ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದಲ್ಲಿ ಹಲವುಕಡೆ ವಿಶ್ವಕರ್ಮ ಜಯಂತಿ ಆಚರಣೆ

ಹುಕ್ಕೇರಿ :  ತಾಲೂಕಿನ ಗುಡಸ್ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು ಗುಡಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮ ಜಯಂತಿಯ ನಿಮಿತ್ತವಾಗಿ ಕುಡಿಯುವ ನೀರಿನ ಫಿಲ್ಟರ್ ಅನ್ನು ಜೋಡಿಸುವ ಮುಕಾಂತರ ವಿಶ್ವಕರ್ಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಇದೇ ರೀತಿಯಾಗಿ ಗ್ರಾಮದ ಶಾಸಕರ ಮತಕ್ಷೇತ್ರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮ ಜಯಂತಿ ದಿನವನ್ನು ಅತಿವಿಜೃಂಭಣೆಯಿಂದ ಆಚರಿಸಲಾಯಿತು ಅದೇ ರೀತಿಯಾಗಿ ಗುಡಸ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ(pkps) ನಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು ಪಿಕೆಪಿಎಸನ ಆಡಳಿತ ವರ್ಗದವರು ಎಲ್ಲಾ ಆಡಳಿತ ಮಂಡಳಿಯವರು ವಿಶ್ವಕರ್ಮ ಜಯಂತಿಯನ್ನು ಫೋಟೊಗೆ ಮಾಲೆ ಹಾಕುವ ಮುಕಾಂತರ ಜಯಂತಿಯನ್ನು ಆಚರಿಸಲಾಯಿತ್ತು ಈ ಸಂದರ್ಭದಲ್ಲಿ ವಿಶ್ವಕರ್ಮದ ಸಂಘಟನೆಯ ಸದಸ್ಯರಾದ ರವಿ ಬಡಿಗೇರ್. ಶ್ರೀಧರ್ ಬಡಿಗೇರ. ಪಕ್ಕು ಬಡಿಗೇರ್ . ಬಸವರಾಜ ಬಡಿಗೇರ್ .ಈರಪ್ಪ ಬಡಿಗೇರ ಹಾಗೂ ಪಿಕೆಪಿಎಸ್ ಆಡಳಿತ ವರ್ಗದವರು ಸರ್ವ ಸದಸ್ಯರು ಸೇರಿ ಜಯಂತಿಯನ್ನು ವಿಜೃಂಭಣೆಯಿಂದ ಗುಡಸ್ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ ಮತ್ತು ಮುದ್ದು ವಿದ್ಯಾರ್ಥಿ ವಿದ್ಯಾರ್ಥಿನಿಗಳು ಗ್ರಾಮದ ಗಣ್ಯಮಾನ್ಯರು ಉಪಸ್ಥಿತರಿದ್ದರು.

 

ವರದಿ ಸದಾನಂದ ಎಂ ಹೆಚ್