ಹುಕ್ಕೇರಿ ದೇಶದ ರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಡಲು ಮುಂದಾಗುವ ಯುವಕರ ಸಾಹಸಗಾಥೆ ನಿಜಕ್ಕೂ ಹೆಮ್ಮೆಯ ವಿಷಯ. ಇದೀಗ ಅಂತಹದೇ ಒಂದು ಹೆಮ್ಮೆಯ ಕ್ಷಣ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ.
ಭಾರತೀಯ ಭೂಸೇನೆಗೆ ಆಯ್ಕೆಯಾಗಿ, ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ತಮ್ಮ ತವರು ಗ್ರಾಮಕ್ಕೆ ಆಗಮಿಸಿದ ವೀರ ಯುವಕರಿಗೆ ಭವ್ಯ ಸ್ವಾಗತ ಕೋರಲಾಗಿದೆ. ಬಸ್ತವಾಡ ಗ್ರಾಮದವರಾದ ಕುಮಾರ್ ಪ್ರಜ್ವಲ್ ಮಹಾವೀರ್ ಮಗದುಮ್ಮ ಹಾಗೂ ಕುಮಾರ್ ನಿತ್ಯಾನಂದ ಮಲ್ಲಿಕಾರ್ಜುನ್ ಜೊತೆಪ್ಪಗೋಳ ಅವರು ದೇಶಸೇವೆಗೆ ಸಿದ್ಧರಾಗಿ ಗ್ರಾಮಕ್ಕೆ ಮರಳುತ್ತಿದ್ದಂತೆ, ಗ್ರಾಮಸ್ಥರ ಹರ್ಷ ಮುಗಿಲು ಮುಟ್ಟಿದೆ.
ಯುವಕರ ಈ ಸಾಧನೆಯನ್ನು ಗುರುತಿಸಿ, ಬಸ್ತವಾಡ ಗ್ರಾಮದ ‘ಮಹಾವೀರ್ ಯುವಕ್ ಮಂಡಳಿ’ ವತಿಯಿಂದ ವಿಶೇಷ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಮತ್ತು ಗ್ರಾಮಸ್ಥರು, ದೇಶಸೇವೆಗೆ ಆಯ್ಕೆಯಾಗಿರುವ ಈ ಯುವಕರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಸನ್ಮಾನಿಸಿ ಶುಭ ಹಾರೈಸಿದರು.
ನಮ್ಮ ದೇಶದ ಗಡಿ ಕಾಯಲು ಸಿದ್ಧವಾಗಿರುವ ಇಂತಹ ಯುವಕರು ಇಡೀ ಗ್ರಾಮಕ್ಕೆ ಹಾಗೂ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಮಹಾವೀರ್ ಯುವಕ್ ಮಂಡಳಿಯ ಈ ಕಾರ್ಯಕ್ಕೆ ಗ್ರಾಮಸ್ಥರು ಸಂಜು ಕಾಡಪ್ಪ ಮಗದುಮ್ಮ
ಡಾಕ್ಟರ್ ಬಾಹುಬಲಿ ನೇಮನಾ ಮಗದುಮ್ಮ
ಶಾಂತಿನಾಥ ಜಿನ್ನಪ್ಪ ಮಗದುಮ್ಮ
ಸಂಜುಕುಮಾರ್ ನೇಮನಾ ಮಗದುಮ್ಮ
ಸಾಗರ್ ಕಾಡಪ್ಪ ಮಗದುಮ್ಮ
ನವೀನ್, ಸಾಗರ್, ಸಿದ್ದಪ್ಪ, ಸಮ್ಮೇದ್, ಕಿರಣ್, ಹರಿಹಂತ್, ಶೀತಲ್, ವರ್ದ್ಮಾನ್, ಅಕ್ಷಯ್, ದರ್ಶನ್, ಅಭಿಷೇಕ್
ಈ ಸಂದರ್ಭದಲ್ಲಿ ಎಲ್ಲಾ ಮಹಾವೀರ ಯುವಕ ಮಂಡಳಿಯವರು ಭಾಗವಹಿಸಿದರು
