ಚಿತ್ತಕೋಟಾ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಲು ಡಿಎಸ್ಎಸ್ ಅಂಬೇಡ್ಕರ್ ವಾದ ಮನವಿ

ಹುಮನಾಬಾದ : ತಾಲೂಕಿನ ಚಿತ್ತಕೋಟಾ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಇಲ್ಲದಿರುವುದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು, ರೈತರು ಹಾಗೂ ಉದ್ಯೋಗಸ್ಥರು ದಿನನಿತ್ಯ ಸಂಚಾರಕ್ಕೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಶಾಲೆ, ಕಾಲೇಜು, ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗಳಿಗೆ ತೆರಳಲು ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಆದ್ದರಿಂದ, ಚಿತ್ತಕೋಟಾ ಗ್ರಾಮಕ್ಕೆ ಪ್ರತಿದಿನ ನಿಯಮಿತ ಬಸ್ ಸೇವೆಯನ್ನು ಆರಂಭಿಸಿ, ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಂದು ವಿನಂತಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ತಾಲೂಕು ಸಂಚಾಲಕ ರಾಹುಲ್ ಉದ್ದಾ ನೇತೃತ್ವದಲ್ಲಿ ಹುಮನಾಬಾದ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಸಿದ್ದಾರ್ಥ್ ಕಾಂಬಳೆ, ವಿದ್ಯಾಸಾಗರ ಸಾದನೂರು, ಅಲಿಸಾಬ್ ಮಚಕೂರಿ, ರೇವಪ್ಪ ಡಾಗೆ, ಭೀಮರಾವ ಹಂಗರಗಿ, ಭಾರತಬಾಯಿ ಭೀಮಷಾ, ಸುವರ್ಣ ಡಾಗೆ, ಭೀಮಣ್ಣ ಡಾಗೆ, ಮಲ್ಲಮ್ಮ ಸಿದ್ದಪ್ಪ, ಶಾರದಬಾಯಿ ಪ್ರಭುರಾವ್, ಜಗದೇವಿ ವೈಜೀನಾಥ, ಶಶಿಕಲಾ ಶ್ರೀಮಂತ,ಕಾಶಾಮ್ಮ ಅಡೆಪ್ಪ, ಗೀತಾಬಾಯಿ ಹಣಮಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಚಿತ್ತಕೋಟ ಗ್ರಾಮಕ್ಕೆ ಸರಿಯಾಗಿ ಸಮಯಕ್ಕೆ ಬಸ್ ಬಾರದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಶಾಲಾ ಕಾಲೇಜು ಹಾಗೂ ಕೆಲ್ಸಕ್ಕೆ ತೆರಳು ತೊಂದರೆ ಯಾಗುತ್ತಿದೆ ಇತ್ತೀಚಿಗೆ ನಮ್ಮ ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದೆ ಆದರೆ ಸಮಯಕ್ಕೆ ಬಸ್ಸೇ ಬರಲ್ಲ ಅಂದಮೇಲೆ ಸರ್ಕಾರದ ಯೋಜನೆಗಳು ಪಡೆಯುವುದು ಹೇಗೆ ಸಂಬಂಧ ಪಟ್ಟ ಅಧಿಕಾರಿಗಳು ಎಚೆತ್ತು ತಕ್ಷಣ ಬಸ್ ಪ್ರಾರಂಭ ಮಾಡದೆ ಇದ್ದಲ್ಲಿ ಉಗ್ರ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಬೇಕಾಗುತ್ತದೆ ಎಂದು ಎಚ್ಚರಿಸುತ್ತೇನೆ, :

ರಾಹುಲ್ ಉದ್ದಾ DSS ಸಂಚಾಲಕ ಹುಮ್ನಾಬಾದ್

error: Content is protected !!