ರಾಯಚೂರು ಅಪರ ಆಯುಕ್ತಕರು ಅಬಕಾರಿ ಕೇಂದ್ರ ಸ್ಥಾನ ಬೆಳಗಾವಿ ಮತ್ತು ಅಬಕಾರಿ ಜಂಟಿ ಆಯುಕ್ತಕರು ಕಲಬುರ್ಗಿ ವಿಭಾಗ ಕಲಬುರ್ಗಿ ರವರ ಆದೇಶದ ಮೇರೆಗೆ ಅಬಕಾರಿ ಅಧೀಕ್ಷಕರು ಮತ್ತು ಅಬಕಾರಿ ನಿರೀಕ್ಷಕರು ಅಬಕಾರಿ ಜಂಟಿ ಆಯುಕ್ತಕರ ಕಚೇರಿ ಕಲಬುರಗಿ ರವರ ಮಾರ್ಗದರ್ಶನದಂತೆ ಹಾಗೂ ಅಬಕಾರಿ ಉಪ ಆಯುಕ್ತರು ರಾಯಚೂರು ರವರ ನಿರ್ದೇಶನದಂತೆ ಅಬಕಾರಿ ನಿರೀಕ್ಷಕರು ಉಪ ವಿಭಾಗ ಶಹಪುರ್ ಮತ್ತು ಅಬಕಾರಿ ಉಪ ಅಧೀಕ್ಷರು ಉಪ ವಿಭಾಗ ರಾಯಚೂರು ನೇತೃತ್ವದಲಿ ಮತ್ತು ರಾಯಚೂರು ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ,ರಾಯಚೂರು ವಲಯ ವ್ಯಾಪ್ತಿಯಲ್ಲಿ ಬರುವ ಚಂದ್ರ ಬಂಡ ರಸ್ತೆಯಲ್ಲಿ ಸ್ಮಶಾನದ ಹತ್ತಿರ ನರಸಿಂಹಲು ಅಲಿಯಾಸ್ ಬ್ರೂಸ್ ಲೀ ಎಂಬುವವನ ಕಾಂಪೌಂಡ್ ಜಾಗದಲ್ಲಿ ಅಬಕಾರಿ ದಾಳಿ ಮಾಡಿದಾಗ ಮೂರು ಜನ ಆರೋಪಿಗಳು ಪರಾರಿಯಾಗಿದ್ದು. ಸದರಿ ಸ್ಥಳದಲ್ಲಿ
1) 200 ಗ್ರಾಂ ಅಲ್ಫಾ ಜೋಲಂ
2) 1325 ಲೀಟರ್ ಕಲಬರಿಕೆ ಸೇಂದಿ
3) 500 ಗ್ರಾಂ ವೈಟ್ ಪೇಸ್ಟ್
4) ಒಂದು ಹೋಂಡಾ ಆಕ್ಟಿವಾ
5) ಒಂದು ಸುಜುಕಿ ಹಯಾತೇ
6) ಒಂದು ಹೀರೋ ಹೋಂಡಾ ಸೂಪರ್ ಸ್ಪ್ಲೆಂಡರ್ ಒಟ್ಟು 3 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಂಡು NDPS ಕಾಯಿದೆ 1985 ರ ಕಲಂ 21(c),25,60,8(c) ಮತ್ತು
ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 13,14,15,38(a),43 ರ ಅಡಿಯಲ್ಲಿ
ಅಪ್ಪಾರೆಡ್ಡಿ
ಅಬಕಾರಿ ಉಪ ನಿರೀಕ್ಷಕರು ಅಬಕಾರಿ ಜಂಟಿ ಆಯುಕ್ತಕರ ಕಚೇರಿ ಕಲಬುರ್ಗಿ ವಿಭಾಗ ಕಲಬುರ್ಗಿ ರವರ ಗುನ್ನೆ ಸಂಖ್ಯೆ. 33/2025-26 ರಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಸದರಿ ಮಾಹಿತಿಯನ್ನು ಮಾನ್ಯರ ಅವಗಹನೆಗಾಗಿ ಗೌರವಪೂರ್ವಕವಾಗಿ ಸಲ್ಲಿಸಲಾಗಿದೆ.
ವರದಿ : ಗಾರಲದಿನ್ನಿ ವೀರನ ಗೌಡ
