ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಚಿಂಚೋಳಿ ತಾಲೂಕ ಅಧ್ಯಕ್ಷರನ್ನಾಗಿ ಅಭಿಷೇಕ ಮಲಕನೂರ ನೇಮಕ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ (ರಿ.) ಬೆಂಗಳೂರು ಯುವ ಘರ್ಜನೆ ಚಿಂಚೋಳ್ಳಿ ತಾಲ್ಲೂಕು ಅಧ್ಯಕ್ಷರನ್ನಾಗಿ ಅಭಿಷೇಕ ಮಲಕನೂರ ಆಯ್ಕೆ ಮಾಡಿರುತ್ತೇವೆ.

ನೀವು ನಮ್ಮ ಯುವ ಘರ್ಜನೆಯ ನೀತಿ ನಿಯಮಗಳಿಗೆ ಬದ್ಧರಾಗಿದ್ದು ರಾಜ್ಯಾಧ್ಯಕ್ಷರಿಗೆ ಸಹಕಾರ ನೀಡುವ ಮೂಲಕ ಮತ್ತು ಎಲ್ಲಾ ನಿಯಮ ನಿಬಂಧನೆಗಳಿಗೂ ಬದ್ಧನಾಗಿರತಕ್ಕದ್ದು ಹಾಗೂ ರೇವಣಸಿದ್ದರನ್ನು ಗುರುವೆಂದು ಕುರುಬ ಕುಲದ ದೈವಗಳನ್ನು ದೇವರೆಂದು ಡೊಳ್, ಕಂಬಳಿ, ಕಂಸಾಳೆ, ವೀರಗಾಸೆ, ಕರಡಿಕುಣಿತ ಇನ್ನಿತರೇ ಕುರುಬ ಕುಲದ ಸಾಂಸ್ಕೃತಿಕ ವಾಧ್ಯ ಮತ್ತು ಕಲೆಗಳಿಗೆ ಬೆಲೆ ಕೊಟ್ಟು ಬಂಡಾರವನ್ನು ಗೌರವಿಸುತ್ತಾ ಕನಕದಾಸರನ್ನು ಶ್ರೇಷ್ಠ ಸಂತರೆಂದು ಕುರುಬ ಕುಲದ ಎಲ್ಲಾ ಹಿರಿಯ ಮತ್ತು ನಾಯಕರುಗಳನ್ನು ಹಾಗೂ ಕಾರ್ಯಕರ್ತರನ್ನು ಗೌರವಿಸುತ್ತಾ, ಸಮಾಜದ ಎಲ್ಲರ ಜೊತೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಹಾಗೂ ವೇದಿಕೆಯು ತೋರುವ ಸನ್ಮಾರ್ಗದಲ್ಲಿ ಮತ್ತು ವೇದಿಕೆಗೆ, ಕುರುಬ ಸಮಾಜಕ್ಕೆ ಆಘಾತ, ಧಕ್ಕೆ, ಅವಮಾನ, ಆಗದ ರೀತಿಯಲ್ಲಿ ನಡೆದುಕೊಳ್ಳುತ್ತೀರೆಂದು ತಮ್ಮ ತನು, ಮನ ಹಾಗೂ ಧನಗಳನ್ನು ವೇದಿಕೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು
ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮೌರ್ಯ ಅನುಮತಿ ಮೇರೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಧನು ಬಿ ಆರ್ ಗೌಡ ಅವರು ಆದೇಶ ವನ್ನು ಹೊರಡಿಸಿದ್ದಾರೆ.

error: Content is protected !!