ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ : ತಿಪ್ಪಣ್ಣ ಕೆಂಪನೂರ

ಹುಮ್ನಾಬಾದ್ : ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ವಿಶ್ವ ಪರಿಸರ ದಿನಾಚರಣೆಯ್ಲಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ತಿಪ್ಪಣ್ಣ ಕೆಂಪನೂರ ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ವಿಶ್ವ ಪರಿಸರ ದಿನಾಚರಣೆ” ಯನ್ನು ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜ್ ಹುಮ್ನಾಬಾದನಲ್ಲಿ ಜೂನ್. 5 ರಂದು ಆಚರಿಸಲಾಯಿತು. ಕಾಲೇಜಿನ ಹಿರಿಯ ಉಪನ್ಯಾಸಕರಾದ ತಿಪ್ಪಣ್ಣ ಕೆಂಪನೂರ್ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಮತ್ತು ಪ್ರಕೃತಿಯ ಮಹತ್ವದ ಬಗ್ಗೆ ಅರಿವು ಅಗತ್ಯ ಎಂದು ಹೇಳಿದರು. ನಂತರ ಅಧ್ಯಕ್ಷ ಸ್ಥಾನ ವಹಿಸಿದ ಕಾಲೇಜಿನ ಪ್ರಾಚಾರ್ಯರು ಮಾತನಾಡಿ ಪರಿಸರದ ಬಗ್ಗೆ ಅನೇಕ ವಿಷಯಗಳನ್ನು ಹೇಳಿ ಮರಗಳು ಅವಶ್ಯಕತೆ, ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಜಲ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಹಾಗೆ ನೆಟ್ಟಿರುವ ಪ್ರತಿಯೊಂದು ಸಸಿಯನ್ನು ಮುಂದಿನ ದಿನಗಳಲ್ಲಿ ಕಾಪಾಡಿಕೊಂಡು ಹೋಗಲು ಎಲ್ಲರೂ ಒಮ್ಮತದಿಂದ ನಿರ್ಧರಿಸಬೇಕೆಂದು ವಿದ್ಯಾರ್ಥಿಗಳಿಗೆ ತಮ್ಮ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಸೇರಿ ಪ್ರಕೃತಿಯನ್ನು ರಕ್ಷಿಸುತ್ತೇವೆ. ಎಂದು ಕಾಲೇಜಿನ ಪ್ರಾಚಾರ್ಯರು ಮಾತನಾಡಿದರು. ಕಾಲೇಜಿನ ಉಪನ್ಯಾಸಕ ಕೆ. ಆರ್. ಗೋರಖನಾಥ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಇದೆ ಸಂದರ್ಭದಲ್ಲಿ ಯಾಸ್ಮಿನ್ ಸುಲ್ತಾನ್, ಸಮಿನಾ ಅಂಜುಮ್,ಮೀರ್ ಮೊಹಮ್ಮದ್ ಅಲಿ, ಸೈಯದ್ ನಬಿ, ಮುದುಕಮ್ಮ ಸಜ್ಜನ್, ಭಾಗ್ಯಶ್ರೀ, ಸತ್ಯವಾನ್, ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಡಾ. ಪಪ್ಪು ಬಿ ಮೇತ್ರಿ ನಿರೂಪಿಸಿದರು. ರಮೇಶ್ ವೈರಾಗ್ಯ ಸ್ವಾಗತಿಸಿದರು. ಲತಾ ಕಟಕೆ ವಂದಿಸಿದರು.

ವರದಿ : ರಮೇಶ್ ಕುಡಹಳ್ಳಿ

error: Content is protected !!