ಗೋಕಾಕ : ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಸತೀಶ್ ಶುಗರ್ಸ್ನಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಭವ್ಯ ಚಾಲನೆ
ಹುಣಶ್ಯಾಳ ಪಿ.ಜಿ. ಸತೀಶ್ ಶುಗರ್ಸ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯಲ್ಲಿ ಸನ್ 2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಭವ್ಯವಾಗಿ ಚಾಲನೆ ನೀಡಿದರು.
ಈ ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬು ನುರಿಸುವ ಮೂಲಕ ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಿ, ಅಭಿವೃದ್ಧಿಯ ಹೊಸ ಅಲೆಗೆ ದಾರಿ ತೆರೆಸುವ ಸಂಕಲ್ಪ ವ್ಯಕ್ತಪಡಿಸಿ, ನಮ್ಮ ರೈತ ಬಾಂಧವರಿಗೆ ಸಮೃದ್ಧಿ ಮತ್ತು ಸಿಹಿತನದ ಹೊಸ ಬೆಳಕನ್ನು ತರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಚೇರಮನ್ ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ,, ಜಿಲ್ಲೆಯ ಪ್ರಗತಿಪರ ರೈತರಾದ ಬಿ.ಎಚ್.ರೆಡ್ಡಿ, ಮಹಾದೇವ ಪತ್ತಾರ, ಬಸವರಾಜ ಮಾಳೇದವರ, ಸಿದ್ದಪ್ಪ ಹಂಜಿ,ಅಜ್ಜಪ್ಪ ಗಿರಡ್ಡಿ ಹಾಗೂ ಇತರ ಪ್ರಗತಿಪರ ರೈತರು ಮತ್ತು ಹಿರಿಯ ಉಪಾಧ್ಯಕ್ಷರುಗಳಾದ ಪಿ.ಡಿ. ಹಿರೇಮಠ, ಎಲ್.ಆರ್. ಕಾರಗಿ, ಉಪಾಧ್ಯಕ್ಷರುಗಳಾದ ಡಿ.ಆರ್.ಪವಾರ, ವಿ.ಎಮ್ ತಳವಾರ, ಎ.ಎಸ್. ರಾಣಾ, ಪ್ರಧಾನ ವ್ಯವಸ್ಥಾಪಕರುಗಳಾದ ಎಂ.ಬಿ. ಸಾಸಲಟ್ಟಿ, ಮಹೇಶ ಜಿ.ಆರ್ ಮತ್ತು ಕಾರ್ಖಾನೆಯ ಕಾರ್ಮಿಕರು, ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ
