ಚಿಕೋಡಿ: ಚಿಕ್ಕೋಡಿ-ಸದಲಗಾ
ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 4 ಕೋಟಿ ರೂ ಅನುದಾನವನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದರು.
ಯಕ್ಸಂಬಾ ಪಟ್ಟಣದ ಗೃಹ ಕಚೇರಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಗಣೇಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಸಿಎಂ ಸಿದ್ದರಾಮ ಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಮತ್ತು ವಿವಿಧ ಸಚಿವರು ಅನುದಾನಮಂಜೂರು ಮಾಡಿದ್ದಾರೆ ಎಂದರು.
ಇಂಗಳಿ ಗ್ರಾಮದ ಮರಾಠ ಸಮಾಜ ಯಾತ್ರಿ ನಿವಾಸ ತಡೆಗೋಡೆ ನಿರ್ಮಾಣಕ್ಕೆ 1 ಕೋಟಿ ರೂ., ಪೇವರ್‌ರಸ್ತೆ ಮತ್ತು ಕಟ್ಟಡ ಬಣ್ಣ ಹಚ್ಚುವ ಕಾರ್ಯಕ್ಕೆ 20 ಲಕ್ಷ ಮಂಜೂರಾಗಿದ್ದು, ಈ ವರ್ಷ ಮರಾಠ ಸಮಾಜಕ್ಕೆ ಒಟ್ಟಾರೆ 1.20 ಕೋಟಿ ರೂ. ಅನುದಾನ ಲಭಿಸಿದೆ ಎಂದರು.
ಕಲ್ಲೋಳ-ಯಡೂರ ನೂತನ ಬ್ಯಾರೇಜ್ ಗೆ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ರೇಲಿಂಗ್ ನಿರ್ಮಾಣ ಮತ್ತು ಬ್ಯಾರೇಜ್‌ನಿಂದ ಮಿರ್ಜಿ ಪೂಜಾರಿ ತೋಟದವರೆಗೆ ರಸ್ತೆ ಸುಧಾರ ಣೆಗೆ 65 ಲಕ್ಷ ರೂ. ಮಂಜೂರಾಗಿದೆ. ನೇಜ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಯಿಂದ ಚಂದ್ರವ್ವತಾಯಿ ಗುಡಿಯವರೆಗೆ ರಸ್ತೆಗೆ 1 ಕೋಟಿ ರೂ., ಮನೂಚವಾಡಿ ಗ್ರಾಮದ ರಸ್ತೆ ಸುಧಾರಣೆಗೆ 1 ಕೋಟಿ ರೂ.ಮಂಜೂರಾಗಿದೆ. ಎಲ್ಲ ಕಾಮಗಾರಿ ಗಳಿಗೆಶೀಘ್ರದಲ್ಲೇ ಟೆಂಡರ್‌ಕರೆಯಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
*ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಅನುದಾನಿತ ಶಾಲೆಗಳಿಗೆ 35 ಲಕ್ಷ ರೂಪಾಯಿ*
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ 2025-26 ನೇ ಸಾಲಿನಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ಅನುದಾನಿತ
ಪ್ರಾಥಮಿಕ/ಪ್ರೌಢ ಶಾಲೆಗಳ ಕಾಮಗಾರಿಗಳಿಗೆ 35 ಲಕ್ಷ ಅನುದಾನ ಮಂಜೂರಾಗಿದೆ. ಶ್ರೀ ಶಿವಯೋಗೀಶ್ವರ ಹಿ.ಪ್ರಾ./ಪ್ರೌಢ ಶಾಲೆ, ಇಂಚಲ ಶಾಲಾ ಕೊಠಡಿ ನಿರ್ಮಾಣಕ್ಕೆ 10 ಲಕ್ಷ ರೂ., ಬೈಲಹೊಂಗಲದ ಶೂರ ಸಂಗೊಳ್ಳಿ ರಾಯಣ್ಣ ಬಾಲಕರ ಪ್ರೌಢ ಶಾಲೆ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ 10 ಲಕ್ಷರೂ. ಕಲ್ಲೇಶ್ವರ ಶಿಕ್ಷಣ ಸಂಸ್ಥೆ ಮಣ್ಣೂರ ಪ್ರೌಢ ಶಾಲೆ ಶಾಲೆ ಕಾಂಪೌಂಡ್ ಗೋಡೆ, ಶೌಚಾಲಯ ನಿರ್ಮಾಣಕ್ಕೆ 10 ಲಕ್ಷ ರೂ..
ಬೈಲಹೊಂಗಲದ ಶ್ರೀ ಮರಡಿ ಬಸವೇಶ್ವರ ಬಾಲಕರ ಪ್ರೌಢ ಶಾಲೆ ವಿಜ್ಞಾನ ಪ್ರಯೋಗಾಲಯ ಕೊಠಡಿ ನಿರ್ಮಾಣಕ್ಕೆ 5 ಲಕ್ಷ ರೂ ಅನುದಾನ ಮಂಜೂರಾಗಿದೆ ಎಂದರು.
ವರದಿ : ಅಮರ್ ಮಾಳಗೆ
