ಯಮಕನಮರಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಚಿವರು ಹಾಗೂ ಯಮಕನಮರಡಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಇಂದು ಒಟ್ಟು ₹1 ಕೋಟಿ 60 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಕಾಮಗಾರಿಗಳ ವಿವರ:
1)ಸುತಗಟ್ಟಿ ಗ್ರಾಮದಲ್ಲಿ ₹35 ಲಕ್ಷ ವೆಚ್ಚದ ನೂತನ ಸಿಸಿ ರಸ್ತೆ, ಮತ್ತು ಚರಂಡಿ, 2)ಶಿವಾಪೂರ ಗ್ರಾಮದಲ್ಲಿ ₹40ಲಕ್ಷ 3)ಗೂರಾಮಟ್ಟಿ ಗ್ರಾಮದಲ್ಲಿ ₹30 ಲಕ್ಷ 4)ನಿಂಗ್ಯಾನಟ್ಟಿ ಗ್ರಾಮದಲ್ಲಿ ₹25 ಲಕ್ಷ 5) ಭೂತರಾಮನಹಟ್ಟಿ ಗ್ರಾಮದಲ್ಲಿ ₹30 ಲಕ್ಷ ವೆಚ್ಚದ ನೂತನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷರು ಪಿ.ಎಲ್.ಡಿ. ಬ್ಯಾಂಕಿನ ನಿರ್ದೇಶಕರಾದ ಶ್ರೀ ರಾಮ ಅಣ್ಣಾ ಗುಳ್ಳಿ ಭೀಮನಗೌಡ ಪಾಟೀಲ ಬಾಲಕೃಷ್ಣ ಪಾಟೀಲ್ ಮಾರುತಿ ಚೌಗಲೆ ಸುಕಪ್ಪಾ ಪಕಾಲಿ ಲಕ್ಷ್ಮಣ ಕಟಾಬಳ್ಳಿ ಅಶೋಕ ಪಾಟೀಲ ಲಕ್ಷ್ಮಣ ನಾಯಿಕ ಭೀಮಶಿ ಕಳಸಾಯಿ ಶೇಟ್ಟು ಅಲ್ಲನಗೋಳ ಮಾರುತಿ ಸಜಲಿ ಹಾಗೂ ಸುತಗಟ್ಟಿ, ಶಿವಾಪೂರ, ಹೊಸ ಇದ್ದಲಹೊಂಡ ನಿಂಗ್ಯಾನಟ್ಟಿ ಗುರಾಮಟ್ಟಿ ಭೂತರಾಮನಹಟ್ಟಿ ಗ್ರಾಮದ ಜನಪ್ರತಿನಿಧಿಗಳು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
