ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡ ಶ್ರೀ ಅಣವೀರಭದ್ರೇಶ್ವರ ಮತ್ತು ಭದ್ರಕಾಳಿ ಕಲ್ಯಾಣ ಮಹೋತ್ಸವ ಗೋಧೂಳಿ ಸಮಯದಲ್ಲಿ ಸಾವಿರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ಬುಧವಾರರಂದು ಬೆಳಗ್ಗೆ 6 ಗಂಟೆಯಿಂದ 10.30 ರವರೆಗೆ ಮಹಾ ರುದ್ರಾಭಿಷೇಕ ನಡೆಯಿತು. ಹಾಗೂ 11 ಗಂಟೆಯಿಂದ 3, 00 ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಶಿವಾನುಭವ ಚಿಂತನೆ ಮತ್ತು ಧರ್ಮ ಸಭೆ ನಡೆಯಿತು. ಸಾಯಂಕಾಲ 5:30 ನಿ. ಕಲ್ಯಾಣ ಕಾರ್ಯಕ್ರಮ ಕರ್ನಾಟಕ ಅಲ್ಲದೆ ಆಂಧ್ರ ಮಹಾರಾಷ್ಟ್ರದಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ತದನಂತರ ಜ್ಯೋತಿ ಬೆಳಗಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯಶ್ರೀ ಪ, ಬ್ರ ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ ಸರಡಗಿ, ನಮ್ಮ ಸನಾತನ ಹಿಂದೂ ಪುರಾಣದ ಪ್ರಕಾರ ಶ್ರೀ ವೀರಭದ್ರ ಸ್ವಾಮಿ ಶಿವ ಪರಮಾತ್ಮರ ಕಡುಕೋಪದ ಶಕ್ತಿ ಪರಿಣಾಮವಾಗ ಉದ್ಭವಿಸಿದ ದಂತಹ ಶಕ್ತಿಶಾಲಿ ದೈವ. ಮತ್ತು ಹಲವಾರು ವರ್ಷಗಳಿಂದ ಅಣವೀರಭದ್ರೇಶ್ವರ ದೇವಸ್ಥಾನದಲ್ಲಿ ನಡಿತಾ ಬಂದದ್ದು ಈಗ ದೇವಸ್ಥಾನ ನವೀಕರಣ ಗೋಳುತ್ತಿರುವದು ಬದಲಾವಣೆಯಾಗಿದ್ದು ಬಹಳ ಸಂತೋಷವಾಯಿತು ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿಕೊಂಡು ಬರ್ತಾ ಇರುವ ದೇವಸ್ಥಾನದ ಟ್ರಸ್ಟಿನ ಸರ್ವ ಅಧ್ಯಕ್ಷರಿಗೂ ಸದಸ್ಯರಿಗೂ ಮತ್ತು ಭಕ್ತಾದಿಗಳಿಗೆ ಧನ್ಯವಾದಗಳು ತಿಳಿಸಿದರು. ಇಂತಹ ಸತ್ಕಾರಕ್ಕೆ ತಾವೆಲ್ಲರೂ ಕೈ ಜೋಡಿಸಿ ಇನ್ನೂ ಹೆಚ್ಚಿನ ಅಭಿವೃದ್ಧಿಗೊಳ್ಳಲಿ. ಆ ಅಣವೀರಭದ್ರೇಶ್ವರನ ಆಶೀರ್ವಾದ ತಮ್ಮೆಲ್ಲರ ಮೇಲಿರಲಿ ಎಂದು ಹರಸಿದರು. ಅಧ್ಯಕ್ಷತೆ ಪೂಜ್ಯಶ್ರೀ ಷ, ಬ್ರ ರೇವಣಸಿದ್ದ ಶಿವಾಚಾರ್ಯರು ರಟಕಲ್ ಪೂಜ್ಯಶ್ರೀ ನೀಲಕಂಠ ದೇವರು, ಅತಿಥಿ ರಾಮಲಿಂಗ ರೆಡ್ಡಿ ದೇಶಮುಖ, ಶರಣಬಸಪ್ಪ ಮಮಶೆಟ್ಟಿ, ಮಾತನಾಡಿದರು ಅಣ್ಣಾರಾವ ಪೆದ್ದಿ, ವೀರಣ್ಣ ಗಂಗಾಣಿ, ಡಾ, ಅನೀ ಲ ರಟಕಲ್, ನೀಲಕಂಠ ರಾವ ಪಾಟೀಲ್, ಸೋಮಣ್ಣ ಕುರಕೋಟಿ, ಮಹೇಶ ಪೆದ್ದಿ, ರಾಜಶೇಖರ ಗುಡುದಾ, ಅರ್ಚಕರಾದ ಗೌರಿಶಂಕರ ತೆಂಗಿನಮಠ, ರೇವಣಸಿದ್ದಪ್ಪ ಕುರುಕೋಟಿ, ಸಂತೋಷ್ ಚಿದರಿ, ಜಗದೇವಪ್ಪ ಮಾಹಾಗಾoವ, ಚಿಕ್ಕವೀರಪ್ಪ ಮಾಮಾ, ಮಲ್ಲಿಕಾರ್ಜುನ್ ಕುರಕೋಟಿ, ಮಗಲಪ್ಪಸರ್ ಚಿದರಿ, ನಾಗಣ್ಣ ಗಡ್ಡಿ, ರವಿ ಬಳಾ, ಭಾಜ ಭಜಂತ್ರಿಯವರಿದ್ದರು. ರಟಕಲ್ ಪೊಲೀಸರು ಬಂದೋಬಸ್ತ್ ನೀಡಿದರು. ಇನ್ನೂ ಅನೇಕರಿದ್ದರು.
ವರದಿ ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ
