ಕರ್ನಾಟಕ ರಾಜ್ಯದ ವಿವಿಧ ನಿಗಮ-ಮಂಡಳಿಗಳಿಗೆ ಮೊದಲ ಮತ್ತು ಎರಡನೇ ಪಟ್ಟಿಯಲ್ಲಿ ಒಟ್ಟು 509 ನಾಮನಿರ್ದೇಶಕರ ಹೆಸರುಗಳನ್ನು ಪ್ರಕಟಿಸಲಾಗಿದೆ.
ಆದರೆ ಬೆಳಗಾವಿ ಜಿಲ್ಲೆ, ರಾಮದುರ್ಗ ತಾಲೂಕಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಒಂದೇ ಒಂದು ನಿಗಮ-ಮಂಡಳಿಯ ನಿರ್ದೇಶಕ ಸ್ಥಾನವೂ ಲಭಿಸದಿರುವುದು ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.
ಇದು ನಿರ್ಲಕ್ಷ್ಯವೇ? ಅಥವಾ ಅಧಿಕಾರ ಹಂಚಿಕೆಯಲ್ಲಿ ಪ್ರಾತಿನಿಧ್ಯ ನೀಡಲು ಮರೆತಿರುವುದೇ?
ರಾಮದುರ್ಗ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಪಕ್ಷದ ಗೆಲುವಿಗಾಗಿ ಮುಸ್ಲಿಂ ಸಮಾಜದ ಕಾರ್ಯಕರ್ತರು ಹಗಲು-ರಾತ್ರಿ ಶ್ರಮಿಸಿದ್ದಾರೆ. ಚುನಾವಣಾ ಪ್ರಚಾರದಿಂದ ಹಿಡಿದು ಪಕ್ಷದ ಪ್ರತಿಯೊಂದು ಚಟುವಟಿಕೆಯಲ್ಲೂ ಸಮಾಜದ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಆದರೆ ಅಧಿಕಾರ ಮತ್ತು ಅವಕಾಶಗಳ ಹಂಚಿಕೆಯ ಸಂದರ್ಭದಲ್ಲಿ ಮುಸ್ಲಿಂ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯದಿರುವುದು ಏಕೆ?
ನಮಗೆ ಭಿಕ್ಷೆ ಬೇಡ, ನ್ಯಾಯಯುತ ಪ್ರಾತಿನಿಧ್ಯ ಬೇಕು!
ನಮಗೆ ಅಧಿಕಾರದ ಪಾಲು ಬೇಕು, ನಮ್ಮ ಸಮಾಜದ ಹಕ್ಕು ಬೇಕು!
ಕಾಂಗ್ರೆಸ್ ಪಕ್ಷದ ನಾಯಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರಾಮದುರ್ಗ ತಾಲೂಕಿನ ಮುಸ್ಲಿಂ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂಬುದು ನಮ್ಮ ಆಗ್ರಹ.
ನಮ್ಮ ಧ್ವನಿಗೆ ಸ್ಪಂದಿಸಿ, ನಮ್ಮ ಸಮಾಜಕ್ಕೆ ನ್ಯಾಯಯುತ ಅವಕಾಶ ಕಲ್ಪಿಸಿ.
— ಶಫಿ ಬೆಣ್ಣಿ
ಕಾಂಗ್ರೆಸ್ ಮುಖಂಡರು
ಬೆಳಗಾವಿ ಕೆಎಂಯು ಜಿಲ್ಲಾಧ್ಯಕ್ಷರು
