ಕಾಳಗಿ ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೋರವಾರ ಶ್ರೀ ಅಣಿವೀರ ಭದ್ರೇಶ್ವರ್ ದೇವಸ್ಥಾನದಲ್ಲಿ ಕಾಳಗಿ ತಹಸೀಲ್ದಾರ್ ಶ್ರೀ ಪೃಥ್ವಿ ರಾಜ್ ಪಾಟೀಲ್ ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ ಮಾಡಲಾಯಿತು 9ಲಕ್ಷ 70ಸಾವಿರ 58ರೂಪಾಯಿ ಹಣ ಸಂಗ್ರಹವಾಗಿದೆ ಎಂದು ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗ ಕ್ಷೇಮಶೆಟ್ಟಿ ತಿಳಿಸಿದ್ದಾರೆ.
ಹಿಂದೆ 2025 ಜೂಲೈ 18 ರಿಂದ 2026 ಜನೆವರಿ 20ರವರೆಗೆ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ಸಂಗ್ರಹ ಹಣವನ್ನು ಏಣಿಕೆ ಮಾಡಲಾಯಿತು.
ಸಂಗ್ರಹ ವಾದ 70ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಸಂಗ್ರಹವಾದ ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಹೆಬ್ಬಾಳ ಶಾಖೆಯಲ್ಲಿ ದೇವಸ್ಥಾನ ಹೆಸರಿನ ಖಾತೆಯಲ್ಲಿ ಜಮಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಾಳಗಿ ತಾಲೂಕಿನ ಗ್ರೇಡ್ -1ತಹಸೀಲ್ದಾರ್ ಪೃಥ್ವಿರಾಜ್ ಪಾಟೀಲ್ ಹಾಗೂ ಶಿರಸ್ತೆದಾರ ನಸೀರ್ ಅಹ್ಮದ, ಕಂದಾಯ ನಿರೀಕ್ಷಕ ರವೀಂದ್ರನಾಥ್ ಮುತ್ತಗಿ, ದೇವಸ್ಥಾನ ಕಾರ್ಯದರ್ಶಿ ಕ್ಷೇಮ ಶೆಟ್ಟಿ, ತಾಲೂಕಿನ ಕಾಳಗಿ ಹಾಗೂ ಕೊಡ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ದೇವಸ್ಥಾನ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ
