ಬೀದರ : ಕಬ್ಬಿನ ದರ ಹೆಚ್ಚಳಕ್ಕಾಗಿ ಧರಣಿ ನಡೆಸುತ್ತಿದ್ದ ರೈತ ಬಂಧುಗಳೊಂದಿಗೆ ಇಂದು ದೂರವಾಣಿ ಮೂಲಕ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಯಿತು.
ಕಾರ್ಖಾನೆ ಮಾಲೀಕರನ್ನು ಮನವೊಲಿಸಿ ಪ್ರತಿ ಟನ್ ಕಬ್ಬಿಗೆ ₹2850ಕ್ಕೆ ಹೆಚ್ಚುವರಿಯಾಗಿ ₹50 ಸೇರಿಸಿ ₹2900 ನೀಡಲು ಒಪ್ಪಿಗೆ ಪಡೆಯಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳವರು ಈಗಾಗಲೇ ಘೋಷಿಸಿರುವ ಸರ್ಕಾರದ ₹50 ಸಹಾಯ ಸೇರಿ, ಒಟ್ಟಾರೆ ಟನ್ಗೆ ₹2950 ರೈತರಿಗೆ ಲಭ್ಯವಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಈ ರಾಜಿ ಪ್ರಕ್ರಿಯೆಗೆ ಸಹಕರಿಸಿ ಧರಣಿ ಹಿಂಪಡೆದ ರೈತ ಬಂಧುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ರೈತರ ಹಿತವೇ ನಮ್ಮ ಸರ್ಕಾರದ ಆದ್ಯತೆ.
