1) ಸುದ್ದ ಗಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ನೈಜೀರಿಯಾದ ಮಹಿಳೆಯ ಕುರಿತು ವಿಶ್ವಾಸಾರ್ಹ ಮಾಹಿತಿಯನ್ನು ಆಧರಿಸಿ, ACP ಎಚ್.ಕೆ. ಮಹಾನಂದ ಅವರ ಮೇಲ್ವಿಚಾರಣೆಯಲ್ಲಿ ಮತ್ತು PI ರಕ್ಷಿತ್ ಎ.ಕೆ. ಅವರ ನೇತೃತ್ವದಲ್ಲಿ CCB ಪಿಎಸ್‌ನಲ್ಲಿ ಈಯಖನ್ನು ದಾಖಲಿಸಲಾಯಿತು. ನಂತರ ನಡೆದ ದಾಳಿಯಲ್ಲಿ ನೈಜೀರಿಯಾದ ಮಹಿಳಾ ಡ್ರಗ್ ಪೆಡ್ಡರ್‌ನ್ನು ಬಂಧಿಸಿ, ಸುಮಾರು 1.52 ಕೋಟಿಯ ಮೌಲ್ಯದ 760 ಗ್ರಾಂ ಎಂ.ಡಿ.ಎಂ.ಏ ಕ್ರಿಸ್ಟಲ್, ಒಂದು ದ್ವಿ ಚಕ್ರ ವಾಹನ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ CCB ಪೊಲೀಸ್ ಠಾಣೆಯಲ್ಲಿ ಮುಂದುವರಿಯುತ್ತಿದೆ.
2) ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಡಿಂಗ್ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ, ACP ಎಚ್.ಕೆ. ಮಹಾನಂದ ಮತ್ತು PI ಮಂಜಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಬೆಂಗಳೂರು ಮೂಲದ ಐದು ಡ್ರಗ್ ಪೆಡ್ಡರ್‌ಗಳನ್ನು ಬಂಧಿಸಿ, ಸುಮಾರು – 60 ಲಕ್ಷ ಮೌಲ್ಯದ 600 ಗ್ರಾಂ ಹೈಡೋ ಗಾಂಜಾ ಮತ್ತು ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಮಹದೇವಪುರದ ಬಿ. ನರಾಯಣಪುರದಲ್ಲಿ ಮನೆ ಬಾಡಿಗೆಗೆ ತೆಗೆದುಕೊಂಡು, ಪರಾರಿಯಾಗಿರುವ ಪ್ರಮುಖ ಡ್ರಗ್ ಪೆಡ್ಡರ್‌ನ ನಿರ್ದೇಶನದಂತೆ ಸಂಘಟಿತ ರೀತಿಯಲ್ಲಿ ಡ್ರಗ್ ಪೆಡ್ಡಿಂಗ್ ಮಾಡುತ್ತಿದ್ದರು. ಘಟನೆ ಸಂಭವಿಸಿದ ನ್ಯಾಯವ್ಯಾಪ್ತಿಯ ಪ್ರಕಾರ ಮಹದೇವಪುರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪರಾರಿಯಾದ ಆರೋಪಿಯನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ. ಎಲ್ಲಾ ಬಂಧಿತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
3) ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಮಹಿಳೆ ಡ್ರಗ್ ಪೆಡ್ಡಿಂಗ್‌ನಲ್ಲಿ ತೊಡಗಿದ್ದಾಳೆ ಎಂಬ ಮಾಹಿತಿಯ ಆಧಾರದ ಮೇಲೆ ACP ಎಚ್.ಕೆ. ಮಹಾನಂದ ಮತ್ತು PI ವಿ.ಡಿ. ಶಿವರಾಜು ಅವರ ನೇತೃತ್ವದಲ್ಲಿ CCB ಪಿಎಸ್‌ನಲ್ಲಿ ಪ್ರಕರಣ ದಾಖಲಿಸಿ ದಾಳಿ ನಡೆಸಲಾಯಿತು.
