ಶ್ರೀ 1008 ಪಾಶ್ವನಾಥ ದಿಗಂಬರ್ ಜೈನ ಮಂದಿರ ಹಳ್ಳದಿಕೇರಿ ಹುಕ್ಕೇರಿ ಯಲ್ಲಿ ದಶ ಲಕ್ಷಣ ನೋಪಿ

ಹುಕ್ಕೇರಿ : ದಶ ಲಕ್ಷಣ ನೋಪಿ ಕಳೆದ 10 ವರ್ಷದಿಂದಾ ಮಾಡುತ್ತಿದ್ದಾರೆ 10ನೇ ದಿನದ ಮುಕ್ತಾಯದ ದಿನವಾದ ಇಂದು ಶ್ರೀ 1008 ಪಾಶ್ವನಾಥ್ ಹಾಗೂ 24 ತೀರ್ಥಂಕರ್ ಗಳಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ ಶ್ರಾವಕ ಶ್ರಾವಕಿಯರು ಹೆಣ್ಣು ಮಕ್ಕಳು ಆರತಿ ಹಿಡಿದು ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾದರೂ ಬೆಳಿಗ್ಗೆಯಿಂದ ಅತಿ ವಿಬ್ರಂಜನೆಯಿಂದ ಪೂಜಾ ವಿಧಾನಗಳು ಮಾಡಿ ಪುರೋಹಿತರಾದ ಶ್ರೀ ರಾಜು ಉಪಾದ್ಯ ಮಾಧ್ಯಮದವರೊಂದಿಗೆ ಮಾತನಾಡಿ ದಶಲಕ್ಷಣ ನೂಪಿ 10 ದಿನದ ವಿಶೇಷ ಅರ್ಥ ಇರುವುದರಿಂದ ಈ ಪೂಜೆ ಭಾದ್ರಪದ ಪಂಚಮಿ ತಿಥಿಯಿಂದ ದಶಲಕ್ಷಣ ಪರ್ವ ಪ್ರತಿ ಪದಾ ದಿಂದಾ ಚತುರ್ಥಿವರೆಗೆ ನೋಪಿ ವ್ರತ ಮಾಡಬೇಕಾಗುತ್ತದೆ.ಉತ್ತಮ ಕ್ಷೇಮ ಧರ್ಮ ಈ ತರ ಒಂದೊಂದು ದಿನಕ್ಕೆ ಒಂದೊಂದು ವಿಶೇಷ ಪೂಜೆ ಮತ್ತು ವೃತ ವಿಧಾನಗಳನ್ನು ಮಾಡಿ ಇಂದು ಸಮಾಪ್ತಿ ಮಾಡಿದರು… ನೊಪಿ ಶ್ರಾವಕ್ಕಿರಾದ ಶ್ರೀಮತಿ ಸಂಗೀತಾ ನಿಲಜಗಿ. ಶ್ರೀಮತಿ ಜ್ಯೋತಿ ಸೊಲ್ಲಾಪುರ. ಶ್ರೀಮತಿ ಮಂಜುಳಾ ಬೋಳೆ. ಶ್ರೀಮತಿ ಸುಮನ್ ಬಿಲ್. ಶ್ರೀಮತಿ ಶಾಂತಾ ಮುರುಗೋಡೆ. ಶ್ರೀಮತಿ ಜಯಶ್ರೀ ಪಾಟೀಲ್ ಇವರೆಲ್ಲರೂ ನೋಪಿಯ ವಿಶೇಷ ಪೂಜೆಯನ್ನು ಮಾಡಿದವರು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಚಂದ್ರಕಾಂತ್ ಪಾಟೀಲ್ ಉಪಾಧ್ಯಕ್ಷರಾದ ಸಂಜಯ್ ನೀಲಜಗಿ ಕಾರ್ಯದರ್ಶಿಯಾದ ಕಿರಣ್ ಸೊಲ್ಲಾಪುರೆ ಮತ್ತು ಶ್ರೀ 1008 ಪಾಶ್ವನಾಥ ದಿಗಂಬರ್ ಜೈನ್ ಮಂದಿರ ಸರ್ವ ಸದಸ್ಯರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು

 

ವರದಿ/ಸದಾನಂದ