ಬೆಂಗಳೂರು :
ದಿನಾಂಕ:07/10/2025 ರಂದು ಹೆಚ್.ಎಸ್.ಆರ್ ಲೇಔಟ್, ಪೊಲೀಸ್ ಠಾಣಾಧಿಕಾರಿಯವರಿಗೆ ಬಾಧಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಸೈಬರ್ ಅಪರಾಧ ಕೃತ್ಯಕ್ಕಾಗಿ Cybits Solutions Pvt. Ltd ಹೆಸರಿನ ನಕಲಿ ಕಾಲ್ ಸೆಂಟರ್ ಕಂಪನಿಯೊಂದನ್ನು ತೆರೆದು ಸುಮಾರು 20-25 ಯುವಕರು ಮತ್ತು ಯುವತಿಯರನ್ನು ಆನ್ ಲೈನ್ ಮೂಲಕ ಕೆಲಸಕ್ಕೆಂದು ಕರೆಯಿಸಿಕೊಂಡು, ಅವರುಗಳಿಗೆ ಆನ್ ಲೈನ್ ಮೂಲಕ ಜನರಿಗೆ ವಂಚಿಸುವ ಸೈಬರ್ ವಂಚನೆಯ ತರಬೇತಿ ನೀಡಿ, ಅವರ ಜೊತೆಯಲ್ಲಿ ಅಪರಾಧಿಕ ಒಳಸಂಚು ನಡೆಸಿ, ಆನ್ ಲೈನ್ ಮುಖೇನ ಅಪರಿಚಿತ ಜನರ ಮಾಹಿತಿ ಸಂಗ್ರಹಿಸಿ, ಅವರುಗಳನ್ನು ಪೋನ್ ಮುಖೇನ ಸಂಪರ್ಕಿಸಿ, ಅವರಿಗೆ ಮಾದಕ ವಸ್ತುಗಳ ಕಾಯ್ದೆ ಅಪರಾಧ ಮಾಡಿರುವ ಬಗ್ಗೆ ಮತ್ತು ಮನಿಲ್ಯಾಂಡರಿಂಗ್ ವಂಚನೆ ಮಾಡಿರುವ ಪ್ರಕರಣ ದಾಖಲಾಗಿದೆ ಎಂದು ಹೆದರಿಸುವುದಲ್ಲದೆ ತನಿಖಾ ಸಂಸ್ಥೆ ಅಥವಾ ಪೊಲೀಸ್ ಏಜೆನ್ಸಿ ರವರೆಂದು ಹೇಳಿಕೊಂಡು, ಅಮಾಯಕರಿಗೆ ಹೆದರಿಸಿ ಸಹಾಯ ಮಾಡುವ ನೆಪದಲ್ಲಿ ಆಮಿಷ ಒಡ್ಡಿ, ಅವರುಗಳಿಂದ ಅಕ್ರಮವಾಗಿ ಆನ್ ಲೈನ್ ಮುಖೇನ ಹಣವನ್ನು ಪಡೆದುಕೊಂಡು ಅಕ್ರಮವಾಗಿ ಲಾಭ ಪಡೆದು, ಸೈಬರ್ ಅಪರಾಧಗಳನ್ನು ಎಸಗುತ್ತಿದ್ದಾರೆಂದು ಮಾಹಿತಿಯಲ್ಲಿ ತಿಳಿಸಿರುತ್ತಾರೆ. ಈ ಕುರಿತು ಹೆಚ್.ಎಸ್.ಆರ್ ಲೇಔಟ್, ಪೊಲೀಸ್ ಠಾಣೆಯ ಠಾಣಾಧಿಕಾರಿಯವರು ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿರುತ್ತಾರೆ.
ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರವರು ಈ ಪ್ರಕರಣದ ತನಿಖೆಯನ್ನು ಹೆಚ್.ಎಸ್.ಆರ್ ಲೇಔಟ್, ಪೊಲೀಸ್ರವರು ಮತ್ತು ಆಗ್ನಿಯ ವಿಭಾಗದ ಸಿ.ಇ.ಎನ್ ಪೊಲೀಸ್ರವರು ಕೈಗೊಳ್ಳುವಂತೆ ಸೂಚಿಸಿರುತ್ತಾರೆ. ತನಿಖೆಯನ್ನು ಮುಂದುವರೆಸಿ, ಸೈಬರ್ ಅಪರಾಧಗಳನ್ನು ಎಸಗುತ್ತಿರುವ ಸ್ಥಳಕ್ಕೆ ತನಿಖಾಧಿಕಾರಿಗಳು ಭೇಟಿ ನೀಡಿ, ದಾಳಿ ನಡೆಸಿರುತ್ತಾರೆ. ದಾಳಿ ಸಮಯದಲ್ಲಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಗಳನ್ನು ಪ್ರಶ್ನಿಸಲಾಗಿರುತ್ತದೆ. ಅವರುಗಳು ವರ್ಕ್ ಇಂಡಿಯಾ, ಲಿಂಕ್ಲಿನ್ ಮಾದರಿಯ ಸಾಮಾಜಿಕ ಜಾಲತಾಣದಲ್ಲಿ ಬರುವ ಜಾಬ್ ಆಫರಿಂಗ್ ಮತ್ತು ವೆಬ್ ಸೈಟ್ ನಲ್ಲಿ ಕೆಲಸ ಕೊಡಿಸುವ ಸಲುವಾಗಿ ಮಾಹಿತಿಯನ್ನು ಅಪಲೋಡ್ ಮಾಡಿದ್ದು, ನಂತರ ಕಂಪನಿಯ ಮ್ಯಾನೇಜರ್ | ಉಸ್ತುವಾರಿಗಳು ಬೆಂಗಳೂರಿನಲ್ಲಿರುವ ಯು.ಎಸ್.ಎ, ಕೆನಡಾ ಮತ್ತು ಇತರೆ ದೇಶಗಳಿಗೆ ಆನ್ ಲೈನ್ ಮಾಹಿತಿ ಸೇವೆ ಒದಗಿಸುವ ಕಾಲ್ ಸೆಂಟರ್ಗಳಲ್ಲಿ ಕೆಲಸ ಮತ್ತು ವಸತಿ ಸೌಲಭ್ಯ ಒದಗಿಸುವ ಆಮಿಷವೊಡ್ಡಿ ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಕರೆಯಿಸಿಕೊಂಡು, ಹೆಚ್.ಎಸ್.ಆರ್ ಲೇಔಟ್ ಮತ್ತು ಬಿ.ಟಿ.ಎಂ. ಲೇಔಟ್ನಲ್ಲಿ ವಾಸಕ್ಕಾಗಿ ಮನೆಗಳನ್ನು ಮತ್ತು ಕ್ಯಾಬ್ಗಳ ಸೇವೆ ಮತ್ತು ಊಟದ ವ್ಯವಸ್ಥೆಯನ್ನು ಸಹ ಮಾಡಿರುತ್ತಾರೆ. ಮೂರು ವಾರಗಳ ಟೆಲಿಕಾಲರ್ ತರಭೇತಿ 2 , U.S BORDER SECURITY FORCE/ U.S POSTΑΙ. SERVICES/U.S CUSTOMS AND BORDER PROTECTION FORCE ತಿಳಿಸಿ, ಕಂಪನಿಯವರು ನೀಡಿರುವ ಲೈವ್ ಸರ್ವರ್ ನಲ್ಲಿ ಪೋನ್ ಮುಖೇನ ಸಾರ್ವಜನಿಕರಿಗೆ ಮಾತಾಡಿ, DRUGS TRAFFICKING / MONEY LANDRING ಪ್ರಕರಣದಲ್ಲಿ ಸಿಕ್ಕಿಕೊಂಡಿರುವಂತೆ ಹೆದರಿಸಿ, ಅವರಿಗೆ Fake arrest warrant ಮತ್ತು ನಕಲಿ ಪೊಲೀಸ್ ಐ.ಡಿ ಗಳನ್ನು ತೋರಿಸಿ ಬಂಧನದಿಂದ ರಕ್ಷಿಸಲು ಹಣಕ್ಕೆ ಬೇಡಿಕೆ ಇಟ್ಟು “Digital Arrest” ಅಪರಾಧದ ಮೂಲಕ ಅವರುಗಳು ನಮ್ಮಗಳ ಮಾತನ್ನು ಕೇಳುವಂತೆ ಮಾಡಬೇಕೆಂದು ತಿಳಿಸಿ, ಹಣವನ್ನು ಕಂಪನಿಯ ವ್ಯಾಲೇಟ್ ಗೆ/ ಅಕೌಂಟ್ ಗೆ ಹಾಕಿಸಿಕೊಂಡು ವಂಚನೆ ಮಾಡುತ್ತಿರುವುದಾಗಿ ತಿಳಿಸಿದರು. ಈ ಕೃತ್ಯಕ್ಕೆ ಕಂಪನಿಯಿಂದ ನೀಡಿದ ಲೈವ್ ಸರ್ವರ್ ಸಾಫ್ಟ್ ವೇರ್ ನಲ್ಲಿ ವ್ಯವಹರಿಸಿರುವುದಾಗಿ ತಿಳಿಸಿದರು.
