———————
ಬೆಂಗಳೂರು : ಚಿಕ್ಕಪೇಟೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ವೆಂಕಣ್ಣಾಚಾರ್ಯರ ನೇತೃತ್ವದಲ್ಲಿ ಪುಷ್ಯಾರ್ಕ ಯೋಗದ ಪ್ರಯುಕ್ತ ಅಷ್ಟೋತ್ತರ ಪಾರಾಯಣದ ಸಹಿತ ಗುರುರಾಯರಿಗೆ 108 ಎಳನೀರಿನ ಅಭಿಷೇಕ, 1008 ಮಾವಿನ ಹಣ್ಣಿನ ಅಭಿಷೇಕ, ವಿಶೇಷ ಅಲಂಕಾರ, ಸುಧೀಂದ್ರನಗರದ ಶ್ರೀ ವಿಜಯ ವಿಠಲ ಭಜನಾ ಮಂಡಳಿಯ ಸದಸ್ಯರಿಂದ ಹರಿ ಭಜನೆ, ಮಹಾಮಂಗಳಾರತಿ ಮತ್ತು ಅನ್ನದಾನ ಸೇವೆಗಳು ಜರುಗಿದವು ಎಂದು ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ವೆಂಕಣ್ಣಾಚಾರ್ ತಿಳಿಸಿದರು.
