ಹೋರಾಟ ಹಿಂಪಡೆದ ರೈತರಿಗೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಅಭಿನಂದನೆ

ಪ್ರತಿ ಟನ್ ಕಬ್ಬಿಗೆ ₹2950 ನೀಡಲು ಬೀದರನ ಎಲ್ಲಾ ಕಾರ್ಖಾನಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸೂಚಿಸಿದ್ದರಿಂದ– ರೈತ ಬಂಧುಗಳ ಧರಣಿ ಹಿಂಪಡೆದಿದೃತ್ಯಾಗಿ ಹೃತ್ಪೂರ್ವಕ ಅಭಿನಂದನೆಗಳು.

ಕಾರ್ಖಾನೆ ಮಾಲೀಕರನ್ನು ಮನವೊಲಿಸಿ ಪ್ರತಿ ಟನ್ ಕಬ್ಬಿಗೆ ₹2850ಕ್ಕೆ ಹೆಚ್ಚುವರಿಯಾಗಿ ₹50 ಸೇರಿಸಿ ₹2900 ನೀಡಲು ಒಪ್ಪಿಗೆ ಪಡೆಯಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳವರು ಈಗಾಗಲೇ ಘೋಷಿಸಿರುವ ಸರ್ಕಾರದ ₹50 ಸಹಾಯ ಸೇರಿ, ಒಟ್ಟಾರೆ ಟನ್‌ಗೆ ₹2950 ರೈತರಿಗೆ ಲಭ್ಯವಾಗುತ್ತದೆ.

ಈ ಪ್ರಕ್ರಿಯೆಗೆ ಸಹಕರಿಸಿ ಧರಣಿ ಹಿಂಪಡೆದ ರೈತ ಬಂಧುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ರೈತರ ಹಿತವೇ ನಮ್ಮ ಸರ್ಕಾರದ ಆದ್ಯತೆ.

error: Content is protected !!