ಕೆನ್ಯಾದ ಮಹಿಳಾ ಡ್ರಗ್ ಪೆಡ್ಡರ್‌ನ್ನು ಬಂಧಿಸಿ. 4.08 ಕೋಟಿಯ ಮೌಲ್ಯದ 2.044 ಕೆ.ಜಿ. ಎಂ.ಡಿ.ಎಂ.ಏ ಕ್ರಿಸ್ಟಲ್‌ಗಳು, ಮೊಬೈಲ್ ಫೋನ್ ಗಳು ಮತ್ತು ಎಲೆಕ್ಟ್ರಾನಿಕ್ ತೂಕ ಮಾಪಕವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಕಳೆದ ವರ್ಷ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದು, ಕಾಮನಹಳ್ಳಿಯಲ್ಲಿ ಹೇರ್ ಡ್ರೆಸರ್ ಆಗಿ ಕೆಲಸ ಮಾಡುತ್ತಾ, ನೈಜೀರಿಯಾ ಮತ್ತು ಟಾಂಜೇನಿಯಾದ ಇಬ್ಬರು ಪರಾರಿಯಾಗಿರುವ ಆರೋಪಿಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ, ಪರಿಚಿತ ಗ್ರಾಹಕರಿಗೆ ಅಕ್ರಮ ಲಾಭಕ್ಕಾಗಿ ಮಾರಾಟ ಮಾಡುತ್ತಿದ್ದಳು. ತನಿಖೆ CCB ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದೆ.
4) ಕೆ.ಜಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ವಿದೇಶಿ ಅಂಚೆ ಕಚೇರಿಗೆ ವಿದೇಶಗಳಿಂದ ಬಂದ ಶಂಕಾಸ್ಪದ ಪಾರ್ಸೆಲ್‌ಗಳಲ್ಲಿ ಮಾದಕ ವಸ್ತುಗಳಿವೆ ಎಂಬ ಮಾಹಿತಿಯ ಮೇರೆಗೆ, ಅಧಿಕಾರಿಗಳು ಸುಮಾರು ₹ 1.5 ಕೋಟಿಯ ಮೌಲ್ಯದ 1.5 ಕೆ.ಜಿ. ಹೈಡೋ ಗಾಂಜಾ ಮತ್ತು ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಥೈಲ್ಯಾಂಡ್ ಮತ್ತು ಫ್ರಾನ್ಸ್‌ನಿಂದ ಬ್ಯಾಂಡ್ ಬಿಸ್ಕೆಟ್ ಮತ್ತು ಚಾಕೊಲೇಟ್ ಪ್ಯಾಕೆಟ್ ಗಳೊಳಗೆ ಡ್ರಗ್‌ಗಳನ್ನು ಅಡಗಿಸಿ ಕಳುಹಿಸಿದ್ದರು. NDPS ಕಾಯ್ದೆಯಡಿ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಹುಡುಕುವ ಕಾರ್ಯ ಮುಂದುವರಿದಿದೆ.
5) ಬೆಂಗಳೂರು ನಗರದಲ್ಲಿ ಕೆಲವು ವಿದೇಶಿ ಪ್ರಜೆಗಳು ಮಾನ್ಯ ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದಾರೆ ಮತ್ತು ಡ್ರಗ್ ಪೆಡ್ಡಿಂಗ್‌ನಲ್ಲಿ ತೊಡಗಿದ್ದಾರೆ ಎಂಬ ಹಿನ್ನೆಲೆಯಲ್ಲಿ, DCP Crime-2 ರಾಜಾ ಇಮಾಮ್ ಕಾಸಿಂ ಅವರ ನೇತೃತ್ವದಲ್ಲಿ CCB ಮಾದಕ ವಸ್ತು ನಿಯಂತ್ರಣ ಘಟಕ ಮತ್ತು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಅಧಿಕಾರಿಗಳು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಂಟಿ ದಾಳಿ ನಡೆಸಿದರು. ಮಾನ್ಯ ದಾಖಲೆಗಳಿಲ್ಲದೆ ವಾಸಿಸುತ್ತಿದ್ದ || ವಿದೇಶಿ ಪ್ರಜೆಗಳನ್ನು ಬಂಧಿಸಿ, ಈ RRO ಮುಂದೆ ಹಾಜರುಪಡಿಸಲಾಗಿದೆ. FRRO ಆದೇಶದಂತೆ ಬಂಧಿತ ವಿದೇಶಿಗರನ್ನು ವಿದೇಶಿಗರ ಬಂಧನ ಕೇಂದ್ರಕ್ಕೆ ರವಾನಿಸಲಾಗಿದ್ದು, ದೇಶದಿಂದ ಗಡಿಪಾರು ಮಾಡುವ ಕಾನೂನು ಕ್ರಮಗಳು ಪ್ರಗತಿಯಲ್ಲಿವೆ.
