ಜಿಲ್ಲಾಧಿಕಾರಿ ಕೆ. ಆನಂದ ತಾಲೂಕಿಗೆ ಭೇಟಿ: ವಿವಿಧ ಇಲಾಖೆಗಳ ಕಾರ್ಯ ಪರಿಶೀಲನೆ ಮಾಡಿದರು

ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಬಸವನ ಬಾಗೇವಾಡಿ ತಾಲ್ಲೂಕಿನ ವಿವಿಧ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿಯ ಕಾರ್ಯವೈಖರಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.

ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ ಕಾರ್ಯಾಲಯದ ಭೂಮಿ ಕೇಂದ್ರದ ಪ್ರಗತಿ ಪರಿಶೀಲನೆ ನಡೆಸಿದರು.ಕಚೇರಿಯ ವಿವಿಧ ವಿಭಾಗಗಳ ಬಾಕಿಯಿರುವ ಕಡತ-ವಹಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಕಚೇರಿ ಕಾರ್ಯ ನಿಮಿತ್ತ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿದ್ದು, ಸಕಾಲದಲ್ಲಿ ಅವರ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಡಲು ಸೂಚನೆ ನೀಡಿದರು.

ಇದೆ ಸಮಯದಲ್ಲಿ ಪುರಸಭೆ ವಿವಿಧ ಇಲಾಖೆ ಗಳಿಗೆ ಮತ್ತು ಸರಕಾರಿ ಆಸ್ಪತ್ರೆ ಭೇಟಿ ನೀಡಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು ಅಂತ ಹೇಳಿದರು. ಅಟಲ್ ಪ್ರೇಮಜಿ ಮತ್ತು ಹಲವಾರು ಭಾಲಕ ಭಾಲಕಿಯರ ವಸತಿ ನಿಲಯ ಗಳಿಗೆ ಭೇಟಿ ನೀಡಿದರು.ಮತ್ತು ಅಂಗನವಾಡಿ ಕರ್ನಾಟಕ ಒನ್ ಆಫೀಸ್ ಗೆ ಭೇಟಿ ನೀಡಿ ಕಡತ ಗಳನ್ನು ಪರಿಶೀಲನೆ ಮಾಡಿದರು.
ಇದೆ ಸಮಯದಲ್ಲಿ ವೈ ಎಸ್ ಸೋಮನಕಟ್ಟಿ ಹಲವಾರು ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!