ಕಲ್ಯಾಣ ಕರ್ನಾಟಕದ ರೈತರ ಹೋರಾಟಕ್ಕೆ ಸಂದ ಜಯ – ರಾಜಕೀಯ ಚದುರಂಗದ ಆಟಕ್ಕೆ ಬಿದ್ದ ಬ್ರೇಕ್!
ಯಾದಗಿರಿ ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದ್ದು, ನಾರಾಯಣಪುರ ಜಲಾಶಯದಿಂದ ಒಂದೂವರೆ ಟಿಎಂಸಿ ನೀರನ್ನು ಕಾಲುವೆಗಳಿಗೆ ಹರಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ಜಿಲ್ಲೆಯ ರೈತರಲ್ಲಿ ಕೊಂಚ ನೆಮ್ಮದಿ ಮೂಡಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಭಾಗದ ರೈತರು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ನೀರಿಗಾಗಿ ಕಾದು ಕುಳಿತಿದ್ದ ರೈತರಲ್ಲಿ ಸರ್ಕಾರದ ನಿರ್ಧಾರ ಹೊಸ ಭರವಸೆ ಮೂಡಿಸಿದೆ.
ಇನ್ನೊಂದೆಡೆ, ರೈತರ ನೀರಿನ ಹೋರಾಟದ ವಿಚಾರದಲ್ಲಿ ಕೆಲವೆಡೆ ರಾಜಕೀಯ ಚದುರಂಗದ ಆಟ ನಡೆಯುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದವು. ಕೆಲವು ಕಟ್ಟೆಗಳಲ್ಲಿ, ಗುಡಿ-ಗುಂಡಾರಗಳಲ್ಲಿ ಕುಳಿತುಕೊಂಡು ಮಾತನಾಡುವವರ ನಡುವೆ ರೈತರ ಹೋರಾಟಕ್ಕಿಂತ ರಾಜಕೀಯ ಲೆಕ್ಕಾಚಾರವೇ ಹೆಚ್ಚಾಗಿದೆ ಎಂಬ ಗುಸುಗುಸು ಚರ್ಚೆಗಳು ನಡೆದಿದ್ದವು.
ಆದರೆ ಇದೀಗ ಸರ್ಕಾರ ಒಂದೂವರೆ ಟಿಎಂಸಿ ನೀರು ಹರಿಸಲು ಒಪ್ಪಿಗೆ ನೀಡಿರುವುದರಿಂದ ಇಂತಹ ರಾಜಕೀಯ ಚರ್ಚೆಗಳಿಗೆ ತಾತ್ಕಾಲಿಕ ವಿರಾಮ ಬಿದ್ದಂತಾಗಿದೆ. ರೈತರ ಹಿತಾಸಕ್ತಿಯೇ ಮುಖ್ಯ ಎಂಬ ಸಂದೇಶ ಮತ್ತೊಮ್ಮೆ ಸಾಬೀತಾದಂತಾಗಿದೆ.
ಒಟ್ಟಿನಲ್ಲಿ, ರೈತರ ನಿರಂತರ ಹೋರಾಟಕ್ಕೆ ಸ್ಪಂದಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದ್ದು, ಘೋಷಣೆಯಾದ ಒಂದೂವರೆ ಟಿಎಂಸಿ ನೀರು ತ್ವರಿತವಾಗಿ ಕಾಲುವೆಗಳಿಗೆ ಹರಿದು, ಕೊನೆಯ ಭಾಗದ ರೈತರ ಜಮೀನುಗಳಿಗೂ ತಲುಪಬೇಕು ಎಂಬುದು ಜಿಲ್ಲೆಯ ಅನ್ನದಾತರ ಆಶಯವಾಗಿದೆ.
ಇದು ಯಾವ ರಾಜಕೀಯ ನಾಯಕರಿಂದ ಸಿಕ್ಕ ಜಯ ಅಲ್ಲಾ ಇದು ರೈತರ ಹೋರಾಟಕ್ಕೆ ಸಿಕ್ಕ ಜಯ ಸರ್ಕಾರ ನಮ್ಮ ರೈತರ ಹೋರಾಟಕ್ಕೆ ಮಣಿದು ನಾರಾಯಣಪುರ ಬಸವಸಾಗರ ಜಲಾಶಯದ ಕಾಲುವೆಗಳಿಗೆ ನೀರು ಬಿಡಲು ಸಜ್ಜಾಗಿದೆ
ಯಮನಪ್ಪ ದೋರಿ
ಸಾಮಾಜಿಕ ಹೋರಾಟಗಾರ

