ಸಂಕೇಶ್ವರ:
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಸೇರಿದ ಸರಕಾರಿ ಉಗ್ರಾಣವು ಇದೀಗ ಗಂಭೀರ ಆರೋಪಗಳಿಗೆ ಗುರಿಯಾಗಿದೆ. ಇಲ್ಲಿ ಮೂಲಭೂತ ನಿಯಮಗಳ ಪಾಲನೆಯಾಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ನಾಮಫಲಕವಿಲ್ಲದ ಸರಕಾರಿ ಕಚೇರಿ:
ಸಾರ್ವಜನಿಕರ ಅನುಕೂಲಕ್ಕಾಗಿ ಇರಬೇಕಾದ ಸರಕಾರಿ ಉಗ್ರಾಣದಲ್ಲಿ ಸೂಕ್ತ ನಾಮಫಲಕವನ್ನು ಅಳವಡಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಇದರಿಂದಾಗಿ ಹೊಸಬರಿಗೆ ಅಥವಾ ಸಾರ್ವಜನಿಕರಿಗೆ ಈ ಕಟ್ಟಡವು ಸರಕಾರಿ ಇಲಾಖೆಯದ್ದು ಎಂದು ಗುರುತಿಸುವುದೇ ಕಷ್ಟಕರವಾಗಿದೆ. ನಿಯಮದ ಪ್ರಕಾರ ಸರಕಾರಿ ಕಚೇರಿ ಅಥವಾ ಉಗ್ರಾಣದ ಹೊರಭಾಗದಲ್ಲಿ ಸ್ಪಷ್ಟವಾದ ನಾಮಫಲಕ ಇರುವುದು ಕಡ್ಡಾಯವಾಗಿದ್ದರೂ, ಇಲ್ಲಿ ಅದನ್ನು ನಿರ್ಲಕ್ಷಿಸಲಾಗಿದೆ.
ಅಧಿಕಾರಿಯ ಬೇಜವಾಬ್ದಾರಿ:
ಈ ಕುರಿತು ವರದಿಗಾರರು ಉಗ್ರಾಣ ವ್ಯವಸ್ಥಾಪಕರಾದ ಲಕ್ಷ್ಮೀ ಮೇದಾರ ಅವರ ಬಳಿ ಮಾಹಿತಿ ಕೇಳಿದಾಗ, ಅವರು ನೀಡಿದ ಉತ್ತರವು ಅತ್ಯಂತ ಬೇಜವಾಬ್ದಾರಿ ಉಡಾಪೆ ಉತ್ತರ ನೀಡಿ ನಾವು ಅಕ್ಕಿ ಕೂಡಬೇಕು ಕೊಡುತ್ತೇವೆ ನ್ಯಾಯಬೆಲೆ ಅಂಗಡಿ ಯವರಿಂದಾ ನೇರವಾಗಿ ಉಗ್ರಣ ದಿಂದಾ ನಮಗೆ ಕಡಿಮೆ ಆಕ್ಕಿ ಬರುತ್ತದೆ ಅದಕ್ಕಾಗಿ ನಾವು ಪಡಿತರದಾರರಿಗೆ ಕಡಿಮೆ ಅಕ್ಕಿಯನ್ನು ನೀಡಬೇಕಾಗುತ್ತದೆ ಎಂದು ನ್ಯಾಯಬೆಲೆ ಅಂಗಡಿಯವರು ಗಂಭೀರ ಆರೋಪ ನೇರವಾಗಿ ಉಗ್ರಾನದ ಮೇಲೆ ಗಂಭೀರ ಆರೋಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯು ಪ್ರಶ್ನಿಸುವವರನ್ನು ಕಡೆಗಣಿಸಿರುವುದು ಹಾಗೂ ಉಡಾಫೆಯಾಗಿ ಉತ್ತರ ಕೂಡುವದು ಸರಿಯಲ್ಲ.
ಮಹಾನುಭಾವರ ಭಾವಚಿತ್ರಕ್ಕೆ ಅವಮಾನ:
ಇದಲ್ಲದೆ, ಅತ್ಯಂತ ಗಂಭೀರವಾದ ವಿಷಯವೆಂದರೆ, ಉಗ್ರಾಣದಲ್ಲಿ ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಸೂಕ್ತ ಗೌರವ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಾಂವಿಧಾನಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಗೌರವಾನ್ವಿತರಾದ ಈ ಮಹಾನುಭಾವರ ಭಾವಚಿತ್ರಕ್ಕೆ ಮಾಲಿ ತೆಗೆಯೋದೆ ಇರುವದು ನಿರ್ಲಕ್ಷಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಮತ್ತು ಬೇಸರಕ್ಕೆ ಕಾರಣವಾಗಿದೆ.
ಸಾರ್ವಜನಿಕರ ಆಗ್ರಹ:
ಕೂಡಲೇ ಮೇಲಾಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಉಗ್ರಾಣಕ್ಕೆ ಸೂಕ್ತ ನಾಮಫಲಕ ಅಳವಡಿಸಬೇಕು ಮತ್ತು ಬೇಜವಾಬ್ದಾರಿಯಿಂದ ವರ್ತಿಸಿರುವ ವ್ಯವಸ್ಥಾಪಕ ಲಕ್ಷ್ಮೀ ಮೇದಾರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮಹಾನುಭಾವರ ಭಾವಚಿತ್ರಗಳಿಗೆ ಸೂಕ್ತ ಮರ್ಯಾದೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಮತ್ತು ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