PI ಮಂಜಪ್ಪ ಅವರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಮನೆಯ ಮಾಲೀಕರಾದ ಶಿವರಾಮ ಕೃಷ್ಣ (42) ಮತ್ತು ಸಂಗಪ್ಪ ಪಾಟೀಲ (35) ವಿರುದ್ಧ ಕಾನೂನುಬಾಹಿರವಾಗಿ ವಿದೇಶಿಗರಿಗೆ ಮನೆ ಬಾಡಿಗೆ ನೀಡಿದಕ್ಕಾಗಿ ವಿದೇಶಿ ನಾಗರಿಕರ ಕಾಯ್ದೆ 1946ರ ಸೆಕ್ಷನ್ 7(2) ಮತ್ತು BNS-2023ರ ಸೆಕ್ಷನ್ 211 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.
ಪೌರರಿಗೆ ಸಲಹೆ: ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವಾಗ ಕಡ್ಡಾಯವಾಗಿ ಕಾನೂನು ನಿಯಮಗಳನ್ನು ಪಾಲಿಸಿ, ಸ್ಥಳೀಯ ಪೊಲೀಸ್ ಠಾಣೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಮಹದೇವಪುರ ಪಿಎಸ್ 0.600 ಕೆ.ಜಿ. ಹೈಡೋ ಗಾಂಜಾ
60 Lakh
CCB ಪಿಎಸ್ 2.044 ಕೆ.ಜಿ. ಎಂ.ಡಿ.ಎಂ.ಏ ಕ್ರಿಸ್ಟಲ್
4.08 Cr
ಕೆ.ಜಿ.ನಗರ ಪಿಎಸ್ 1.5 ಕೆ.ಜಿ. ಹೈಡೋ ಗಾಂಜಾ
1.5 Cr
ಒಟ್ಟು 4.904 ಕೆ.ಜಿ. ಮಾದಕ ವಸ್ತು
7.708 Cr
ಈ ಎಲ್ಲಾ ಕಾರ್ಯಾಚರಣೆಗಳು ಬೆಂಗಳೂರು ನಗರದ ಪೊಲೀಸ್ ಆಯುಕ್ತರು ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್, ಉಪ ಪೊಲೀಸ್ ಆಯುಕ್ತರು ಅಪರಾದ, ಅಜಯ್ ಹಿಲೋರಿ, ಐಪಿಎಸ್, ಮತ್ತು ಉಪ ಪೊಲೀಸ್ ಆಯುಕ್ತರು ಅಪರಾಧ-2 ರಾಜಾ ಇಮಾಮ್ ಕಾಸಿಂ ಅವರ ಮೇಲ್ವಿಚಾರಣೆಯಲ್ಲಿ ACP ಎಚ್.ಕೆ. ಮಹಾನಂದ, ಹಾಗೂ ಪೊಲೀಸ್ ಇನ್ಸ್ ಪೆಕ್ಟರ್‌ಗಳು ವಿ.ಡಿ. ಶಿವರಾಜು, ಮಂಜಪ್ಪ ಎಸ್.ಎ. ರಕ್ಷಿತ್ ಎ.ಕೆ. ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್ ಬೆಂಗಳೂರು