ರೈತರ ಹೋರಾಟಕ್ಕೆ ಮಣಿದು ಹಾಗೂ ರಾಜಕೀಯ ನಾಯಕರ ಚರ್ಚೆಗಳಿಗೆ ಸ್ಪಂದಿಸಿ ಕಾಲುವೆಗಳಿಗೆ ನೀರು ಬಿಡಲು ಸಿದ್ಧವಿರುವ ಸರಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು
ಮತ್ತು ನೀರಿಗಾಗಿ ತಮ್ಮ ತಂದೆ -ತಾಯಿ , ಮಡದಿ ಹಾಗೂ ತಮ್ಮ ಮಕ್ಕಳನ್ನು ಬಿಟ್ಟು ಚಳಿ – ಬಿಸಿಲು
ಹಗಲು – ರಾತ್ರಿ ಎನ್ನದೇ ಹೋರಾಟ ನೆಡೆಸಿದ ನಮ್ಮ ರೈತರಿಗೆ ಹಾಗೂ ರೈತ ನಾಯಕರಿಗೂ ನಾವುಗಳು ಚಿರಋಣಿ ಆಗಿದ್ದೇವೆ ರೈತರಿಗೆ ರೈತ ನಾಯಕರಿಗೆ ಹಾಗೂ ರೈತರ ಹೋರಾಟದಲ್ಲಿ ಪಾಲ್ಗೊಂಡ ಸಂಘಟನೆಗಳಿಗೆ ಧನ್ಯವಾದಗಳು
ರಾಜೇಶ್ ಮಕಾಂದಾರ
ಪಿಎಸ್ಆರ್ ಮಾನವಹಕ್ಕು ಮತ್ತು ಬ್ರಷ್ಟಾಚಾರ ನಿರ್ಮೂಲನೆ ಸಂಘ ಸುರಪುರ ತಾಲ್ಲೂಕ ಅಧ್ಯಕ್ಷರು.

ರೈತರು ನೀರಿಗಾಗಿ ಹೋರಾಟ ಮಾಡಿದಂತೆ ನಮ್ಮ ಕಲ್ಯಾಣ ಕರ್ನಾಟಕದ ಶಿಕ್ಷಣದ ಅಭಿವೃದ್ಧಿಗಾಗಿ ನಮ್ಮ ಸರಕಾರಿ ಶಾಲೆಗಳ ಉಳಿವಿಗಾಗಿ ಗುಣಮಟ್ಟದ ಶಿಕ್ಷಣಕಾಗಿಯೂ ಸರಕಾರಿ ಶಾಲೆಗಳ ಹಾಜರಾತಿ ಹೆಚ್ಚಿಸುವ ಸಲುವಾಗಿ ಹೋರಾಟ ಮಾಡಬೇಕು
ಸಿಎಂ ಮಕಾಂದರ
ಜಿಲ್ಲಾ ನಿರ್ದೇಶಕರು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ.) ಯಾದಗಿರಿ ಜಿಲ್ಲಾ ಘಟಕ

ಬಸವಸಾಗರ ಜಲಾಶಯದ ಕಾಲುವೆಗಳಿಗೆ ನೀರು ಬಿಡುವ ವಿಚಾರ ರೈತರಲ್ಲಿ ಸಂತೋಷವುಂಟು ಮಾಡಿದೆ
ರೈತರು ರೈತರೊಂದಿಗೆ ಯಾವದೇ ತಂಟೆ ತಕರಾರು ಮಾಡದೆ ವೈಮನಸ್ಸು ಇಲ್ಲದೆ ರೈತರು ತಮ್ಮ ಜಮೀನುಗಳಿಗೆ ನೀರು ಬಿಟ್ಟುಕೊಳ್ಳಬೇಕು ಇದು ನಮಗೆ ಶಾಶ್ವತ ಪರಿಹಾರ ಅಲ್ಲಾ ಆದರು ರೈತರಿಗೆ ಕೊಂಚ ಸಂತೋಷ ನೀಡುವಂತಹ ಸುದ್ದಿ ಆಗಿದೆಸಿದ್ದಪ್ಪ ದೊಡಮನಿ
ಭೀಮ್ ಆರ್ಮಿ ಏಕತಾ ಮಿಷನ್ ಹುಣಸಗಿ ತಾಲ್ಲೂಕ ಅಧ್ಯಕ್ಷರು

