ಬೃಹತ್ ಉದ್ಯೋಗ ಮೇಳಕ್ಕೆ ಭವ್ಯ ಚಾಲನೆ

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (KSIDC) ವತಿಯಿಂದ ವಿಜಯಪುರದ ದರ್ಬಾರ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ, ಎಲ್ಲ ಉದ್ಯೋಗ ಅಪೇಕ್ಷಿಸಿ ಬಂದಿರುವ ಯುವ ಜನತೆಗೆ ಶುಭಹಾರೈಸಿದೆ.

ಸಾಕಷ್ಟು ಪ್ರತಿಭಾವಂತರು ಇರುವ ಉತ್ತರ ಕರ್ನಾಟಕದ ಯುವಜನತೆಗೆ ಉತ್ತೇಜನದ ಅಗತ್ಯವಿದ್ದು, ಅದನ್ನು ಪೂರೈಸುವಲ್ಲಿ ರಾಜ್ಯ ಕೆಎಸ್ಐಡಿಸಿ ಮಹತ್ವದ ಪಾತ್ರವಹಿಸುತ್ತಿವೆ. ಕೌಶಲ್ಯ, ನೀಡುವುದರ ಜೊತೆಗೆ ನೂರಾರು ಕಂಪೆನಿಗಳನ್ನು ಕರೆತಂದು ಉದ್ಯೋಗ ಮೇಳಗಳನ್ನೂ ಆಯೋಜಿಸಿ, ದುಡಿಯುವ ಕೈಗಗಳಿಗೆ ಉದ್ಯೋಗ ನೀಡುತ್ತಾ ಬಂದಿದೆ. ಉದ್ಯೋಗಿಯಾಗುವುದಷ್ಟೇ ಅಲ್ಲದೆ, ಕೌಶಲ್ಯ ಅಭಿವೃದ್ಧಿಪಡಿಸಿಕೊಂಡು, ಉದ್ಯಮಿಯಾಗುವಕಡೆಗೂ ನಮ್ಮ ಯುವ ಜನತೆ ಚಿಂತಿಸಬೇಕೆಂದು ಕಿವಿ ಮಾತು ಹೇಳಿದೆ.

ಇಂದಿನ ಈ ಮಹತ್ವದ ಯುವ ಸಮೃದ್ಧಿ ಸಮ್ಮೇಳನ–ಉದ್ಯೋಗ ಮೇಳದಲ್ಲಿ ವೈದ್ಯಕೀಯ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲರು, KSIDC ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯಕ್, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸಂಗಮೇಶ್ ಬಬಲೇಶ್ವರ್, ಖ್ಯಾತ ಚಲನಚಿತ್ರ ನಟಿ ಕು. ಸಪ್ತಮಿ ಗೌಡ, ವಿವಿಧ ಕಂಪನಿಗಳ ಮುಖ್ಯಸ್ಥರು ಹಾಗೂ ಸಹಸ್ರಾರು ಉದ್ಯೋಗಾಕಾಂಕ್ಷಿಗಳು ಉಪಸ್ಥಿತರಿದ್ದರು.

ವರದಿ : ಅಜೀಜ ಪಠಾಣ್.

error: Content is protected !!