ಹಳ್ಳಿಗಳಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಯಾವ ಉದ್ದೇಶಕ್ಕೆ: ರೈತ ಮುಖಂಡ ವೀರಣ್ಣ ಗಂಗಾಣಿ

ಚಿಂಚೋಳಿ ಹಾಗೂ ಕಾಳಗಿ ತಾಲೂಕಿನ ಹಳ್ಳಿಗಳಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನ ನಡೆಸಲು ಹಾಗೂ ರೈತರಿಗೆ ಬೇಕಾಗಿರುವ ಸಾಮಗ್ರಿಗಳು ತಮ್ಮ ಊರಿನಲ್ಲಿ ದೊರಕುವಂತಾಗಲು.
ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ಇದು ರೈತರಿಗೆ ಯಾವುದೇ ರೀತಿಯಿಂದ ಸಹಾಯವಾಗುವ ಕೆಲಸ ಮಾಡುತ್ತಿಲ್ಲ, ಇದಕ್ಕೆ ಆ ಸಂಘ ಸಂಸ್ಥೆಗಳ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳ ಉದಾಸೀನತೆಯೇ ಕಾರಣವಾಗಿದ್ದು, ಪ್ರಸ್ತಕ ಸಾಲಿನ ಮುಂಗಾರು ಪ್ರಾರಂಭವಾಗಿದ್ದು ಅವಳ್ಳಿ ತಾಲೂಕಿನ ರೈತರಿಗೆ ಬೀಜ ಹಾಗೂ ರಸಗೊಬ್ಬರದ ಅತ್ಯವಶ್ಯಕವಾಗಿದೆ ಆದರೆ ರಸಗೊಬ್ಬರ ಬೀಜ ನೀಡಬೇಕಾದ ಸಂಘ-ಸಂಸ್ಥೆಗಳು ಕಾಟಚಾರವೆಂಬಂತೆ ಕುಂಟು ನೆಪ್ಪಗಳನ್ನು ಹೇಳಿ ನಮ್ಮ ಕೆಲಸಗಳಿಂದ ಜಾರಿಕೊಳ್ಳುತ್ತಿದ್ದಾರೆ, ಇಂಥ ಸಂಘ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳ ಸಂಪೂರ್ಣ ನಿರ್ಲಕ್ಷ ಧೋರಣೆ ತೋರುತ್ತಿರುವುದು ರೈತರಿಗೆ ಮಾಡುತ್ತಿರುವ ಮಹಾಮೋಸ, ರೈತರು ದೇಶದ ಬೆನ್ನೆಲುಬು ಎಂಬುದು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದೆ ತಾಲೂಕುಗಳಲ್ಲಿ ಕೇವಲ ಬೆರಳಣಿಕೆಯಷ್ಟು ಸೊಸೈಟಿಗಳು ಮಾತ್ರ ರಸಗೊಬ್ಬರ ವಿತರಣೆ ಮಾಡುತ್ತಿದ್ದಾರೆ. ಆದರೆ ಇನ್ನೂ ಬಹಳಷ್ಟು ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಯಾವುದೇ ರಸಗೊಬ್ಬರಾಗಲಿ ಬೀಜಗಳಾಗಲಿ ಕೃಷಿಗೆ ಸಂಬಂಧಿಸಿದ ಕೃಷಿ ಸಲಕರಣೆಗಳಾಗಲಿ ವಿತರಿಸುತ್ತಿಲ್ಲ. ಯಾಕೆ ಎಂದು ರೈತ ಸಂಘದ ತಾಲೂಕ ಅಧ್ಯಕ್ಷರಾದ ವೀರಣ್ಣ ಗಂಗಾಣಿಯವರು ಪ್ರಶ್ನಿಸಿದಾಗ ಅವರು ಪ್ರತಿಕ್ರಿಯೆ ಡಿಡಿ ತುಂಬಲು ಹಣವಿಲ್ಲ, ಪರವಾನಿಗೆ ಇಲ್ಲ, ಜಿಎಸ್‌ಟಿ ಕಟ್ಟಿಲ್ಲ, ಎಂದು ಉಡಾಫೆ ಉತ್ತರಗಳ ಜೊತೆ ದುರಹಂಕಾರದ ಮಾತನ್ನು ಆಡುತ್ತಿದ್ದಾರೆ .ಇವರ ಉಡಾಫೆ ಮಾತು ಮತ್ತು ದುರಂಕಾರದ ಮಾತುಗಳಿಗೆ ಬೇಸತ್ತ ರೈತರು ಕಾರ್ಯದರ್ಶಿಗಳಿಗೆ ಮತ್ತು ಅಧ್ಯಕ್ಷರಿಗೆ ಮುಟ್ಟಿಗೆ ಹಾಕಬೇಕಾಗುತ್ತದೆ. ಕೃಷಿ ಪತ್ತಿನ ಸಹಕಾರ ಸಂಘದ ವಿರುದ್ಧ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು
ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ರೈತ ಸಂಘ ಹಾಗೂ ರೈತ ಸೇನೆ ಅಧ್ಯಕ್ಷರು ಪತ್ರಿಕಾ ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ.

ವರದಿ : ರಮೇಶ್ ಕುಡಹಳ್ಳಿ

error: Content is protected !!