ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಮೋಘಾ ಗ್ರಾಮದಲ್ಲಿ ದಿನಾಂಕ 21/11/2025 ರಂದು ರುಮ್ಮನಗೂಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೋಘಾ ತಾ: ಕಾಳಗಿ ಜಿ: ಕಲಬುರಗಿ ಶಾಲೆಯಲ್ಲಿ ನಡೆಸಲಾಯಿತು.
ಶ್ರೀ ಪವನ್ ಕುಮಾರ್ ಕುಲಕರ್ಣಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಮೋಘಾ ರವರು ಅಧ್ಯಕ್ಷತೆ ವಹಿಸಿದರು. ಶ್ರೀ ಭೀಮರೆಡ್ಡಿ ಮಕಾಶಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಮಹಾಂತೇಶ ಪಂಚಾಳ್ ಅಧ್ಯಕ್ಷರು KSPSTA ಕಾಳಗಿ ಶ್ರೀ ಸಂತೋಷ ಕಲ್ಮೂಡ್ಕರ್ ಕಾರ್ಯದರ್ಶಿಗಳು KSPSTA ಕಾಳಗಿ ಶ್ರೀ ಜಗನ್ನಾಥ ಬಂಡಿ ಖಜಾಂಚಿಗಳು KSPSTA ಕಾಳಗಿ ಶ್ರೀ ಗಂಗಾಧರ ಸಾವಳಗಿ ಉಪಾಧ್ಯಕ್ಷರು KSPSTA ಕಾಳಗಿ ಶ್ರೀ ಮಾಣಿಕರಾವ ಪಾಟೀಲ್ ಕಾರ್ಯದರ್ಶಿಗಳು ಸರಕಾರಿ ನೌಕರರ ಸಂಘ ಕಾಳಗಿ ಶ್ರೀ ಗುರುನಾಥ ರಾಥೋಡ್ ಕಾರ್ಯದರ್ಶಿಗಳು KSPSTA ಕಲಬುರ್ಗಿ ಶ್ರೀ ಬಸಪ್ಪ ಹೊಸಮನಿ ಉಪಾಧ್ಯಕ್ಷರು ಬಡ್ತಿ ಮುಖ್ಯ ಗುರುಗಳ ಸಂಘ ಕಾಳಗಿ ಶ್ರೀ ಸುನಿಲ್ ಮಾಳಗಿ SDMC ಅಧ್ಯಕ್ಷರು ರವರು ಹಾಜರಿದ್ದರು.
ಶ್ರೀ ಶಿವಶರಣಪ್ಪ CRP ರುಮ್ಮನಗೂಡ ರವರು ಮಾತನಾಡಿ ಪ್ರತಿಭಾಕಾರಂಜಿಯೂ ಮಕ್ಕಳಲ್ಲಿ ಅಡಗಿರುವ ಬಹುಮುಖ ಪ್ರತಿಭೆಯನ್ನು ಗುರುತಿಸಲು ಕರ್ನಾಟಕ ಸರಕಾರ ಮಾಡಿದ ಮಹತ್ತರ ಯೋಜನೆಯಾಗಿದೆ. ಮಕ್ಕಳು ತಮ್ಮ ಪ್ರತಿಭೆಯ ಮೂಲಕ ಶಾಲಾ ಹಂತದಿಂದ ರಾಜ್ಯ ಹಂತದವರೆಗೂ ಹೋಗುವ ಅವಕಾಶ ಪಡೆದಿದ್ದಾರೆ. ಮಕ್ಕಳ ಪ್ರತಿಭೆಯನ್ನು ಸಮರ್ಥವಾಗಿ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಅಧ್ಯಕ್ಷರಾದ ಶ್ರೀ ಸುನಿಲ್ ಮಾಳಗಿರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು ಶ್ರೀ ಬಾಬುರಾವ ಮುಖ್ಯ ಗುರುಗಳು GHPS ಮೋಘಾ ರವರು ಶಿಕ್ಷಕರಾದ ಸಂತೋಷ್ ಹೊಸಮನಿ ಹಾಗು ಬಿಲಾಲ್ ಸೆಟ್ ಅಕ್ಷಯ ಕುಮಾರ ಎಸ್ ಮೋಘ ಲೋಕೇಶ್ ಎಸ್ ರೆಡ್ಡಿ ಕೃಷ್ಣ ಹುಳ್ಕರ್ ಚೆನ್ನವೀರ ಉಪಸ್ಥಿತಿ ಇದರು. ನಿರೂಪಿಸಿದರು ಶ್ರೀ ಪರಮೇಶ್ವರ ಸಹ ಶಿಕ್ಷಕರು ರವರು ವಂದಿಸಿದರು.

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!