ಹುಕ್ಕೇರಿ ಜೂನ್ 23 ಹುಕ್ಕೇರಿ ವೃತ್ತದ ಜಾಬಾಪೂರ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಮಧ್ಯಾಹ್ನ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಪುಟಾಣಿ ಮಕ್ಕಳಿಗೆ ಸಮವಸ್ತ್ರ, ಟೇಬಲ್, ಕುರ್ಚಿ ಹಾಗೂ ಆಟಿಕೆ ಸಾಮಗ್ರಿಗಳನ್ನು ದಾನಿಗಳಿಂದ ವಿತರಿಸಲಾಯಿತು.
ಹುಕ್ಕೇರಿ ತಾಲೂಕಿನ ಜಾಬಾಪುರ ಗ್ರಾಮದ ಮಹಿಳಾ ಮುಖಂಡರಾದ ಸಂಗೀತಾ ರವಿ ಕಾಂಬಳೆ, ಮಹಾಂತೇಶ ಬಿ. ತಳವಾರ, ರಾಹುಲ್ ಪಾಟೀಲ, ಲಗಮಣ್ಣ ಘಸ್ತಿ ಹಾಗೂ ರಾಜಶ್ರೀ ಸನದಿ ಅವರು ಈ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದರು. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲು ಮುಂದೆ ಬಂದ ದಾನಿಗಳ ಕಾರ್ಯಕ್ಕೆ ಸರ್ವತ್ರ ಮೆಚ್ಚುಗೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್. ಹೋಳೆಪ್ಪ ಅವರ ನೇತೃತ್ವದಲ್ಲಿ ಎಲ್ಲ ದಾನಿಗಳನ್ನು ಶಾಲು, ಹಾರ ಹಾಕಿ ಸನ್ಮಾನಿಸಲಾಯಿತು ಗ್ರಾಮಸ್ಥರು ಹಾಗೂ ಅಂಗನವಾಡಿ ಸಿಬ್ಬಂದಿ ಈ ಕಾರ್ಯವನ್ನು ಶ್ಲಾಘಿಸಿ, ಮಕ್ಕಳ ಶಿಕ್ಷಣ ಮತ್ತು ಬೆಳವಣಿಗೆಗೆ ಸಹಕಾರ ನೀಡಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭದಿಂದ ಗ್ರಾಮೀಣ ಮಕ್ಕಳಿಗೆ ಮೊದಲ ಹೆಜ್ಜೆಯ ಶಿಕ್ಷಣ ಸುಲಭವಾಗಲಿದೆ ದಾನಿಗಳ ಸಹಕಾರ ಮಾದರಿಯಾಗಿದೆ ಎಂದು ಅಧಿಕಾರಿ ಹೋಳೆಪ್ಪ ಹೇಳಿದರು.
ಜಾಬಾಪೂರ ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಸಮವಸ್ತ್ರ, ಆಟಿಕೆ ವಿತರಿಸಿದ ದಾನಿಗಳು. ತಾಲೂಕು ಅಧಿಕಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
