ಹುಲಸೂರ : ತಾಲೂಕು ಆಗಿ ಘೋಷಣೆ ಯಾಗಿ ವರ್ಷಗಳೇ ಕಳೆದರು ಇನ್ನು ಗ್ರಾಮ ಪಂಚಾಯತಿ ಆಗಿರುತ್ತದೆ ಆದರೆ ಸರ್ಕಾರ ಜಿಲ್ಲೆಯ ಬೇರೆ ಗ್ರಾಮಗಳನ್ನು ಪಟ್ಟಣ ಪಂಚಾಯತಿ ಮಾಡಿದರು ಹುಲ್ಸುರ್ ಗ್ರಾಮವನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿ ಹುಲ್ಸುರ್ ಗ್ರಾಮ ಪಂಚಾಯತಿ ಪಟ್ಟಣ ಪಂಚಾಯತಿ ಆಗಿ ಮೇಲ್ದರ್ಜೆಗೆರಿಸಿ ಎಂದು ಹುಲಸೂರ ಪಟ್ಟಣ ಪಂಚಾಯತಿ ಹೋರಾಟ ಸಮಿತಿ ಹಾಗು ಗ್ರಾಮಸ್ಥರ ನೇತ್ರತ್ವದಲ್ಲಿ ರವಿವಾರದಂದು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು ಸಭೆಯಲ್ಲಿ ನಿರ್ಣಯಿಸಿದ ಹಾಗೆ ನಾಳೆ ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟು ಬಂದ್ ಮಾಡಿ ಹುಲಸೂರ ಬಸವಕಲ್ಯಾಣ ಮುಖ್ಯ ರಸ್ತೆಯ ಮಿನಿ ಬಸ್ ನಿಲ್ದಾಣದ ಎದುರುಗಡೆ ರಸ್ತೆ ತಡೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ನಿರ್ಣಯಿಸಲಾಗಿದೆ ಎಂದು ಹುಲಸೂರ ಪಟ್ಟಣ ಪಂಚಾಯತಿ ಹೋರಾಟ ಸಮಿತಿಯ ವತಿಯುಂದ ತಿಳಿಸಲಾಗಿದೆ.
ವರದಿ : ಆದಿತ್ಯ ಗಜರೆ
