ಕಾಳಗಿ : ತಾಲೂಕಿನ ರೇವಗಿ (ರಟಕಲ್) ಗುಡ್ಡದ ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ರೈತ ಸೇನೆಯ ತಾಲೂಕ ಅಧ್ಯಕ್ಷರಾದ ವೀರಣ್ಣ ಗಂಗಾಣಿ ರೈತ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟಲು ಮತ್ತು ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಸಿಗುವಂತೆ ಮಾಡಲು ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ದೇವಸ್ಥಾನದ ಆವರಣದಲ್ಲಿ ವಿವಿಧ ಜಾತಿಯ ಉಪಯುಕ್ತ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಪ್ಲಾಸ್ಟಿಕ್ ಮುಕ್ತ ಆವರಣ ನಿರ್ಮಾಣಕ್ಕೆ ಹಾಗೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಯ ಸುನಿಲ್ ಕುಮಾರ್ ಚೌಹಾನ್ ಮಾತನಾಡಿದರು.
ದಿವ್ಯಸಾನಿಧ್ಯ ವಹಿಸಿದ ಪೂಜ್ಯಶ್ರೀ ರೇವಣಸಿದ್ದ ಶರಣರು ಗೌರಿಗುಡ್ಡ ಮಾತನಾಡಿ ಪರಿಸರ ಎನ್ನುವುದು ಕೇವಲ ನಮ್ಮ ಸುತ್ತಲಿನ ಮರ-ಗಿಡಗಳಲ್ಲ, ಅದು ಸಾಕ್ಷಾತ್ ಭಗವಂತನ ವಿಶ್ವಸ್ವರೂಪ. ನಮ್ಮ ಉಪನಿಷತ್ತುಗಳು ‘ಈಶಾವಾಸ್ಯಮಿದಂ ಸರ್ವಂ’ ಎಂದು ಸಾರಿವೆ. ಅಂದರೆ, ಈ ಸೃಷ್ಟಿಯ ಅಣು-ಅಣುವಿನಲ್ಲೂ ದೈವತ್ವವಿದೆ. ನದಿಗಳನ್ನು ತಾಯಿಯೆಂದು, ಭೂಮಿಯನ್ನು ಮಾತೆ ಎಂದು, ವೃಕ್ಷಗಳನ್ನು ದೇವರೆಂದು ಪೂಜಿಸಿದ ಶ್ರೇಷ್ಠ ಪರಂಪರೆ ನಮ್ಮದು ಎಂದು ಮಾತನಾಡಿದರು. ಈ ಕಾರ್ಯಕ್ರಮದಲಿ ಪ್ರಾಸ್ತಾವಿಕ ನುಡಿಗಳನ್ನು
ಶರಣಬಸಪ್ಪ ಮುಮಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಲಿಂಗಪ್ಪ ಬಳವಡಗಿ. ರುದ್ರಶೆಟ್ಟಿ ಗುರುಮಿಟಕಲ್,ವಿಶಾಲ ಆರ್ ದೇವರಮನಿ. ದಯಾಸಾಗರ ಪಾಟೀಲ್ ಶಾಂತಪ್ಪ ಗೌಡ ರೇವಗಿ, ಚನ್ನಪ್ಪ ಪಾಟೀಲ್. ಸಿದ್ದರಾಮ ಪೋಲಾರ್, ಕಲಾವತಿ ,ನಾಗವೇಣಿ ರಾಥೋಡ್. ಚಂದ್ರಕಲಾ ಸಿಂಗೆ. ಮಲ್ಲಿನಾಥ್ ಮುಚ್ಚಟ್ಟಿ. ಶಫಿ ಪೊಲೀಸ್
ಮಂಜುಗೌಡ ಪಾಟೀಲ್. ರಾಜು ಜಾದವ್, ಶರಣು ಸೀಗಿ. ಸಿದ್ಧನಗೌಡ ಗುಳೇದ್. ವಿಜು ಪಾಟೀಲ್.
ಶರಣಗೌಡ ಕಂದುಗೊಳ, ಅಪ್ಪಣ್ಣ ದೊಡ್ಡಮನಿ. ದಿಲೀಪ್ ನಾಗೂರ ಪ್ರದೀಪ್ ಗುತ್ತೇದಾರ್. ಕಾಶಿನಾಥ್ ಗೋಗಿ ಶ್ರೀ ಸಾಗರ ದೊಡ್ಡಮನಿ, ಮಲ್ಲು ಅರಣಕಲ್ ಅನಿಲ್ ಕುಮಾರ್ ಡಿ ಆರ್ ಎಫ್ ಗುಂಡ್ಗುರ್ತಿ. ಸಂತೋಷ್ ಬಾಪು ಚಿತ್ತಾಪುರ ಡಿ ಆರ್ ಎಫ್. ಬಿಎಸ್ ಧನಂಜಯ್ ಡಿ ಆರ್ ಎಫ್ ಕಾಳಗಿ. ಶ್ರೀಕಾಂತ ಫಾರೆಸ್ಟ್ ಗುಂಡುಗುರ್ತಿ. ಹಾಗೂ ಅರಣ್ಯ ವೀಕ್ಷಕರು ಕಾಳಗಿ ಚಿತ್ತಾಪುರ ವಲಯ. ಶಫಿ ಪೊಲೀಸ್ ಕಾಳಗಿ. ವೀರಣ್ಣ ಬಾವಗಿ ದತ್ತರಗ. ಶರಣಗೌಡ ಪಾಟೀಲ್. ಮಲ್ಲು ಸಿದ್ದರಾಮ ಗೋಳ್ ಪ್ರಭು ಕುರುಕೋಟಿ.ಶಾಲೆಯ ಮುದ್ದು ಮಕ್ಕಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ : ರಮೇಶ್ ಕುಡಹಳ್ಳಿ
