ರಾಮದುರ್ಗ ತಾಲೂಕಿನ ಮುಳ್ಳೂರು ಶಾಲಾ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಸಮಾರಂಭವು ಆದರ್ಶ ವಿದ್ಯಾಮಂದಿರ ಮುಳ್ಳೂರು ಶಾಲೆಯ ಆಶ್ರಯದಲ್ಲಿ ಇತ್ತಿಚೆಗೆ ನಡೆಯಿತು.
ಸಮಾರಂಭದ ಸಾನಿಧ್ಯ ವಹಿಸಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡುತ್ತ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮೊಬೈಲ್ ಚಟವನ್ನು ಬಿಡಿಸಬೇಕಾದರೆ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆದಾಗ ಮಕ್ಕಳ ಮನ ಪರಿವರ್ತನೆ ಆಗುತ್ತೆ ಹಿಂದೆ ಮಗು ಅತ್ತರೆ ಚಂದಮಾಮನನ್ನು ತೋರಿಸುವ ತಾಯಿಯಂದಿರು ಇಂದು ಮೊಬೈಲ್ ತೋರಿಸುತ್ತ ಮಕ್ಕಳಿಗೆ ಊಟ ಮಾಡಿಸುವ ಹವ್ಯಾಸ ಬೆಳದಿದೆ ಇದರಿಂದ ಸಮಾಜ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆದಲ್ಲಿ ಮಕ್ಕಳ ಮನ ಪರಿವರ್ತನೆಯಾಗಿ ಮಕ್ಕಳ ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ ಎಂದು ನುಡಿದರು.
ಅಥಿತಿಗಳಾಗಿ ಆಗಮಿಸಿದ ರೇವಣಪ್ಪ ಸೋಮಗೊಂಡ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಮಾತನಾಡುತ್ತ ಸರಕಾರ ನೀಡುವ ಎಲ್ಲ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದು ಉತ್ತಮ ಜಾಣರಾಗಿ ಉತ್ತಮ ಪ್ರಜೆಗಳಾಗಿ ದೇಶವನ್ನು ಮುನ್ನೆಡೆಸುವ ನಾಯಕರಾಗಬೇಕೆಂದು ನುಡಿದರು ಇನ್ನೋರ್ವ ಅತಿಥಿಗಳಾದ ಎಸ್ ವಿ ಪಾಟೀಲ ಮಾತನಾಡುತ್ತಾ ಮುಳ್ಳೂರು ಶಾಲಾ ವಲಯ ಮಟ್ಟದ ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಉತ್ತ್ತಮ ಸಾಧನೆ ಮಾಡಿ ಶಾಲೆಗೆ ತಂದೆ ತಾಯಿಗಳಿಗೆ ಕೀರ್ತಿ ತರಬೇಕೆಂದು ನುಡಿದರು.
ಆರ್ ಎಂ ಮೂಲಿಮನಿ ಸಿ ಆರ್ ಪಿ ಇವರು ಮಾತನಾಡುತ್ತ ಮಕ್ಕಳು ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದು ಕಲೆಗಳಲ್ಲಿ ಮುಂದುವರೆದು ತಮ್ಮ ಸರ್ವೋತೋಮುಖವಾಗಿ ಆಭಿವೃದ್ಧಿ ಹೊಂದಬೇಕೆಂದು ನುಡಿದರು ಈ ಸಮಾರಂಭದಲ್ಲಿ ಸಿದ್ದಪ್ಪ ಗಾಣಿಗೇರ ಇಂದಿರಾ ಸೊರಟಿ ಸಾವಮ್ಮ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಸಕ್ಕುಬಾಯಿ ಚಿಟ್ಟಕ್ಕಿ ಎಸ್ ಎಂ ಸೊರಟಿ ಸ್ವಾಗತ ಸಾವಮ್ಮ ಪಾಟೀಲ ವಂದನಾರ್ಪಣೆ ಮಾಡಿದರು ಸಂಜೆ ಸ್ಪರ್ಧೆಗಳಲ್ಲಿ ಆಯ್ಕೆಯಾದ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.
ವರದಿ : Md ಸೋಹಿಲ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ
