ಅಕ್ರಮ ಅನ್ನಭಾಗ್ಯ ಅಕ್ಕಿ ವಶಪಡಿಸಿಕೊಂಡ ಹುಕ್ಕೇರಿ ಪೊಲೀಸರು

ಹುಕ್ಕೇರಿ ತಾಲೂಕಿನ ಬೆನಿವಾಡ ಗ್ರಾಮದಲ್ಲಿ ಪಿಕೆಪಿಎಸ್ ಸೊಸೈಟಿ ಹತ್ತಿರದಿಂದ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದಾರೆ ಅಂತ ಸಾರ್ವಜನಿಕರಿಂದ ಬಂದ ದೂರವಾಣಿ ಮೂಲಕ ಕರೆ ಮಾಡಿದ ತಕ್ಷಣ 112 ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಗೂಡ್ಸ್ ವಾಹನ ನಂಬರ್ ಕೆ ಎ 25 ಬಿ 1506 ವಾಹನದಲ್ಲಿ ಅಕ್ರಮವಾಗಿ ಅಕ್ಕಿ ಚೀಲ ಸುಮಾರು 46 ವಿವಿಧ ಬಣ್ಣದ ಬಾಯಿ ಕಟ್ಟಿದ ಚೀಲಗಳು ತುಂಬಿದ್ದು ಕಂಡು ತಕ್ಷಣ ಬೆನಿವಾಡ್ ದಿಂದ ಹುಕ್ಕೇರಿ ಪೊಲೀಸ್ ಠಾಣೆಗೆ ಕರೆತಂದು ವಾಹನ ಚಾಲಕ ಆರೋಪಿತನಾದ ನಿಂಗರಾಜ್ ಮಲ್ಲಪ್ಪ ಮುಗಳಿ ವಯಸ್ಸು 24 ಸಾಕಿನ್ ಬೆನಿವಾಡ್
ಹುಕ್ಕೇರಿ ಆಹಾರ ನಿರೀಕ್ಷಕರಾದ ಪ್ರವೀಣ್ ಕುಮಾರ್ ಸಾಗರ್ ಟೆಂಪೋ ದಲ್ಲಿನ 46 ಚೀಲಗಳನ್ನು ಪಂಚರಸಮ್ಮುಖದಲ್ಲಿ ಕೆಳಗಡೆ ಇಳಿಸಿ ತೂಕಮಾಡಿದಾಗ 1780 ಕೆಜಿ ಇರುತ್ತದೆ ಸುಮಾರು 35600=00 ರೂಪಾಯಿ ಅಂದಾಜಿಸಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ ಎಲ್ಲ ಚೀಲಗಳಿಂದ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ಸ್ಯಾಂಪಲ್ ತೆಗೆದುಕೊಳ್ಳಲಾದ ಇಪ್ಪತ್ತು ಕೆಜಿ ತೆಗಿಸಿ ಅವುಗಳನ್ನು ಆಹಾರ ನಿರೀಕ್ಷಕರು ತನ್ನ ತಾಬೆಗೆ ತೆಗೆದುಕೊಂಡು ಇರುತ್ತದೆ ಆರೋಪಿತನಾದ ಟೆಂಪೋ ಚಾಲಕ ನಿಂಗರಾಜ್ ಮಲ್ಲಪ್ಪ ಮುಗುಳಿ ವಾಹನ ಚಾಲಕನನ್ನು ಅಕ್ಕಿ ಎಲ್ಲಿಂದ ತರುವಿರಿ ಅಂತ ಕೇಳಿದಾಗ ಅವನು ಹತ್ತಿರದ ಊರುಗಳಲ್ಲಿ ಸಂತೆಗಳಲ್ಲಿ ಜನರಿಂದ ತೆಗೆದುಕೊಂಡು ಸಂಗ್ರಹಿಸಿ ಟೆಂಪೋ ಮುಖಾಂತರ ನೆರೆ ರಾಜ್ಯದ ಕೊಲ್ಲಾಪುರಕ್ಕೆ ಮಾರಾಟ ಮಾಡಲು ಹೂಗೊತ್ತಿದ್ದನೆಂದು ಖುದ್ದಾಗಿ ಹೇಳಿದನು ಆರೋಪಿ ತನ್ನ ತಪ್ಪು ಒಪ್ಪಿಕೊಂಡಿರುತ್ತಾನೆ. ಹುಕ್ಕೇರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಸದಾನಂದ ಎಮ್

error: Content is protected !!