ್ದೆಯಲ್ಲಿರುವ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು. ಇಲ್ಲಿನ ವಾಸಿಗಳು ಹಲವು ಬಾರಿ ಪುರಸಭೆ ಸದಸ್ಯರಿಗೆ ಹಾಗೂ ಪುರಸಭೆ ಅಧ್ಯಕ್ಷರಿಗೆ ಮೌಖಿಕವಾಗಿ ಲಿಖಿತವಾಗಿ ಪತ್ರಿಕೆ ಮುಖಾಂತರ ತಿಳಿಸಿದರು ಕೂಡ ಈ ಸಮಸ್ಯೆ ಗಾಂಭೀರ್ಯವನ್ನು ಅರಿತುಕೊಂಡಿಲ್ಲ ಇಂಥ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಇಲ್ಲಿನ ನಿವಾಸಿಗಳು ಹಿಡೀ ಶಾಪವನ್ನು ಹಾಕುತ್ತಿದ್ದಾರೆ! ಸಂಜು ಕುಮಾರ ಸುಲೆಪೇಟ ನಿವಾಸಿ ಪ್ರತಿಕ್ರಿಯಿಸಿ ಹಲವು ವರ್ಷಗಳಿಂದ ರಸ್ತೆ ಚರಂಡಿ ಕುಡಿಯುವ ನೀರು ವ್ಯವಸ್ಥೆ, ಸರಿಯಾಗಿ ಇಲ್ಲ ಹಲವು ಬಾರಿ ಇಲ್ಲಿ ಗೆದ್ದಂತ ಜನಪ್ರತಿನಿಧಿಗಳು ಹೇಳಿದರು ಕೂಡ ಅವರ ಕಿವಿಗೆ ಮುಟ್ಟುತ್ತಿಲ್ಲ ಕಣ್ಣಿಗೆ ಕಾಣುತ್ತಿಲ್ಲ ಇಂಥ ಜನಪ್ರತಿನಿಧಿಗಳು ಗೆಲ್ಲುತ್ತಿರುವುದು ನಮ್ಮ ದುರ್ದೈವ . ತಮ್ಮ ಪತ್ರಿಕೆ ಮುಖಾಂತರವಾದರೂ ಕೂಡ ಈ ರಸ್ತೆ ಚರಂಡಿ ವ್ಯವಸ್ಥೆ ಆದರೆ ತುಂಬಾ ಉಪಕಾರ ಮಾಡಿದಂತಾಗುತ್ತದೆ ಒಂದು ವೇಳೆ ಮಳೆಗಾಲ ವಿಪರೀತ ಇದ್ದು ಹೆಚ್ಚಿನ ಸಮಸ್ಯೆ ಉಲ್ಬಣವಾದರೆ ಪುರಸಭೆಗೆ ಹೋಗಿ ನಿವಾಸಿಗಳೆಲ್ಲಾ ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು. ಮೋನು ಪ್ರತಿಕ್ರಿಯೆಸಿ ಹಲವಾರು ವರ್ಷಗಳಿಂದ ರಸ್ತೆ ಚರಂಡಿ ನೀರಿನ ಸಮಸ್ಯೆ ಇದ್ದು ಯಾರು ಕೂಡ ಬಗೆಹರಿಸಿಲ್ಲ ಆದಷ್ಟು ಬೇಗ ಈ ರಸ್ತೆ ಸುಧಾರಣೆ ಹಾಗೂ ಚರಂಡಿ ಸುಧಾರಣೆ ಮಾಡುತ್ತಾರೆಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!