ಕಂಪ್ಯೂಟರ್ ಸಿಸ್ಟಮ್ ಗಳನ್ನು ಪರಿಶೀಲಿಸಲಾಗಿ, Justpaste.it site ಬಳಸಿಕೊಂಡು “Digital Arrest script” ಗಳನ್ನು ಅಲ್ಲಿ ಪೇಸ್ಟ್ ಮಾಡಿ ಬಳಸಿಕೊಳ್ಳುತ್ತಿರುವುದು ಮತ್ತು ವಿವಿಧ Online Application ಗಳನ್ನು ಬಳಸಿಕೊಂಡು ಇಂಟರ್ನೆಟ್ ಮೂಲಕ ಕರೆಗಳನ್ನು ಮಾಡಿ ಯು.ಎಸ್.ಎ ನಾಗರಿಕರಿಗೆ ಮಾದಕ ವಸ್ತುಗಳ ಕಾಯ್ದೆ ಅಪರಾಧ ಮಾಡಿರುವ ಬಗ್ಗೆ ಮತ್ತು ಮನಿಲ್ಯಾಂಡರಿಂಗ್ ವಂಚನೆ ಮಾಡಿರುವ ಹಾಗೂ ಇತರೆ ಕಾರಣಗಳನ್ನು ಹೇಳಿ ಹೆದರಿಸಿ ವಂಚನೆ ಮಾಡುತ್ತಿರುವುದು ತನಿಖೆಯಿಂದ ತಿಳಿದಿರುತ್ತದೆ.
ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಈ ಕೆಳಕಂಡ ಎಲೆಕ್ಟ್ರಾನಿಕ್ ಸಾಧನಗಳನ್ನು ತನಿಖೆಗಾಗಿ ವಶಪಡಿಸಿಕೊಳ್ಳಲಾಗಿರುತ್ತದೆ. 1) 41 ಕಂಪ್ಯೂಟರ್ ಸಿಸ್ಟಮ್ಸ್ (41 ಮೊನಿಟರ್, 40 ಸಿ.ಪಿ.ಯು, 41 ಮೌಸ್, 41 ಕಿ ಬೋರ್ಡ್, 41 ಎಜಿಎ ಕೇಬಲ್, 82 ಪವರ್ ಕೇಬಲ್, 21 ಲ್ಯಾನ್ ಕೇಬಲ್) 2) 2 ಆಟೆಂಡನ್ಸ್ ರೆಜಿಸ್ಟರ್ ಮತ್ತು 04 ಸ್ತ್ರೀಪ್ ನೊಟ್ ಬುಕ್ ಗಳು 3)25 ಮೊಬೈಲ್ ಫೋನ್ಗಳು ಮತ್ತು ಐ.ಡಿ ಕಾರ್ಡ್ಗಳು 4) 1 EPABX ಡಿವೈಸ್, 4 D-link switch, 4 Router ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ-08. ಮೇಘಾಲಯದ-04, ಒರಿಸ್ಸಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ಮೂಲದ 04 ಆರೋಪಿಗಳು ಸೇರಿದಂತೆ ಒಟ್ಟು 16 ಆರೋಪಿತರನ್ನು ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿರುತ್ತದೆ.
ಈ ಕಾರ್ಯಾಚರಣೆಯನ್ನು ಅಗ್ನಿಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ, ಐಪಿಎಸ್ ರವರ ಮಾರ್ಗದರ್ಶನದಲ್ಲಿ ಆಗ್ನಿಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಗೋವರ್ದನ್ ಗೋಪಾಲ್, ರವರ ನೇತೃತ್ವದಲ್ಲಿ, ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹರೀಶ್ ಮತ್ತು ಸಿ.ಇ.ಎನ್ ಪೊಲೀಸ್ ಠಾಣೆಯ ಈಶ್ವರಿ ಪಿ.ಎನ್ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಹೆಚ್.ಎಸ್.ಆರ್ ಮತ್ತು ಸಿ.ಇ.ಎನ್ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂಧಿಗಳ ತಂಡಗಳು ಈ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್ ಬೆಂಗಳೂರು