ಚಿಂಚೋಳಿಯ ಚಿಮ್ಮಾಇದಲಾಯಿ ಗ್ರಾಮದಲ್ಲಿ ಚಿಮ್ಮಾಇದಲಾಯಿ ಕ್ರಿಕೆಟ್ ಕ್ಲಬ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ. ಅವಿನಾಶ ಜಾಧವ ಕ್ರೀಡೆ ಎಂಬುದು ಯಾವುದೇ ಜಾತಿ, ಧರ್ಮ, ಭೇದ, ಇರುವುದಿಲ್ಲಾ,
ಯಾವುದೇ ಕ್ರೀಡೆ ಇರಲಿ ಕ್ರೀಡಾ ಸ್ಪೂರ್ತಿ ಯಿಂದ ಕ್ರೀಡೆಯಲ್ಲಿ ಆಡಬೇಕು. ಪರಸ್ಪರ ಪ್ರೀತಿ ವಿಶ್ವಾಸ ಮನೋಭಾವ ಹೆಚ್ಚಾಗುತ್ತದೆ, ತಾಲುಕಿನ ಕ್ರೀಡೆಯ ಸಲುವಾಗಿ ಹೊರಾಂಗಣ ಕ್ರೀಡಾಂಗಣಕ್ಕೆ ಸುಮಾರು 2 ಕೋಟಿ 13 ಲಕ್ಷ ಅನುಮೋದನೆಗೆ ಕಳುಹಿಸಿದ್ದು ಕೆಲವೇ ತಿಂಗಳುಗಳಲ್ಲಿ ಕೆಲಸ ಕಾರ್ಯಾರಂಭ ವಾಗುವುದು, ಅದರಂತೆ ಒಳಾಂಗಣ ಕ್ರೀಡಾಂಗಣ ಗಾಳಿಯ ರಭಸಕ್ಕೆ ತಗಡುಗಳು ಉರುಳಿದ್ದು ಅದರ ದುರಸ್ತಿ ಕೆಲಸವು ಕೂಡ ಲ್ಯಾಂಡ್ ಅರ್ಮಿ ಇಲಾಖೆಯ ಅಧಿಕಾರಿಗಳು ಮಾಡಲಿದ್ದಾರೆ ಎಂದು ಹೇಳಿದರು. ಬಿಜೆಪಿ ಮಂಡಲ ಅಧ್ಯಕ್ಷರಾದ ವಿಜಯಕುಮಾರ ಚೆಗಂಟಿ ಮಾತನಾಡಿ ಕ್ರೀಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಪರಿಚಯವಾಗಿ ಸಹೋದರತೆ ಪ್ರೀತಿ ವಿಶ್ವಾಸಗಳು ಹೆಚ್ಚಾಗುತ್ತದೆ, ಕ್ರೀಡೆಗಳು ಆಡುವುದರಿಂದ ಮಾನಸಿಕ ಉತ್ತಮವಾಗುತ್ತದೆ, ಎಂದು ಹೇಳಿದರು.
ಗುಂಡಪ್ಪ ಅವರಾದಿ
ಮಾಜಿ ಗ್ರಾ. ಪಂ. ಅಧ್ಯಕ್ಷರು ಮಾತನಾಡಿ ನಮ್ಮ
ಚಿಮ್ಮಇದಲಾಯಿ ಗ್ರಾಮಕ್ಕೆ ಹೆಚ್ಚಿನ ಅಭಿವೃದ್ಧಿಯ ಕೆಲಸಗಳು ಮಾಡಿದ್ದು ನಮ್ಮ ಶಾಸಕ ಡಾ. ಅವಿನಾಶ ಜಾಧವವರು ಅದರಂತೆ ಯುವಕರಿಗೋಸ್ಕರ ಸದಾ ಬೆನ್ನೆಲುಬಾಗಿ ನಿಂತು ಕ್ರೀಡೆಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟವರು ಇವರು ಯಾವುದೇ ಪಕ್ಷ ಬೇದ ಮಾಡದೆ ಜನರ ಒಳಿತಿಗಾಗಿ ಕೆಲಸ ಮಾಡುವಂತಹ ನಿಜವಾದ ನಾಯಕರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಯೋಗಿ ರುಸ್ತಂಪೂರ ಗ್ರಾ. ಪಂ. ಅಧ್ಯಕ್ಷರು, ರಾಜೇಂದ್ರಪ್ಪ, ಮೊಗಲಪ್ಪ, ಶ್ರೀನಿವಾಸ, ಬಿಜೆಪಿ ಹಿರಿಯ ಮುಖಂಡರುಗಳಾದ ಕೆಎಮ್ ಬಾರಿ, ಗೋಪಾಲ ರಾವ ಕಟ್ಟಿಮನಿ, ಶ್ರೀಮಂತ ಕಟ್ಟಿಮನಿ, ರಾಜು ಪವಾರ, ಅಶೋಕ ಚವ್ಹಾಣ, ನೀಲಕಂಠ ಚವ್ಹಾಣ, ಗಿರಿರಾಜ ನಾಟಿಕರ, ಗೋಪಾಲ್ ಜಾದವ, ಅಭಿಷೇಕ್ ಮಲಕ್ಕನೂರ್, ಸತೀಶ್ ರೆಡ್ಡಿ ತಾಜಲ್ಲಾಪುರ, ಸುನಿಲ ತ್ರಿಪಾಠಿ, ಚಂದು ವಿಶ್ವರಾಧ್ಯ ರಾಜು ಶಿವಕುಮಾರ್ ಅಶ್ವಿನ ಕುಮಾರ ತ್ರಿಪಾಠಿ, ಇನ್ನು ಹಲವಾರು ಮುಖಂಡರು,ಗ್ರಾಮಸ್ಥರು, ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್
